ನವದೆಹಲಿ: ಈ ಹಿಂದೆ ಮಹಿಳೆಯೊಬ್ಬಳು ಕಾರಿನಲ್ಲಿ ಬಂದು ಹೂವಿನ ಗಿಡದ ಪಾಟ್ ಅನ್ನು ಕಳ್ಳತನ ಮಾಡಿರುವ ಸುದ್ದಿ ಭಾರೀ ಸುದ್ದಿಯಾಗಿತ್ತು. ಇದೀಗ ಮತ್ತೆ ಅಂತಹದ್ದೇ ಒಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು ಮನೆಯ ಹೊರಗೆ ಇರಿಸಲಾದ ಸಣ್ಣ ಹೂವಿನ ಗಿಡದ ಪಾಟ್ ಕದ್ದು ಅದನ್ನು ತನ್ನ ಸ್ಕೂಟರ್ನಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಈ ವಿಡಿಯೊದಲ್ಲಿ, ಸ್ಕೂಟರ್ನಲ್ಲಿ ಬಂದ ಮಹಿಳೆಯೊಬ್ಬರ ಕಣ್ಣು ಮನೆಯ ಗೇಟ್ನ ಬಳಿ ಇಟ್ಟ ಹೂವಿನ ಗಿಡಗಳ ಮೇಲೆ ಬಿದ್ದಿದೆ. ಇದ್ದಕ್ಕಿದ್ದಂತೆ, ಅವಳು ಆ ಮನೆಯ ಮುಂದೆ ತನ್ನ ಸ್ಕೂಟರ್ ನಿಲ್ಲಿಸಿ ಕೆಳಗಿಳಿದು ಮನೆಯ ಹೊರಗಿಟ್ಟಿದ್ದ ಹೂವಿನ ಗಿಡದ ಪಾಟ್ಗಳಲ್ಲಿ ಒಂದನ್ನು ಎತ್ತಿಕೊಂಡು ತನ್ನ ಸ್ಕೂಟರ್ನಲ್ಲಿಟ್ಟುಕೊಂಡು ಹೋಗಿದ್ದಾಳೆ. ಈ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
A Lady On Scooter Got Caught stealing Flowers pots in Broad Day-Light pic.twitter.com/CKj4ax7cRE
— Ghar Ke Kalesh (@gharkekalesh) December 16, 2024
ಒಂದು ತಿಂಗಳ ಹಿಂದೆ ಬಿಎಂಡಬ್ಲ್ಯೂ ಕಾರಿನಲ್ಲಿದ್ದ ಮಹಿಳೆಯೊಬ್ಬರು ನೊಯ್ಡಾದಲ್ಲಿ ಹೊರಗೆ ಇರಿಸಲಾದ ಹೂವಿನ ಗಿಡದ ಪಾಟ್ ಅನ್ನು ಕದ್ದ ಘಟನೆಯ ನಂತರ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ಹೂಕುಂಡಗಳನ್ನು ಕದಿಯಲು ಮಹಿಳೆಯರಿಗೆ ಏನಾಗಿದೆ? ಈ ಹೂವಿನ ಕುಂಡಗಳನ್ನು ಅವರು ಏನು ಮಾಡುತ್ತಾರೆ?” ಎಂದು ನೆಟ್ಟಿಗರೊಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
“ಇದು ಭಾರತದಲ್ಲಿ ಹೊಸ ಬೆಳವಣಿಗೆ. ಇತ್ತೀಚೆಗೆ ಗಿಡ ಕಳ್ಳತನದ ಅನೇಕ ಪ್ರಕರಣಗಳು ನಡೆದಿವೆ” ಎಂದು ಇನ್ನೊಬ್ಬರು ಹೇಳಿದರೆ, ಮೂರನೆಯವರು “ಅವಳು ಸ್ಕೂಟಿ ಮತ್ತು ಪೆಟ್ರೋಲ್ ಖರೀದಿಸಲು ಶಕ್ತರಿರುವವರಿಗೆ ಹೂವಿನ ಪಾಟ್ ಅನ್ನು ಖರೀದಿಸಲು ಸಾಧ್ಯವಿಲ್ಲವೇ?” ಎಂದು ಕೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ಮಕ್ಕಳ ಜಗಳಕ್ಕೆ ತಾಯಂದಿರ ನಡುವೆ ಕಚ್ಚಾಟ; ಬಾಲಕನ ಕೆನ್ನೆಗೆ ಬಾರಿಸಿದ ಮಹಿಳೆ- ಶಾಕಿಂಗ್ ವಿಡಿಯೊ ಇದೆ
“ಇದರ ಹಿಂದೆ ಮೂಢನಂಬಿಕೆ ಇರಬಹುದು ಎಂದು ಒಬ್ಬ ನೆಟ್ಟಿಗರೊಬ್ಬರು ಹೇಳಿದ್ದಾರೆ. “ನೀವು ಶ್ರೀಮಂತ ವ್ಯಕ್ತಿಯ ಮನೆಯಿಂದ ಹೂವಿನ ಪಾಟ್ ಅಥವಾ ಮನಿ ಪ್ಲಾಂಟ್ ಅನ್ನು ಕದ್ದು ನಿಮ್ಮ ಮನೆಯಲ್ಲಿ ನೆಟ್ಟರೆ, ನಿಮ್ಮ ಮನೆಗೂ ಸಮೃದ್ಧಿ ಬರುತ್ತದೆ ಎಂಬ ವದಂತಿ ಇದೆ” ಎಂದು ಅವರು ಹೇಳಿದ್ದಾರೆ.