Sunday, 15th December 2024

ಉತ್ತರಾಖಂಡ: ಬಿಜೆಪಿ ಪ್ರಣಾಳಿಕೆ ’ವಿಷನ್ ಡಾಕ್ಯುಮೆಂಟ್ 2022’ ಬಿಡುಗಡೆ

ಉತ್ತರಾಖಂಡ: ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಡೆಹ್ರಾಡೂನ್ ನಲ್ಲಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ, ಮುಂದಿನ ಐದು ವರ್ಷಗಳಲ್ಲಿ ಮಾದರಿ ರಾಜ್ಯವಾಗಿ ಅದರ ಅಭಿವೃದ್ಧಿಗೆ ಮಾರ್ಗಸೂಚಿ ರೂಪಿಸಿದರು.

‘ವಿಷನ್ ಡಾಕ್ಯುಮೆಂಟ್ 2022’ ಎಂದು ಹೆಸರಿಸಲಾದ ಪಕ್ಷದ ಚುನಾವಣಾ ಪ್ರಣಾಳಿಕೆ, ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ, ವಲಸೆ ನಿಲ್ಲಿಸು ವುದು, ಉದ್ಯೋಗ ಸೃಷ್ಟಿ, ಮಹಿಳೆಯರ ಸಬಲೀಕರಣ, ರೈತರು, ತೋಟಗಾರಿಕೆ ಮತ್ತು ಡೈರಿ ಅಭಿವೃದ್ಧಿಗೆ ಹೊಸ ಒತ್ತು ನೀಡುತ್ತದೆ.

‘ಪ್ರಣಾಳಿಕೆಯ ಮೂರು ಪ್ರಮುಖ ಆಧಾರಸ್ತಂಭಗಳಿವೆ – ನೈತಿಕತೆ, ಆರ್ಥಿಕತೆ, ಪರಿಸರ ವಿಜ್ಞಾನ ಮತ್ತು ಪರಿಸರ’ ಎಂದು ಬಿಡುಗಡೆ ಮಾಡಿದ ನಂತರ ಗಡ್ಕರಿ ಹೇಳಿದರು.

ಡಿಸೆಂಬರ್ ವೇಳೆಗೆ ಚಾರ್ ಧಾಮ್ ಹೆದ್ದಾರಿ ಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ‘ರಾಜ್ಯದಲ್ಲಿ ನೀವು ನೋಡಿದ ಅಭಿವೃದ್ಧಿ ಕಾರ್ಯಗಳು ಕೇವಲ ಟ್ರೇಲರ್’ ಎಂದು ಹೇಳಿದರು.