Friday, 22nd November 2024

ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರ ವೀಸಾ ರದ್ದು

ನವದೆಹಲಿ: ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರೆನ್ನಲಾದ ಭಾರತೀಯ ಮೂಲದ ಜನರ ಸಾಗರೋತ್ತರ ನಾಗರಿ ಕರ ಕಾರ್ಡುಗಳು ಹಾಗೂ ದೀರ್ಘಾವಧಿಯ (ಎಲ್ ಟಿ) ವೀಸಾಗಳನ್ನು ಕೇಂದ್ರ ಸರಕಾರವು ರದ್ದುಗೊಳಿಸಿದೆ ಎಂದು ವರದಿ ಯಾಗಿದೆ.

ಕೇಂದ್ರವು ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯು ತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ನೆಪದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿವಿಧ ದೇಶಗಳಲ್ಲಿನ ಭಾರತೀಯ ಮಿಷನ್ಗಳು ಭಾರತ ವಿರೋಧಿ ಚಟು ವಟಿಕೆಗಳಲ್ಲಿ ಭಾಗವಹಿಸುವ ಭಾರತೀಯ ಮೂಲದ ಜನರ ಚಟುವಟಿಕೆಗಳ ಮೇಲೆ ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಅಂತಹ ಕನಿಷ್ಠ 12 ವ್ಯಕ್ತಿಗಳನ್ನು ಸರಕಾರ ಗುರುತಿಸಿದೆ ಎಂದು ವರದಿಯಾಗಿದೆ. ಅವರು ಭಾರತಕ್ಕೆ ಪ್ರಯಾಣಿಸಲು ಪ್ರಯತ್ನಿಸಿದರೆ ವಲಸೆ ಇಲಾಖೆಯು ಅವರನ್ನು ತಮ್ಮ ಪ್ರಯಾಣದ ಮೂಲ ದೇಶಕ್ಕೆ ಕಳುಹಿಸಲು ಸಲಹೆ ನೀಡಿದೆ.

ಸೆಪ್ಟೆಂಬರ್‌ನಲ್ಲಿ ರೈತರ ಆಂದೋಲನದ ವಿಷಯದ ಕುರಿತು ಕೆನಡಾ ದೇಶದ ಕೆಲವು ರಾಜಕೀಯ ನಾಯಕರು ಮಾಡಿದ ಕೆಲವು ಹೇಳಿಕೆಗಳ ಕುರಿತು ಭಾರತವು ಕೆನಡಾದ ಸರಕಾರದೊಂದಿಗೆ ಪ್ರತಿಭಟನೆಯನ್ನು ದಾಖಲಿಸಿತು, ಅದು “ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ” ಎಂದು ಭಾರತ ಪ್ರತಿಪಾದಿಸಿತು. ತಾನು ಅದನ್ನು ಒಪ್ಪುವುದಿಲ್ಲ ಎಂದು ಪ್ರತಿಪಾದಿಸಿತ್ತು.

ಕೇಂದ್ರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಸುಮಾರು ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸು ತ್ತಿದ್ದಾರೆ.