Wednesday, 11th December 2024

Viral Video: ಮೊಸಳೆ ಬಾಯಿಗೆ ಕೈಹಾಕಿದ ಸ್ಟಂಟ್ ಮ್ಯಾನ್! ಮುಂದೇನಾಯ್ತು? ವಿಡಿಯೊ ನೋಡಿ

Viral Video

ಮೊಸಳೆಗಳು (Crocodile) ಯಾವಾಗ, ಯಾರ ಮೇಲೆ, ಹೇಗೆ ಆಕ್ರಮಣ ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಮೊಸಳೆ ಸಮೀಪ ಹೋಗಲು ಹೆದರುತ್ತಾರೆ. ಆದರೆ ಇಲ್ಲೊಬ್ಬ ಮೊಸಳೆ ಬಾಯಿಗೆ ಕೈ ಹಾಕಿದ್ದಾನೆ. ಮುಂದೇನಾಯಿತು ಗೊತ್ತೇ? ಇದರ ವೈರಲ್ ವಿಡಿಯೋ (Viral Video) ಈಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ.

ಹೆಚ್ಚಿನವರು ಸರಿಸೃಪಗಳಿಗೆ ಹೆದರುತ್ತಾರೆ. ಅದು ಹಾವು ಅಥವಾ ಮೊಸಳೆಯಾಗಿರಬಹುದು. ಆದರೆ ಇಲ್ಲೊಬ್ಬ ನೇರವಾಗಿ ಮೊಸಳೆಯ ಬಾಯಿಗೇ ಕೈ ಹಾಕಲು ಹೋಗಿದ್ದಾನೆ. ಮೊಸಳೆಗಳು ತಮ್ಮ ಬೇಟೆಗಾಗಿ ಹೊಂಚು ಹಾಕುತ್ತಲೇ ಇರುತ್ತವೆ. ಅದು ಸುಮ್ಮನೆ ಇದ್ದು, ಬೇಟೆ ಸಿಗುವುದು ಖಚಿತ ಎಂದೆನಿಸಿದಾಗ ಇದ್ದಕ್ಕಿದ್ದಂತೆ ದಾಳಿ ಮಾಡುತ್ತವೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಸ್ಟೇಡಿಯಂವೊಂದರಲ್ಲಿ ಚಿತ್ರೀಕರಿಸಲಾಗಿದೆ. ಸುತ್ತ ನೆರೆದಿರುವವರ ಅಸಂಖ್ಯಾತ ಜನರು ಮುಂದೇನಾಗುತ್ತದೋ ಎನ್ನುವ ಭಯದಿಂದ ನೋಡುವಂತೆ ಮಾಡಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೊಸಳೆಯ ಮುಂದೆ ಕುಳಿತಿರುತ್ತಾನೆ. ಅದು ಬಾಯಿ ತೆರೆದು ತನ್ನ ಬೇಟೆಗಾಗಿ ಕಾಯುತ್ತಿರುತ್ತದೆ. ವ್ಯಕ್ತಿ ಮೊದಲು ಅದರ ಮೂಗಿನ ಮೇಲೆ ಕೈಯಿಂದ ತಟ್ಟುತ್ತಾನೆ. ಬಳಿಕ ತನ್ನ ಕೈಯನ್ನು ಅದರ ಬಾಯಿಯ ಮುಂದೆ ಇಡುತ್ತಾನೆ. ಅಷ್ಟರಲ್ಲಿ ಅದು ವ್ಯಕ್ತಿಯ ಕೈಯನ್ನು ಕಚ್ಚುತ್ತದೆ. ಆದರೆ ತಕ್ಷಣ ಬಿಟ್ಟು ಬಿಡುತ್ತದೆ. ಕೂಡಲೇ ಆ ವ್ಯಕ್ತಿ ಅಲ್ಲಿಂದ ಎದ್ದು ಹೋಗುತ್ತಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ 42.8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. 74,2000 ಲೈಕ್‌ಗಳನ್ನು ಗಳಿಸಿದೆ.

ಸ್ಟಂಟ್ ಮಾಡಲು ಪ್ರಯತ್ನಿಸುತ್ತಿರುವಾಗ ಮೊಸಳೆಯೊಂದು ಇದೇ ರೀತಿ ದಾಳಿ ನಡೆಸಿದೆ. ಈ ವಿಡಿಯೋವನ್ನು ಎಕ್ಸ್ ನಲ್ಲಿ ಪ್ರಸಾರ ಮಾಡಲಾಗಿದೆ. ಮೊಸಳೆಯೊಂದು ಬಾಯಿ ತೆರೆದುಕೊಂಡು ಕುಳಿತಿದ್ದಾಗ ವ್ಯಕ್ತಿಯೊಬ್ಬ ಸಾಹಸ ಮಾಡಲು ಪ್ರಯತ್ನಿಸಿದ. ಪ್ರಾಣಿಯ ಬಾಯಿಯಲ್ಲಿ ತನ್ನ ಕೈ ಸಿಕ್ಕಿಕೊಂಡಾಗ ಸ್ಟಂಟ್ ಎಡವಟ್ಟಾಗಿತ್ತು.

Viral Video: ಗಂಡನನ್ನೇ ಮನೆ ಕೆಲಸದವ ಅಂದುಕೊಂಡ ಪತ್ನಿ ಹೇಳಿದ್ದೇನು ಗೊತ್ತಾ? ವಿಡಿಯೊ ನೋಡಿ

ಅನೇಕರು ಈ ಬಗ್ಗೆ ಕಮೆಂಟ್‌ ವಿಭಾಗದಲ್ಲಿ ಪ್ರತಿಕ್ರಿಯಿಸಿದ್ದಾರೆ. ಮೊಸಳೆ ತನ್ನ ಕೈ ಬಿಟ್ಟಿದ್ದಕ್ಕೆ ಆ ವ್ಯಕ್ತಿ ಖುಷಿ ಪಡಬೇಕು ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ಆತನ ಧೈರ್ಯವನ್ನು ಶ್ಲಾಘಿಸಿದ್ದಾರೆ. ಇನ್ನೊಬ್ಬರು ಅಪಾಯಕಾರಿ ಪ್ರಾಣಿಗಳೊಂದಿಗೆ ಆಟವಾಡಬೇಡಿ ಎಂದು ಹಿತವಚನ ನೀಡಿದ್ದಾರೆ.