Thursday, 19th September 2024

Virus Attack : ಚೀನಾದಲ್ಲಿ ಪತ್ತೆಯಾಗಿದೆ ಮತ್ತೊಂದು ಡೆಡ್ಲಿ ವೈರಸ್‌, ಭಾರತಕ್ಕೂ ಬರಬಹುದು ಎಚ್ಚರಿಕೆ

Virus Attack

ಬೆಂಗಳೂರು: ವೆಟ್‌ಲ್ಯಾಂಡ್‌ ವೈರಸ್ (ಡಬ್ಲ್ಯುಇಎಲ್‌ವಿ ) ಎಂದು ಹೆಸರಿನ ಹೊಸ ವೈರಸ್ ಚೀನಾದಲ್ಲಿ ಪತ್ತೆಯಾಗಿದೆ (Virus Attack). ಇದು ಉಣ್ಣೆ (ಟಿಕ್ಸ್‌) ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಇದು ಎಷ್ಟು ಅಪಾಯಕಾರಿ ಎಂದರೆ ಮನುಷ್ಯನ ನರಗಳಿಗೆ ಬಾಧಿಸಿ ಕೋಮಾಕ್ಕೆ ಹೋಗಿ ಸೊರಗಿ ಸಾಯುವಂತೆ ಮಾಡುತ್ತದೆ. ಜೂನ್ 2019 ರಲ್ಲಿ ಜಿನ್ಝೌ ನಗರದ 61 ವರ್ಷದ ರೋಗಿಯಲ್ಲಿ ಈ ವೈರಸ್ ಅನ್ನು ಮೊದಲು ಗುರುತಿಸಲಾತ್ತು. ಈ ಉಣ್ಣೆಯಿಂದ ಕಚ್ಚಿಸಿಕೊಂಡ ಕೆಲವರು ಅನಾರೋಗ್ಯಕ್ಕೆ ಒಳಗಾಗಿದ್ದು. ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರೋಗಿಯು ಜ್ವರ, ತಲೆನೋವು ಮತ್ತು ವಾಂತಿ ಮಾಡಿ ಮೃತಪಡುತ್ತಾರೆ. ಈ ವೈರಸ್‌ ಭಾರತಕ್ಕೆ ಪ್ರವೇಶ ಮಾಡಬಹುದು ಎಂದು ಹೇಳಲಾಗುತ್ತಿದೆ.

ಡಬ್ಲ್ಯುಇಎಲ್‌ವಿ ಕ್ರಿಮಿಯನ್-ಕಾಂಗೋ ಹೆಮರಾಜಿಕ್ ಜ್ವರ ವೈರಸ್‌ನಂತೆಯೇ ಉಣ್ಣಿಗಳಿಂದ ಹರಡುವ ವೈರಸ್‌ಗಳ ಗುಂಪಿಗೆ ಸೇರಿದೆ, ಇದು ಮಾನವನ ತೀವ್ರ ಅನಾರೋಗ್ಯಕ್ಕೆ ಕಾರಣವಾಗಬಹುದು. ಆರಂಭಿಕ ಆವಿಷ್ಕಾರದ ನಂತರ, ಸಂಶೋಧಕರು ಉತ್ತರ ಚೀನಾದಲ್ಲಿ ಸಮಗ್ರ ವಿಶ್ಲೇಷಣೆ ನಡೆಸಿದ್ದಾರೆ, ಅಲ್ಲಿ ಅವರು ವಿವಿಧ ಸ್ಥಳಗಳಿಂದ ಸುಮಾರು 14,600 ಉಣ್ಣೆಗಳನ್ನು ಸಂಗ್ರಹಿಸಿದ್ದರು . ಅವೆಲ್ಲವೂ ಹೊಸ ಮಾದರಿಯ ವೈರಸ್‌ನ ಪಾಸಿಟಿವ್‌ ರಿಸಲ್ಟ್‌ ನೀಡಿತ್ತು.

ಕುರಿಗಳು, ಕುದುರೆಗಳು, ಹಂದಿಗಳು ವೆಲ್ವಿ ಆರ್‌ಎನ್ಎ ವೈರಸ್‌ ಕಂಡುಬಂದಿದೆ. ವೈರಸ್ ಮಾನವನ ಹೊಕ್ಕುಳ-ರಕ್ತನಾಳದ ಮೂಲಕ ಪ್ರವೇಶಿಸಿ ಎಂಡೋಥೆಲಿಯಲ್ ಕೋಶಗಳಲ್ಲಿ ಪರಿಣಾಮಗಳನ್ನುತೋರುತ್ತದೆ. ಇದು ಅಪಾಯಕಾರಿ ಅನಾರೋಗ್ಯದ ಲಕ್ಷಣಗಳನ್ನು ತೋರಿಸುತ್ತದೆ.

ಇದನ್ನೂ ಓದಿ: Abu Dhabi Crown Prince : ಮೋದಿ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿಳಿದ ಅಬುಧಾಬಿ ಯುವರಾಜ

ಸಂಶೋಧಕರು ಈ ಪ್ರದೇಶದ ಅರಣ್ಯ ರೇಂಜರ್‌ಗಳ ರಕ್ತದ ಮಾದರಿಗಳನ್ನು ವಿಶ್ಲೇಷಿಸಿದ್ದು, 640 ವ್ಯಕ್ತಿಗಳಲ್ಲಿ 12 ಜನರಲ್ಲಿ ವೆಲ್ವಿ ವೈರಸ್‌ ಬಾಧಿಸಿವೆ. ಉಣ್ಣಿ ಕಡಿತದಿಂದ ಬಳಲುತ್ತಿರುವ ರೋಗಿಗಳ ಮೇಲೆ ನಡೆಸಿದ ಪರೀಕ್ಷೆಗಳ ಬಳಿಕ 20 ವ್ಯಕ್ತಿಗಳು ವೈರಸ್‌ ಪಾಸಿಟಿವ್‌ ಕಂಡು ಬಂದಿದೆ. ಜ್ವರ, ತಲೆತಿರುಗುವಿಕೆ ಮತ್ತು ತಲೆನೋವಿನಿಂದ ವಾಕರಿಕೆ ಮತ್ತು ಅತಿಸಾರದವರೆಗೆ ರೋಗಲಕ್ಷಣಗಳಿವೆ. ಮೆದುಳು ಮತ್ತು ಬೆನ್ನುಮೂಳೆಯ ದ್ರವದಲ್ಲಿ ಹೆಚ್ಚಿನ ಬಿಳಿ ರಕ್ತ ಕಣಗಳು ಉಂಟಾಗಿ ಕೋಮಾಗೆ ಜಾರುವ ಲಕ್ಷಣವೂ ಇರುತ್ತದೆ.

ಪ್ರಯೋಗಗಳು ವೆಲ್ವಿ ಮಾರಣಾಂತಿಕ ಸೋಂಕುಗಳಿಗೆ ಕಾರಣವಾಗಬಹುದು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರಬಹುದು ಎಂದು ತೋರಿಸಿದೆ. ಕೆಲವು ಸಂದರ್ಭಗಳಲ್ಲಿ WELV ಸೌಮ್ಯವಾಗಿದ್ದರೂ, ಇದು ತೀವ್ರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಮೆದುಳು ಸಮಸ್ಯೆಗೆ ಕಾರಣವಾಗುತ್ತದೆ.