ಮಧ್ಯಪ್ರದೇಶದ ಜಬಲ್‌ಪುರ ನಿಜಾಮುದ್ದೀನ್ ಎಕ್ಸ್ ಪ್ರೆಸ್ (Jabalpur Nizamuddin Express) ಕೋಚ್‌ನ ಚಾವಣಿಯಿಂದ ನೀರು ಸೋರಿಕೆಯಾಗುತ್ತಿರುವ (water leakage) ವಿಡಿಯೋವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್ (congress) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣವಾದ (Social Media) ಎಕ್ಸ್ ನಲ್ಲಿ (x) ಭಾರಿ ವೈರಲ್ (Viral Video) ಆಗಿದೆ.
ಜಬಲ್‌ಪುರ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಕೋಚ್‌ನ ಮೇಲಿನ ಚಾವಣಿಯಿಂದ ನೀರು ಸೋರಿಕೆಯಾಗುತ್ತಿರುವುದಕ್ಕೆ ಕಾಂಗ್ರೆಸ್ ರೈಲಿನಲ್ಲಿ ಜಲಪಾತದ ಸೌಲಭ್ಯವಿದೆ ಎಂಬುದಾಗಿ ವ್ಯಂಗ್ಯವಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿ ರೈಲ್ವೇ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ದೂರನ್ನು ಸ್ವೀಕರಿಸಲಾಗಿದೆ. ಇದರ ಮೇಲ್ವಿಚಾರಣಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
रील मंत्री जी, क्या बात है!!
— Congress (@INCIndia) September 9, 2024
आपने तो यात्रियों को ट्रेन में झरने की सुविधा दे दी।
ये अनोखा झरना जबलपुर निज़ामुद्दीन एक्सप्रेस में देखा गया।
लोग यात्रा भी करें और झरने का मजा भी लें।
शानदार, ज़बरदस्त, ज़िंदाबाद pic.twitter.com/1NQvkOYYGh
ವೈರಲ್ ಆಗಿರುವ ವಿಡಿಯೋದಲ್ಲಿ ರೈಲು ಕೋಚ್‌ನ ಚಾವಣಿಯ ಮೇಲಿನ ತೆರಪಿನಿಂದ ನೀರು ಸೋರಿಕೆಯಾಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಸೋಮವಾರ ಜಬಲ್‌ಪುರ- ನಿಜಾಮುದ್ದೀನ್ ಎಕ್ಸ್‌ಪ್ರೆಸ್ 22181 ಕೋಚ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಪಶ್ಚಿಮ ಮಧ್ಯ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಹರ್ಷಿತ್ ಶ್ರೀವಾಸ್ತವ ತಿಳಿಸಿದ್ದಾರೆ. ಮಾಹಿತಿ ಬಂದ ತಕ್ಷಣ ಅಧಿಕಾರಿಗಳು ಮಧ್ಯಪ್ರದೇಶದ ದಾಮೋಹ್, ಸಾಗರ್, ಉತ್ತರ ಪ್ರದೇಶದ ಝಾನ್ಸಿಯಲ್ಲಿ ದೂರನ್ನು ಸ್ವೀಕರಿಸಿದ್ದಾರೆ ಎಂದು ಅವರು ಹೇಳಿದರು.
ರೈಲು ನವ ದೆಹಲಿಯ ಹಜರತ್ ನಿಜಾಮುದ್ದೀನ್ ತಲುಪಿದ ಅನಂತರ, ಅದರ ದುರಸ್ತಿ ಕಾರ್ಯವನ್ನು ಮಾಡಲಾಗುತ್ತಿದೆ. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಕೋಚ್ ಅನ್ನು ಬಳಸಲಾಗುವುದಿಲ್ಲ. ಇದಕ್ಕೆ ಕಾರಣರಾದ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Namma Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ; ವಾಣಿಜ್ಯ ಸೇವೆ ಆರಂಭ ಯಾವಾಗ?
ಈ ನಡುವೆ ಕಾಂಗ್ರೆಸ್ ಸೋಮವಾರ ತನ್ನ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ರೈಲ್ವೇಸ್ “ರೈಲಿನಲ್ಲಿ ಜಲಪಾತ” ಸೌಲಭ್ಯವನ್ನು ನೀಡಿದೆ ಎಂದು ಹೇಳಿದೆ. ಕಾಂಗ್ರೆಸ್‌ನ ಪೋಸ್ಟ್‌ಗೆ ಉತ್ತರಿಸಿದ ಜಬಲ್‌ಪುರ ವಿಭಾಗೀಯ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ದೂರು ಸ್ವೀಕರಿಸಿದ ಅನಂತರ ಡಿಎಂಒ ಮತ್ತು ಎಸ್‌ಜಿಒ ನಿಲ್ದಾಣದಲ್ಲಿ ಹೆಚ್ಚಿನ ಆದ್ಯತೆಯ ಮೇಲೆ ವ್ಯವಹರಿಸಲಾಗಿದೆ ಎಂದು ಹೇಳಿದರು.