Tuesday, 10th September 2024

ತಮಿಳುನಾಡು ರಾಜಕೀಯಕ್ಕೆ ವಿ.ಕೆ. ಶಶಿಕಲಾ ಮರುಪ್ರವೇಶ

ಚೆನ್ನೈ: 2021ರ ರಾಜ್ಯ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಎಐಎಡಿಎಂಕೆ ಪಕ್ಷವು ಹೀನಾಯ ಸೋಲು ಕಂಡಿದ್ದು, ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ರಾಜಕೀಯಕ್ಕೆ ಮರುಳುವುದಾಗಿ ಘೋಷಿಸಿದ್ದಾರೆ.

 ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾವಿ ಸ್ಥಾನವನ್ನು ಹೊಂದಿದ್ದ ಶಶಿಕಲಾ ದೀರ್ಘಾವಧಿಯ ಗೈರು ಬಳಿಕ ರಾಜಕೀಯಕ್ಕೆ ಮರುಪ್ರವೇಶಿಸುವು ದಾಗಿ ಘೋಷಿಸಿರುವುದು ಎಐಎಡಿಎಂಕೆಯಲ್ಲಿ ಹೊಸ ಚೈತನ್ಯ ಮೂಡಿಸಿದೆ.

ವಿರೋಧ ಪಕ್ಷದ ನಾಯಕರಾದ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ಸರಿಯಾದ ಪ್ರಶ್ನೆಗಳನ್ನು ಕೇಳದೆ ಇರುವಾಗ ನಾನು ಸರ್ಕಾರವನ್ನು ಪ್ರಶ್ನಿಸುತ್ತೇನೆ. 2026ರಲ್ಲಿ ನಾನು ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸಮಯ ಪಕ್ವವಾಗಿದ್ದು, ನನ್ನ ರಾಜಕೀಯ ಮರುಪ್ರವೇಶಕ್ಕೆ ಇದು ಸೂಕ್ತ ಸಮಯವಾಗಿದೆ. ನಾವು 2026ರಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ವನ್ನು ರಚಿಸುತ್ತೇವೆ ಎಂದು ವಿ.ಕೆ. ಶಶಿಕಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *