Thursday, 24th October 2024

Viral Video: ಪ್ರಧಾನಿಯಿಂದ ಉದ್ಘಾಟನೆ ಬೆನ್ನಲ್ಲೇ ವಂದೇ ಭಾರತ್‌ ರೈಲಿನಲ್ಲಿ ಬಿಜೆಪಿಗರ ದುರ್ವರ್ತನೆ- ಮಹಿಳೆ ಆರೋಪ!

Viral Video

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು 3 ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ರೈಲಿಗೆ ಚಾಲನೆ ನೀಡಿರುವ ಕೆಲವೇ ಗಂಟೆಗಳಲ್ಲಿ ರೈಲಿನೊಳಗೆ ಬಿಜೆಪಿ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ  ಪೋಸ್ಟ್‌ ಮಾಡಿರುವ ಮಹಿಳೆ ವಿಡಿಯೋ ವೈರಲ್‌(Viral Video) ಆಗುತ್ತಿದೆ. ಇನ್ನು ಮೀರತ್‌-ಲಕ್ನೋ ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

 ಘಟನೆ ವಿವರ:

ಆಹಾರ ಪಡೆಯಲು ರೈಲಿನ ಬೋಗಿಯಿಂದ ಬೋಗಿಗೆ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಮಹಿಳೆ ಹೇಳಿದ್ದಾಳೆ. ಒಂದು ಕ್ಯಾಬಿನ್ ಅನ್ನು ಬಿಜೆಪಿ ಸದಸ್ಯರಿಗೆ ಮೀಸಲಿಡಲಾಗಿದೆ ಮತ್ತು ಅವರಿಗೆ ಹಾದುಹೋಗಲು ಅವಕಾಶವಿಲ್ಲ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಆಕೆಯನ್ನು ತಡೆದಿದ್ದಾನೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಮಹಿಳೆ ನಡುವೆ ವಾಗ್ವಾದ ನಡೆದಿದೆ. ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದು ಮಾತ್ರವಲ್ಲದೇ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ಪದೇ ಪದೆ ಕ್ಯಾಬಿನ್‌ಗೆ ಏಕೆ ಪ್ರವೇಶಿಸುತ್ತೀರಿ ಎಂದು ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದ್ದು, ಅನೇಕರು ಕಮೆಂಟ್‌ ಮಾಡಿ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಕೂಡ ಈ ವಿಡಿಯೋವನ್ನು ಪೋಸ್ಟ್‌ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದೆ. ಇದು ನಿಜಕ್ಕೂ ದುರ್ವರ್ತನೆ. ರೈಲು ಸಾರ್ವಜನಿಕ ವಸ್ತು. ಬಿಜೆಪಿಯ ವೈಯಕ್ತಿಕ ಸ್ವತ್ತಲ್ಲ. ಈ ಘಟನೆ ಬಿಜೆಪಿ ನಿಜವಾದ ಮುಖ, ನಿಲುವವನ್ನು ಬಯಲು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿhttps://x.com/INCIndia/status/1829800531411272104

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು (ಆಗಸ್ಟ್‌ 31) 3 ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಕರ್ನಾಟಕ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಓಡಾಡಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಈಗಾಗಲೇ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆದ್ದು, ದೇಶದ 280ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿವೆ. ಈ ಸಾಲಿಗೆ ಮತ್ತೂ 3 ರೈಲುಗಳು ಸೇರ್ಪಡೆಯಾಗಲಿವೆ.

ಯಾವ ಮಾರ್ಗಗಳಲ್ಲಿ ಸಂಚಾರ?

ಮಧುರೈಯಿಂದ ಬೆಂಗಳೂರು ಕಂಟೋನ್ಮೆಂಟ್, ಚೆನ್ನೈ ಸೆಂಟ್ರಲ್‌ನಿಂದ ನಾಗರಕೋಯಿಲ್‌ ಮತ್ತು ಮೀರತ್ ನಗರದಿಂದ ಲಕ್ನೋವರೆಗೆ ಈ 3 ರೈಲುಗಳು ಓಡಾಟ ನಡೆಸಲಿವೆ.  ಈ 3 ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.