ನವದೆಹಲಿ: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗ್ಬೇಕು ಅನ್ನೋ ಆತುರದಲ್ಲಿ ಕೆಲವೊಮ್ಮೆ ಎಡವಟ್ಟು ಮಾಡಿಕೊಳ್ಳುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೊ ಭಾರೀ ವೈರಲ್ ಆಗುತ್ತಿದೆ. ‘ಕಾಳಿ ಮಾತಾ’ ವೇಷ ಧರಿಸಿದ ಮಹಿಳೆಯೊಬ್ಬರು ಬೀದಿ ಬದಿ ಫುಡ್ ಕೌಂಟರ್ ಬಳಿ ನಿಂತು ‘ಪಾನಿಪುರಿ’ ತಿಂದು ಆನಂದಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರು ಮಹಿಳೆ ಮೇಲೆ ಕಿಡಿಕಾರಿದ್ದಾರೆ.
ವೈರಲ್ ವಿಡಿಯೊದಲ್ಲಿ ಕಾಳಿ ಮಾತೆಯ ವೇಷದಲ್ಲಿರುವ ಮಹಿಳೆ ಪಾನಿಪುರಿ ಅಂಗಡಿಯ ಬಳಿ ನಿಂತು ಪ್ಲೇಟ್ ಹಿಡಿದುಕೊಂಡು ಪಾನಿಪುರಿ ತಿಂದಿದ್ದಾರೆ. ಇದನ್ನು ಅಲ್ಲಿದ್ದವರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೊಡಿದ ನೆಟ್ಟಿಗರಲ್ಲಿ ಕೆಲವರು ಈ ವಿಷಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಈ ಕೃತ್ಯವನ್ನು ಖಂಡಿಸಿದ್ದಾರೆ.
ಜಯಾ ಜೆರ್ರಿ ಎಂಬುವವರು ಈ ವಿಡಿಯೊವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಕೆಲವು ನೆಟ್ಟಿಗರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಕೆಲವರು ನಕರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ‘’ಹಾರ್ಟ್’ ಎಮೋಜಿಗಳನ್ನು ಹಾಕುವುದರ ಜೊತೆಗೆ “ಜೈ ಮಹಾಕಾಳಿ” ಘೋಷಣೆಗಳೊಂದಿಗೆ ರೀಲ್‍ಗೆ ಪ್ರತಿಕ್ರಿಯಿಸಿದ್ದಾರೆ, ಅನೇಕ ನೆಟ್ಟಿಗರು ದೇವಿ ಪಾನಿಪುರಿ ತಿನ್ನುವುದನ್ನು ತೋರಿಸುವುದು ಸರಿಯಲ್ಲ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪೊಲೀಸ್ ವಾಹನ; ಮುಂದೇನಾಯ್ತು? ವಿಡಿಯೊ ಇದೆ
“ನೀವು ದೇವರನ್ನು ಏಕೆ ಗೇಲಿ ಮಾಡುತ್ತಿದ್ದೀರಿ… ದಯವಿಟ್ಟು ಪೋಸ್ಟ್ ಅನ್ನು ಅಳಿಸಿ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಇದೆಲ್ಲವನ್ನೂ ಮಾಡುವುದನ್ನು ನಿಲ್ಲಿಸಿ. ನೀವು ಏನು ಯೋಚಿಸುತ್ತೀರಿ? ಸ್ವಲ್ಪ ನಾಚಿಕೆಯಾಗಬೇಕು” ಎಂದು ಇನ್ನೊಬ್ಬರು ಬರೆದಿದ್ದಾರೆ. ಅದರ ಜೊತೆಗೆ ಕೆಲವರು ವೈರಲ್ ವಿಡಿಯೊಗೆ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. “ಏನು ವಿಷಯ, ತಾಯಿ ಕೂಡ ಗೋಲ್ಗಪ್ಪಗಳನ್ನು ತಿನ್ನುತ್ತಿದ್ದಾರೆ” ಎಂದು ಒಬ್ಬರು ಬರೆದಿದ್ದಾರೆ. “ಪಾನಿ ಪುರಿಯನ್ನು ಹುಡುಗಿಯರು ಇಷ್ಟಪಡುತ್ತಾರೆ ಮತ್ತು ಇಲ್ಲಿ ಮಾತಾ ರಾಣಿ ಕೂಡ ಇದನ್ನು ಇಷ್ಟಪಡುತ್ತಾರೆ” ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.