Tuesday, 5th November 2024

Visa Free Entry: ಭಾರತೀಯರಿಗೆ ಥೈಲ್ಯಾಂಡ್ ವೀಸಾ ಮುಕ್ತ ಪ್ರವೇಶ ಅನಿರ್ದಿಷ್ಟಾವಧಿಗೆ ವಿಸ್ತರಣೆ

Visa Free Entry

ವಿದೇಶಕ್ಕೆ ಪ್ರವಾಸ (Foreign tour) ಹೋಗಬೇಕು ಎಂದು ಕನಸು ಕಾಣುವವರಿಗೆ ಇಲ್ಲೊಂದು ಶುಭ ಸುದ್ದಿ. ಥೈಲ್ಯಾಂಡ್ ಪ್ರವಾಸ (Thailand tour) ಈಗ ಭಾರತೀಯರಿಗೆ ವೀಸಾ (Visa Free Entry) ಮುಕ್ತವಾಗಿದೆ. ಥೈಲ್ಯಾಂಡ್ ಪ್ರವೇಶವನ್ನು ಭಾರತೀಯ ಪ್ರಯಾಣಿಕರಿಗೆ (Indian tourist) ವೀಸಾ ಮುಕ್ತವಾಗಿ (Visa-Free Entry for indians) ಅನಿರ್ದಿಷ್ಟವಧಿ ವರೆಗೆ ವಿಸ್ತರಿಸಲಾಗಿದೆ. ಥೈಲ್ಯಾಂಡ್ ಪ್ರವಾಸೋದ್ಯಮ ಆಕರ್ಷಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಈ ಯೋಜನೆಯ ಭಾಗವಾಗಿ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ.

ಭಾರತೀಯರಿಗೆ ಥೈಲ್ಯಾಂಡ್ ವೀಸಾ ಮುಕ್ತ ಪ್ರವೇಶ ನೀತಿಯ ಅನಿರ್ದಿಷ್ಟ ಅವಧಿಗೆ ವಿಸ್ತರಿಸಲಾಗಿದ್ದು, ಇದು 2024ರ ನವೆಂಬರ್ 11ರಂದು ಕೊನೆಗೊಳ್ಳಲಿದೆ. ಈ ನೀತಿಯ ಅನ್ವಯ ಭಾರತೀಯ ಸಂದರ್ಶಕರು ವೀಸಾ ಇಲ್ಲದೆ 60 ದಿನಗಳವರೆಗೆ ಥೈಲ್ಯಾಂಡ್‌ನಲ್ಲಿ ಉಳಿಯಬಹುದು. ಇದರೊಂದಿಗೆ ಸ್ಥಳೀಯ ವಲಸೆ ಕಚೇರಿಯ ಅನುಮತಿ ಪಡೆದು ಹೆಚ್ಚುವರಿ 30 ದಿನಗಳವರೆಗೆ ಉಳಿಯುವ ಆಯ್ಕೆ ಇರುತ್ತದೆ. ಈ ಮೂಲಕ ಭಾರತೀಯ ಪ್ರವಾಸಿಗರಿಗೆ ಥೈಲ್ಯಾಂಡ್‌ನಲ್ಲಿ ಪ್ರಯಾಣವನ್ನು ಹೆಚ್ಚು ಸುಲಭವಾಗಿಸುವ ಗುರಿಯನ್ನು ಹೊಂದಿದೆ.

ವೀಸಾ ಅರ್ಜಿಯ ಅಗತ್ಯವಿಲ್ಲದೆಯೇ ಥೈಲ್ಯಾಂಡ್‌ನ ಆಕರ್ಷಕ ಪ್ರದೇಶಗಳನ್ನು ಕಾಣಲು ಭಾರತೀಯರಿಗೆ ಅವಕಾಶ ನೀಡುವ ಥೈಲ್ಯಾಂಡ್ ಸರ್ಕಾರದ ನಿರ್ಧಾರವನ್ನು ಥಾಯ್ಲೆಂಡ್‌ನ ಪ್ರವಾಸೋದ್ಯಮ ಪ್ರಾಧಿಕಾರ (TAT) ದೃಢಪಡಿಸಿದೆ. ನವದೆಹಲಿಯ ರಾಯಲ್ ಥಾಯ್ ರಾಯಭಾರ ಕಚೇರಿಯ ಅಧಿಕಾರಿಗಳು ಥಾಯ್ ಪ್ರವಾಸೋದ್ಯಮ ಮತ್ತು ಭಾರತೀಯ ಪ್ರವಾಸಿಗರಿಗೆ ಸುಲಭ ಪ್ರಯಾಣಕ್ಕೆ ವೀಸಾ ಮುಕ್ತ ಪ್ರವೇಶ ಅನಿರ್ದಿಷ್ಟ ವಿಸ್ತರಣೆ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ವೀಸಾ ಮುಕ್ತ ಥೈಲ್ಯಾಂಡ್ ಪ್ರವಾಸ ಯೋಜನೆಯು ದೇಶದ ಆದಾಯ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಪ್ರವಾಸಿಗರಿಂದ ವಸತಿ, ಊಟ, ಪ್ರವಾಸ, ಸಾರಿಗೆ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಇದರಿಂದ ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಬೆಳವಣಿಗೆಯಾಗುತ್ತದೆ. ಈ ಮೂಲಕ ದೇಶದ ಆದಾಯವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಇರಿಸಲಾಗಿದೆ. ಉದ್ಯೋಗ ಅವಕಾಶ ಸೃಷ್ಟಿ, ಸ್ಥಳೀಯ ವ್ಯವಹಾರಗಳಿಗೆ ಬೆಂಬಲ ಸೇರಿದಂತೆ ಈ ಯೋಜನೆಯು ಥೈಲ್ಯಾಂಡ್‌ನಾದ್ಯಂತ ಸಮುದಾಯಗಳಿಗೆ ಸಾಕಷ್ಟು ಪ್ರಯೋಜನವನ್ನು ನೀಡಲಿದೆ.

Visa Free Entry

ಥೈಲ್ಯಾಂಡ್ ಪ್ರವಾಸೋದ್ಯಮ

ಥೈಲ್ಯಾಂಡ್‌ನಲ್ಲಿ ಹಲವಾರು ಆಕರ್ಷಕ ಪ್ರವಾಸಿ ತಾಣಗಳಿದ್ದು, ಸಂಸ್ಕೃತಿ, ನೈಸರ್ಗಿಕ ಸೌಂದರ್ಯ ಮತ್ತು ಸಾಹಸದ ವಿಶಿಷ್ಟ ಮಿಶ್ರಣವನ್ನು ಒಳಗೊಂಡಿದೆ. ಭವ್ಯವಾಗಿ ನಿಂತಿರುವ ಗ್ರ್ಯಾಂಡ್ ಪ್ಯಾಲೇಸ್, ವಾಟ್ ಅರುಣ್‌ನಂತಹ ಸುಂದರವಾದ ದೇವಾಲಯಗಳಿಗೆ ಹೆಸರುವಾಸಿಯಾದ ಬ್ಯಾಂಕಾಕ್‌ನಿಂದ ಥೈಲ್ಯಾಂಡ್ ಪ್ರವಾಸವನ್ನು ಪ್ರಾರಂಭಿಸಬಹುದು. ಹೆಚ್ಚು ನೆಮ್ಮದಿಯ ತಾಣವನ್ನು ಅರಸುತ್ತಿದ್ದರೆ ಉತ್ತರದ ಚಿಯಾಂಗ್ ಮಾಯ್‌ಗೆ ಬೆಹಟಿ ನೀಡಬಹುದು. ಇಲ್ಲಿ ಟ್ರೆಕ್ಕಿಂಗ್‌ಗೆ ಸೂಕ್ತವಾದ ಪರ್ವತ ಪ್ರದೇಶಗಳಿವೆ. ಬ್ಯಾಂಕಾಕ್‌ನ ಹೊರಗೆ ಪ್ರಸಿದ್ಧ ಫ್ಲೋಟಿಂಗ್ ಮಾರ್ಕೆಟ್‌ಗಳಿಗೆ ಭೇಟಿ ಮಾಡಬಹುದು.

Ayodhya Ram Mandir: ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ; ಡ್ರೋನ್‍ನಲ್ಲಿ ಸೆರೆಯಾಯ್ತು ಈ ಅದ್ಭುತ ದೃಶ್ಯ!

ಸ್ಥಳೀಯ ಖಾದ್ಯಗಳೊಂದಿಗೆ ಅನೇಕ ಬಜೆಟ್ ಸ್ನೇಹಿ ಆಯ್ಕೆಗಳು ಇಲ್ಲಿವೆ. ಬೆರಗುಗೊಳಿಸುವ ಕಡಲತೀರಗಳು, ಪ್ರಾಚೀನ ದೇವಾಲಯಗಳು ಪ್ರಯಾಣಿಕರಿಗೆ ಮರೆಯಲಾಗದ ಅನುಭವಗಳನ್ನು ಕೊಡುತ್ತದೆ.