ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಕೆಲವರು ವಿಚಿತ್ರವಾದ ವೇಷಭೂಷಣವನ್ನು ಧರಿಸಿ ಅದನನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಎಲೆಗಳು, ಹೂಗಳು, ಪೇಪರ್ ಹೀಗೆ ಹಲವಾರು ವಸ್ತುಗಳಿಂದ ತಯಾರಿಸಿದ ವೇಷಭೂಷಣವನ್ನು ಧರಿಸಿ ರೀಲ್ಸ್ ಮಾಡುತ್ತಾರೆ. ಇದೀಗ ಯುವತಿಯೊಬ್ಬರು ಪಾವ್‌ನಿಂದ ಗೌನ್ ತಯಾರಿಸಿ ಅದನ್ನು ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದ್ದಾರೆ.
ಸೋನ್ಪಾಲ್ ಶರ್ಮಾ ಎಂಬ ರೀಲ್ಸ್ ಕ್ರಿಯೇಟರ್ ಪಾವ್‌ನಿಂದ ಅಲಂಕರಿಸಿದ ಉಡುಪನ್ನು ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಶರ್ಮಾ ಅನೇಕ ಪಾವ್ ತುಂಡುಗಳನ್ನು ಬಳಸಿ ತಯಾರಿಸಿದ ಚಮತ್ಕಾರಿ ಗೌನ್ ಅನ್ನು ನೆಟ್ಟಿಗರಿಗೆ ತೋರಿಸಿದ್ದಾರೆ.
ಮೊದಲಿಗೆ ಸಲ್ವಾರ್ ಕಮೀಜ್ ಮತ್ತು ದುಪ್ಪಟಾ ಧರಿಸಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ಸೋನ್ಪಾಲ್ ಶರ್ಮಾ ನಂತರ ಪಾವ್ ತುಂಬಿದ ಬುಟ್ಟಿಯನ್ನು ತೆಗೆದುಕೊಂಡು ನೆಲದ ಮೇಲೆ ಇಟ್ಟುಕೊಂಡು ಪಾವ್ ರಾಶಿಯಿಂದ ಒಂದು ಪೀಸ್ ಪಾವ್ ಅನ್ನು ತೆಗೆದುಕೊಂಡು ತಿಂದಿದ್ದಾರೆ. ನಂತರ ಪಾವ್ ಅನ್ನು ಬಳಸಿ ಸ್ಲಿವ್‌ಲೆಸ್ ಗೌನ್ ಅನ್ನು ತಯಾರಿಸಿ ಅದನ್ನು ಧರಿಸಿದ್ದಾರೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನೆಟ್ಟಿಗರ ಗಮನವನ್ನು ಸೆಳೆದಿದೆ. ಆದರೆ ನೆಟ್ಟಿಗರು ಈ ವಿಡಿಯೊ ನೋಡಿ ಗರಂ ಆಗಿದ್ದಾರೆ.ಈ ರೀಲ್ಸ್ ಈಗಾಗಲೇ ವೈರಲ್ ಆಗಿದ್ದು, ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಈ ಸುದ್ದಿಯನ್ನೂ ಓದಿ:ಭಗವಾನ್ ಜಗನ್ನಾಥನ ಮುಂದೆ ತಲೆಬಾಗಿ ನಮಸ್ಕರಿಸಿದ ಕೋಳಿ- ಕುಕ್ಕುಟ ಭಕ್ತಿಗೆ ನೆಟ್ಟಿಗರು ಫುಲ್ ಫಿದಾ
ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಪಾವ್ ತುಂಡುಗಳನ್ನು ತಿನ್ನಲು ಬಳಸುವ ಬದಲು ಅದನ್ನು ಈ ರೀತಿ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರವನ್ನು ವ್ಯರ್ಥ ಮಾಡಿದ್ದಕ್ಕಾಗಿ ನೆಟ್ಟಿಗರು ಅವರ ಮೇಲೆ ಕಿಡಿಕಾರಿದ್ದಾರೆ. “ರೀಲ್ಸ್ ಕ್ರೇಜ್‍ಗಾಗಿ ಆಹಾರವನ್ನು ವ್ಯರ್ಥ ಮಾಡಬೇಡಿ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ಇದನ್ನು ನಿಲ್ಲಿಸಿ” ಎಂದು ಕಾಮೆಂಟ್ ಮಾಡಿದ್ದಾರೆ.