Monday, 25th November 2024

Viral Video: ಅಳಿಲನ್ನು ಸಹೋದರ ಎಂದು ಭಾವಿಸಿ ಪೂಜಿಸಿದ ಯುವತಿ! ವಿಡಿಯೊ ನೋಡಿ

Viral Video

ದೀಪಾವಳಿಯ ಎರಡು ದಿನಗಳ ನಂತರ ಇಡೀ ದೇಶದಲ್ಲಿ ಸಹೋದರ ಸಂಬಂಧದ ಸಂಕೇತವಾದ ಭಾಯಿ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಕಾರ್ತಿಕ ತಿಂಗಳ ಶುಕ್ಲ ಪಕ್ಷದ ಮೊದಲನೇ ದಿನದಂದು ಆಚರಿಸಲಾಗುತ್ತದೆ. ಸಹೋದರಿಯರು ತಮ್ಮ ಸಹೋದರನ ದೀರ್ಘಾಯುಷ್ಯಕ್ಕಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು  ಭಾಯಿ ದೂಜ್ ಅನ್ನು ಅಳಿಯನೊಂದಿಗೆ ಆಚರಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಯುವತಿ ಈ ವಿಡಿಯೊವನ್ನು ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ  ಹಂಚಿಕೊಂಡಿದ್ದು,  ಅವರು ಅಳಿಲನ್ನು ತನ್ನ ಸಹೋದರ ಎಂದು ಭಾವಿಸಿ ಅದಕ್ಕೆ  ಪೂಜೆ ಮಾಡಿದ್ದಾರೆ.  ಇದು ಸೋಶಿಯಲ್ ಮೀಡಿಯಾ ಬಳಕೆದಾರರನ್ನು  ಆಕರ್ಷಿಸಿದೆ. ಯುವತಿಗೆ ಪೂಜೆಗೆ ಅಳಿಲೂ ಕೂಡ ಸಿಕ್ಕಾಪಟ್ಟೆ ಖುಷಿಗೊಂಡಿದೆ. ಅಳಿಲಿನ ತಲೆಯ ಮೇಲೆ ಶುಭ ಹಾರೈಕೆಗಳ ತಿಲಕವನ್ನು ಇಟ್ಟು, ಆಶೀರ್ವಾದದ ಸಂಕೇತವಾದ ಅಕ್ಕಿ, ಹೂವುಗಳು ಅಳಿಲಿನ ತಲೆ ಮೇಲೆ ಹಾಕಿ ಅದಕ್ಕೆ ಮುತ್ತಿಟ್ಟಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾ ಬಳಕೆದಾರರ ಮನಸ್ಸನ್ನು ಗೆದ್ದಿದೆ.  ಹಾಗಾಗಿ ಈ ವಿಡಿಯೊವನ್ನು ಶೇರ್ ಮಾಡಿದಾಗಿನಿಂದ, 2.2 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಅನೇಕ ಬಳಕೆದಾರರು ವಿಡಿಯೊಗೆ ಪ್ರತಿಕ್ರಿಯಿಸಿ ಸಾಕುಪ್ರಾಣಿಯೊಂದಿಗಿನ ಅವರ ಬಂಧವನ್ನು ಹೊಗಳಿದ್ದಾರೆ. ಹಾಗೇ  ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಬಳಕೆದಾರರೊಬ್ಬರು, “ಇದು ತುಂಬಾ ಶುದ್ಧ ಮತ್ತು ಹೃದಯಸ್ಪರ್ಶಿಯಾಗಿದೆ. ಪ್ರೀತಿಯ ಅರ್ಥವೇನೆಂಬುದನ್ನು ನೀವು ಇದರಿಂದ ನಿಜವಾಗಿಯೂ ಸಾಕಾರಗೊಳಿಸಿದ್ದೀರಿ!” ಎಂದಿದ್ದಾರೆ,  ಇನ್ನೊಬ್ಬರು “ಇದು ನಾನು ದೀಪಾವಳಿಯಾದ್ಯಂತ ನೋಡಿದ ಅತ್ಯಂತ ಸುಂದರವಾದ ವಿಷಯ!” ಎಂದು ಬರೆದಿದ್ದಾರೆ.

ಈ ಸಾಕು ಅಳಿಲು ಗಿಲ್ಲು ಇನ್ಸ್ಟಾಗ್ರಾಂ ಪೇಜ್‍ ಅನ್ನು ಸಹ  ಹೊಂದಿದೆ, ಇದನ್ನು ಈ ಯುವತಿ  ನಿರ್ವಹಿಸುತ್ತಿದ್ದಾರೆ ಮತ್ತು ಈ ಅಳಿಲು ಸುಮಾರು 13,000 ಅನುಯಾಯಿಗಳನ್ನು ಹೊಂದಿದೆ.

ಇದನ್ನೂ ಓದಿ:ಮಲಗಿದ್ದ ಹುಡುಗಿಯ ಮುಖ ಸೀಳಿದ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್!

ವರದಿ ಪ್ರಕಾರ, ಗಿಲ್ಲು ಅಳಿಲು ಒಂದು ವರ್ಷದ ಹಿಂದೆ ಕಾರಿನ ಟೈರ್ ಬಳಿ ಬಂದಾಗ ಈ ಯುವತಿ ರಕ್ಷಿಸಿದ್ದರು. ಅದರ ಗೂಡು ಮತ್ತು ತಾಯಿಯನ್ನು ಹುಡುಕಿದಾಗ ಸಿಗದ ಕಾರಣ ಅದನ್ನು ಮನೆಗೆ ತಂದು ಸಾಕಿದ್ದರು. ಈಗ ಅದು ಅವರ ಕುಟುಂಬದವರಿಗೆ ಬಹಳ ನೆಚ್ಚಿನದಾಗಿದೆ ಎಂದು ಅವರು ತಿಳಿಸಿದ್ದಾರೆ.