Thursday, 19th September 2024

Viral Video: ಹಾವಿಗೆ ಮುತ್ತು ಕೊಡಲು ಹೋದವನಿಗೆ ಏನಾಯ್ತು ನೋಡಿ!

Viral Video

ರೀಲ್ಸ್ ಗಾಗಿ (reels) ಕೆಲವರು ಎಂತಹ ಸವಾಲುಗಳನ್ನು ಬೇಕಾದರೂ ಎದುರಿಸಲು ಸಿದ್ಧರಾಗಿರುತ್ತಾರೆ. ಇದರಿಂದ ಕೆಲವೊಮ್ಮೆ ಪ್ರಾಣಾಪಾಯಕ್ಕೆ ಸಿಲುಕುವುದೂ ಇದೆ. ಇಂತಹ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗುತ್ತಿರುತ್ತದೆ. ಇದೇ ರೀತಿ ಇಲ್ಲೊಬ್ಬ ಹಾವಿಗೆ ಮುತ್ತು ನೀಡಲು ಹೋಗಿ ಸಮಸ್ಯೆಗೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ವ್ಯಕ್ತಿಯು ಭಾರಿ ಗಾತ್ರದ ಹಾವಿಗೆ ಮುತ್ತು ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಹಾಕಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣವಾದ ಇನ್ ಸ್ಟಾ ಗ್ರಾಮ್ ನಲ್ಲಿ ವೈರಲ್ ಆಗಿದೆ. ಮುತ್ತು ನೀಡಲು ಹೋದವನ ಬಾಯಿಯನ್ನೇ ಹಾವು ತನ್ನ ಬಾಯಿಯೊಳಗೆ ಹಿಡಿದುಕೊಂಡಿದೆ. ಅದರಿಂದ ಬಿಡಿಸಿಕೊಳ್ಳಲು ವ್ಯಕ್ತಿ ಪರದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವನ್ಯಜೀವಿಗಳನ್ನು ಹತ್ತಿರದಿಂದ ನಿರ್ವಹಿಸುವಾಗ ಎದುರಾಗಬಹುದಾದ ಅಪಾಯದ ಬಗ್ಗೆ ಈ ವಿಡಿಯೋ ಎಚ್ಚರಿಕೆ ನೀಡುವಂತಿದೆ. ವಿಡಿಯೋದಲ್ಲಿ ವ್ಯಕ್ತಿ ಹಾವಿನೊಂದಿಗೆ ಫೋಟೋಗೆ ಪೋಸ್ ನೀಡಲು ಹೋಗಿದ್ದಾನೆ. ಹಾವಿನ ಬಾಯಿ ಸಮೀಪ ತನ್ನ ಮುಖವನ್ನು ಹಿಡಿದಿದ್ದಾನೆ. ಆದರೆ ಹಾವು ಏಕಾಏಕಿ ಆತನ ಮೇಲೆ ದಾಳಿ ನಡೆಸಿದೆ. ಆತನ ಬಾಯಿಯನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡಿದೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾವಿನ ಬಾಯಿಯಲ್ಲಿ ಸಿಕ್ಕಿಕೊಂಡ ವ್ಯಕ್ತಿ ಅದರಿಂದ ಬಿಡಿಸಿಕೊಳ್ಳಲು ಹರಸಾಹಸ ಪಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ದೃಶ್ಯ ಭಯ ಹುಟ್ಟಿಸುವಂತಿದೆ. ಹಾವಿನಿಂದ ವ್ಯಕ್ತಿ ತನ್ನನ್ನು ತಾನು ರಕ್ಷಿಕೊಂಡನೇ ಎಂಬುದು ತಿಳಿದುಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇದು ಚರ್ಚೆಗೆ ಕಾರಣವಾಗಿದೆ.

ಈ ವಿಡಿಯೋ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಪ್ರಾಣಿಗಳನ್ನು ನಿರ್ವಹಿಸುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಅನೇಕರು ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕೆಲವರು ಅಪಾಯದ ನಡವಳಿಕೆಯನ್ನು ಖಂಡಿಸಿದ್ದಾರೆ. ಪ್ರಾಣಿಗಳೊಂದಿಗೆ ಅದರಲ್ಲೂ ಮುಖ್ಯವಾಗಿ ಹಾವುಗಳೊಂದಿಗೆ ನಾವು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಅವುಗಳು ಅನಿರೀಕ್ಷಿತವಾಗಿ ದಾಳಿಯನ್ನು ನಡೆಸುತ್ತವೆ. ಇದರಿಂದ ಜೀವ ಹಾನಿಯಾಗುವ ಅಪಾಯವಿದೆ ಎಂದು ಹೇಳಿದ್ದಾರೆ.

Viral News: ಬಿಜೆಪಿ ಮುಖಂಡನ ಬೆದರಿಕೆ; ಉನ್ನತ ಅಧಿಕಾರಿಗಳ ಮುಂದೆಯೇ ಸಮವಸ್ತ್ರ ಕಳಚಿದ ಎಎಸ್‌ಐ: ವಿಡಿಯೊ ಇಲ್ಲಿದೆ

ಇದನ್ನು ಲಘುವಾಗಿ ಪರಿಗಣಿಸಬಾರದು ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು ಇದು ಹಾಸ್ಯಾತ್ಮಕವಾಗಿದೆ. ಆದರೆ ಕಾಡು ಜೀವಿಗಳನ್ನು ಸಮೀಪಿಸುವಾಗ ಉಂಟಾಗುವ ಅಪಾಯಗಳಲ್ಲಿ ಒಂದನ್ನು ಸಂಪೂರ್ಣವಾಗಿ ಮುಂದಿಟ್ಟಿದೆ ಎಂದು ತಿಳಿಸಿದ್ದಾರೆ. ವನ್ಯಜೀವಿಗಳ ಸರಿಯಾದ ನಿರ್ವಹಣೆಯಲ್ಲಿ ಸುರಕ್ಷತೆಯ ಅಗತ್ಯವನ್ನು ತಿಳಿಸುವ ವಿಡಿಯೋ ವಿಸ್ಮಯ ಮತ್ತು ಎಚ್ಚರಿಕೆಯ ವಿಷಯವಾಗಿದೆ ಎಂದು ಇನ್ನು ಕೆಲವರು ತಿಳಿಸಿದ್ದಾರೆ

Leave a Reply

Your email address will not be published. Required fields are marked *