Tuesday, 5th November 2024

Viral Video: ರೈಲಿನಲ್ಲಿ ಆರಾಮವಾಗಿ ನಿದ್ದೆ ಮಾಡಲು ಇವರು ಮಾಡಿದ್ದೇನು ನೋಡಿ!

Viral Video

ರೈಲಿನ ಮೇಲಿನ ಎರಡು ಸೀಟುಗಳ ಮಧ್ಯೆ ನೇಯ್ಗೆ ಮಾಡಿ ಜೋಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಹೆಚ್ಚು ಜನಸಂದಣಿ ಹೊಂದಿದ್ದ ರೈಲಿನಲ್ಲಿ ಪ್ರಯಾಣಿಕರು ಇದನ್ನು ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸೋಮವಾರ ಪೋಸ್ಟ್ ಮಾಡಿರುವ ವಿಡಿಯೊ ಭಾರಿ ವೈರಲ್ ಆಗಿದ್ದು, ಸಾವಿರಾರು ಮಂದಿ ಇದನ್ನು ವೀಕ್ಷಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಮೇಲಿನ ಎರಡು ಬರ್ತ್‌ಗಳಲ್ಲಿ ಆರಾಮದಾಯಕವಾಗಿ ವಿಶ್ರಾಂತಿ ಪಡೆಯಲು ಮಧ್ಯೆ ಹಗ್ಗದಿಂದ ನೇಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ತಾತ್ಕಾಲಿಕವಾಗಿ ಆರಾಮ ಪಡೆಯಲು ‘ಧೋತಿ’ ಅಥವಾ ಸೀರೆಯನ್ನು ಬಳಸುವ ಬದಲು ಈ ವ್ಯಕ್ತಿ ಎರಡು ಸೀಟುಗಳನ್ನು ಜೋಡಿಸಿದ್ದಾನೆ. ಬರ್ತ್ ಮಧ್ಯೆ ನೇಯ್ಗೆ ಮಾಡುತ್ತಿರುವ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ರೈಲಿನ ಮೇಲಿನ ಎರಡು ಸೀಟುಗಳ ಮಧ್ಯೆ ನೇಯ್ಗೆ ಮಾಡಿ ಜೋಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಚ್ಚು ಜನಸಂದಣಿ ಹೊಂದಿದ್ದ ರೈಲಿನಲ್ಲಿ ಪ್ರಯಾಣಿಕರು ಇದನ್ನು ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಎಕ್ಸ್ ನಲ್ಲಿ ಸೋಮವಾರ ಪೋಸ್ಟ್ ಮಾಡಿರುವ ವಿಡಿಯೋ ಭಾರಿ ವೈರಲ್ ಆಗಿದ್ದು, ಸಾವಿರಾರು ಮಂದಿ ಇದನ್ನು ವೀಕ್ಷಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಮೇಲಿನ ಎರಡು ಬರ್ತ್‌ಗಳಲ್ಲಿ ಆರಾಮದಾಯಕವಾಗಿ ವಿಶ್ರಾಂತಿ ಪಡೆಯಲು ಮಧ್ಯೆ ಹಗ್ಗದಿಂದ ನೇಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ತಾತ್ಕಾಲಿಕವಾಗಿ ಆರಾಮ ಪಡೆಯಲು ‘ಧೋತಿ’ ಅಥವಾ ಸೀರೆಯನ್ನು ಬಳಸುವ ಬದಲು ಈ ವ್ಯಕ್ತಿ ಎರಡು ಸೀಟುಗಳನ್ನು ಜೋಡಿಸಿದ್ದಾನೆ. ಬರ್ತ್ ಮಧ್ಯೆ ನೇಯ್ಗೆ ಮಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಸಾಮಾನ್ಯವಾಗಿ ಟಿಕೆಟ್ ರಹಿತ ಪ್ರಯಾಣಿಕರು ರೈಲಿನಲ್ಲಿ ಉಂಟು ಮಾಡುವ ಅವ್ಯವಸ್ಥೆಯ ಕುರಿತು ಕೆಲವು ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಈ ವಿಡಿಯೋದಲ್ಲೂ ನೇಯ್ಗೆ ಮಾಡುತ್ತಿರುವ ಪ್ರಯಾಣಿಕರು ದೃಢೀಕರಿಸಿದ ಬರ್ತ್ ಹೊಂದಿಲ್ಲ. ಎರಡು ಮೇಲಿನ ಬರ್ತ್‌ಗಳ ನಡುವೆ ಹಾಸಿಗೆಯನ್ನು ನೇಯುವ ಮೂಲಕ ಇವರು ತಮಗಾಗಿ ವಿಶ್ರಾಂತಿ ಸ್ಥಳವನ್ನು ಸಿದ್ಧಪಡಿಸುತ್ತಿದೆ ಎನ್ನಲಾಗುತ್ತಿದೆ.

ಉದ್ದವಾದ ಹಗ್ಗವನ್ನು ಬಳಸಿ ಅವರು ಹಾಸಿಗೆಯನ್ನು ನಿರ್ಮಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಗಜು ಗಾಡೆ ಎಂಬವರು ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇನ್ನು ರೈಲುಗಳಲ್ಲಿ ಸೀಟುಗಳ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ರೈಲ್ವೇಯು 7,000 ವಿಶೇಷ ರೈಲುಗಳನ್ನು ಓಡಿಸಿದರೂ ಹೆಚ್ಚುವರಿ ಸೀಟಿಗಾಗಿ ತೊಂದರೆ ಅನುಭವಿಸಬೇಕಿಲ್ಲ. ಯಾಕೆಂದರೆ ಈ ವ್ಯಕ್ತಿ ಎಕ್ಸ್ಟ್ರಾ ಸೀಟಿಗಾಗಿ ವ್ಯವಸ್ಥೆ ಮಾಡಿಕೊಂಡಿದ್ದಾನೆ ಎಂದು ಶೀರ್ಷಿಕೆಯಲ್ಲಿ ಹೇಳಿದ್ದು ಮಾತ್ರವಲ್ಲದೆ “ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳು ಬೇಕಾಗುತ್ತವೆ” ಎಂದು ಹೇಳಿದ್ದಾರೆ.

ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಸಾಕಷ್ಟು ಮಂದಿ ಇದಕ್ಕೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಒಬ್ಬರು ಕಾಮೆಂಟ್ ನಲ್ಲಿ ಸಾರ್ವಜನಿಕ ಸಾರಿಗೆಯ ಬರ್ತ್‌ಗಳು ಅಥವಾ ಯಾವುದೇ ಇತರ ಸೌಲಭ್ಯಗಳನ್ನು ಮಾರ್ಪಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

Viral Video: ಮಲಗಿದ್ದ ಹುಡುಗಿಯ ಮುಖ ಸೀಳಿದ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್!

ಇನ್ನೊಬ್ಬರು, ಸಹೋದರ, ನೀವು ಏನು ಆವಿಷ್ಕಾರ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಇದು ಒಳ್ಳೆಯದು. ಇದನ್ನು ಸ್ಥಳೀಯ ರೈಲಿನಲ್ಲಿಯೂ ಮಾಡಬೇಕು ಎಂದು ಹೇಳಿದ್ದಾರೆ.