Tuesday, 17th December 2024

Viral Video: ಇನ್ನೆಂದೂ ಏರ್ ಇಂಡಿಯಾದಲ್ಲಿ ಪ್ರಯಾಣಸುವುದಿಲ್ಲವೆಂದ ಯೂಟ್ಯೂಬರ್; ಕಾರಣವೇನು?

Viral Video

ಹೊಸದಿಲ್ಲಿ: ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಬಿಸಿನೆಸ್ ಕ್ಲಾಸ್‌ನ  ಪ್ರಯಾಣಿಕರೊಬ್ಬರು ತಮಗಾದ ಕೆಟ್ಟ ಅನುಭವದಿಂದಾಗಿ ಏರ್ ಇಂಡಿಯಾವನ್ನು ಟೀಕಿಸಿದ್ದಾರೆ. ಲಂಡನ್‍ನಿಂದ ಅಮೃತಸರಕ್ಕೆ ಬಿಸಿನೆಸ್ ಕ್ಲಾಸ್‍ನಲ್ಲಿ ಪ್ರಯಾಣಿಸಿದ್ದ ಯೂಟ್ಯೂಬರ್ ಮತ್ತು ಟ್ರಾವೆಲ್ ಇನ್ಫ್ಲುಯೆನ್ಸರ್ ಡ್ಯೂ ಬಿನ್ಸ್ಕಿ ತಮ್ಮ 9 ಗಂಟೆಗಳ ಪ್ರಯಾಣದಲ್ಲಿ ತಮಗಾದ ಕೆಟ್ಟ ಅನುಭವವನ್ನು ವಿವರಿಸುತ್ತಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ. ಈ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral Video) ಆಗಿದೆ.

ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್‍ನಲ್ಲಿ “ಲಂಡನ್‍ನಿಂದ ಅಮೃತಸರಕ್ಕೆ @airindiaದಲ್ಲಿ ಪ್ರಯಾಣಿಸಿದ್ದು, ಇದು ನನ್ನ ಜೀವನದ ಅತ್ಯಂತ ಕೆಟ್ಟ ಅನುಭವ. ಕೂದಲು ಬಿದ್ದ ದಿಂಬಿನ ಮೇಲೆ ನಾನು ತಿನ್ನಬೇಕಾಗಿತ್ತು. ಅದನ್ನುಬದಲಾಯಿಸಲು ನಾನು $ 750 ಪಾವತಿಸಿದ್ದೇನೆ ಎಂದು ನೀವು ನಂಬಬಹುದೇ? ನಾನು ಇನ್ನೆಂದೂ ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡುವುದಿಲ್ಲ” ಎಂದಿದ್ದಾರೆ.

ಅವರು ತಮಗಾದ ಕೆಟ್ಟ ಅನುಭವದ ದೃಶ್ಯ ಪುರಾವೆಗಳನ್ನು ಒದಗಿಸುವ ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಮಲಗುವ ಆಸನ ಮತ್ತು ಮೇಜಿನಿಂದ ಹಿಡಿದು ದಿಂಬಿನ ಮೇಲಿನ ಕೂದಲು , ತೊಡೆಯ ಮೇಲೆ ಆಹಾರವನ್ನು ಬಡಿಸುವವರೆಗೆ ಎಲ್ಲಾ ಸಮಸ್ಯೆಗಳನ್ನು ವಿವರವಾಗಿ ತೋರಿಸಿದ್ದಾರೆ. ಕೊಳಕು ಸೀಟ್, ಕಾರ್ಯನಿರ್ವಹಿಸದ ಟಿವಿ ಮತ್ತು ಮುರಿದ ವೈಫೈ ಬಗ್ಗೆ ಅವರು ತೋರಿಸಿದ್ದಾರೆ.  ಹಾಗೇ ಡ್ಯೂ ಪ್ರಥಮ ದರ್ಜೆಯ ಪ್ರಯಾಣಿಕರಿಗೆ ಮೀಸಲಾದ ಸೌಲಭ್ಯಗಳ ಕಿಟ್ ಅನ್ನು ಟೀಕಿಸಿದ್ದಾರೆ.  ಅದರಲ್ಲಿ ಕೇವಲ ಒಂದು ಲೋಷನ್ ಮಾತ್ರ ಇತ್ತು. “ಈ ಒಂಬತ್ತು ಗಂಟೆಗಳ ಶೋಚನೀಯ ಪ್ರಯಾಣಕ್ಕಾಗಿ ಧನ್ಯವಾದಗಳು, ಏರ್ ಇಂಡಿಯಾ, ಇದಕ್ಕಾಗಿ ನಾನು 750 ಡಾಲರ್ ಖರ್ಚು ಮಾಡಿದ್ದೇನೆ” ಎಂದು ಅವರು ವಿಡಿಯೊದ ಕೊನೆಯಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ಸಖತ್‌ ವೈರಲ್‌ ಆಯ್ತು ರೂಂಮೇಟ್‌ ಅನ್ನು ಆಕರ್ಷಿಸಲು ಈ ಮಹಿಳೆ ಮಾಡಿದ ಪೋಸ್ಟ್; ಅಂಥದ್ದೇನಿದೆ ಅದರಲ್ಲಿ?

ಸೋಷಿಯಲ್ ಮೀಡಿಯಾ ನೆಟ್ಟಿಗರು ಸಹ ಈ ವಿಡಿಯೊಗೆ ಪ್ರತಿಕ್ರಿಯಿಸಿದ್ದು, ಕೆಲವರು ಭಾರತೀಯ ವಿಮಾನಯಾನ ಸೇವೆಗಳನ್ನು ಟೀಕಿಸಿದ್ದಾರೆ. ನಾನು ಏರ್ ಇಂಡಿಯಾದಲ್ಲಿ ಎರಡು ಬಾರಿ ಆಹಾರ ಸೇವಿಸಿ ಫುಡ್‍ಫಾಯಿಸನ್ ಆಗಿದೆ” ಎಂದು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ.