Thursday, 12th December 2024

Vladimir Putin : ಉಕ್ರೇನ್ ಜತೆಗಿನ ಸಂಘರ್ಷ ಕೊನೆಗೊಳಿಸಲು ಮೋದಿಯ ಪ್ರಯತ್ನವನ್ನು ಶ್ಲಾಘಿಸಿದ ರಷ್ಯಾ ಪ್ರಧಾನಿ ಪುಟಿನ್‌

Vladimir Putin

ಬೆಂಗಳೂರು: ಬ್ರಿಕ್ಸ್ ಸಭೆಯ ನಡೆಯಲಿರುವ ಹಿನ್ನೆಲೆಯಲ್ಲಿ ಮಾತನಾಡಿದ ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್, ಬ್ರಿಕ್ಸ್ ಸದಸ್ಯ ರಾಷ್ಟ್ರವಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವ ಶಾಂತಿಯ ಸಂದೇಶವನ್ನು ಶ್ಲಾಘಿಸಿದ್ದಾರೆ. ಪ್ರಮುಖವಾಗಿ ಉಕ್ರೇನ್ ಜತೆ ತಮ್ಮ ದೇಶ ಹೊಂದಿರುವ ಸಂಘರ್ಷವನ್ನು ಕೊನೆಗೊಳಿಸಲು ಮೋದಲಿ ಮಾಡಿರುವ ಪ್ರಯತ್ನವನ್ನು ಹೊಗಳಿದ್ದಾರೆ.

ಬ್ರಿಕ್ಸ್ ಗುಂಪು ಪಾಶ್ಚಿಮಾತ್ಯ ದೇಶಗಳ ವಿರೋಧಿಯಲ್ಲ, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಗಾತ್ರ ಮತ್ತು ವೇಗದ ಬೆಳವಣಿಗೆಯಿಂದಾಗಿ ಮುಂಬರುವ ವರ್ಷಗಳಲ್ಲಿ ಜಾಗತಿಕ ಆರ್ಥಿಕ ಶಕ್ತಿಯಾಗಲಿದೆ ಎಂಬ ಪುಟಿನ್‌ ಹೇಳಿಕೆಯನ್ನು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಬ್ರಿಕ್ಸ್ ಎಂದಿಗೂ ಯಾರ ವಿರುದ್ಧವೂ ಇರಬಾರದು. ಬ್ರಿಕ್ಸ್ ಪಾಶ್ಚಿಮಾತ್ಯ ವಿರೋಧಿ ಗುಂಪು ಅಲ್ಲ. ಆದರೆ ಪಾಶ್ಚಿಮಾತ್ಯೇತರ ಗುಂಪು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ ಎಂದು ಪುಟಿನ್ ವಿವರಿಸಿದ್ದಾರೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಜೊತೆಗೆ ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುಎಇಯನ್ನು ಒಳಗೊಂಡಿರುವ ಬ್ರಿಕ್ಸ್ ಅನ್ನು ಜಾಗತಿಕ ರಾಜಕೀಯ ಮತ್ತು ವ್ಯಾಪಾರದಲ್ಲಿ ಮಹತ್ವದ ಶಕ್ತಿಯಾಗಿ ಬಲಪಡಿಸುವ ಗುರಿಯನ್ನು ಪುಟಿನ್ ವ್ಯಕ್ತಪಡಿಸಿದ್ದಾರೆ.

ರಷ್ಯಾ ಅಕ್ಟೋಬರ್ 22-24ರಿಂದ ಕಜಾನ್‌ನಲ್ಲಿ ಬ್ರಿಕ್ಸ್ ಶೃಂಗಸಭೆಗೆ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ: Satyendar Jain : ಕೇಜ್ರಿವಾಲ್ ಸಹವರ್ತಿ ಸತ್ಯೇಂದ್ರ ಜೈನ್ ಕೂಡ ಜೈಲಿನಿಂದ ಬಿಡುಗಡೆ

ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ಪುಟಿನ್

ಉಕ್ರೇನ್ ಸಂಘರ್ಷದ ಬಗ್ಗೆ ಮಾತನಾಡಿದ ಪುಟಿನ್, “ರಷ್ಯಾ ಅದನ್ನು ಶಾಂತಿಯುತವಾಗಿ ಪರಿಹರಿಸಲು ಆಸಕ್ತಿ ಹೊಂದಿದೆ. ಮಾತುಕತೆಗಳನ್ನು ನಿಲ್ಲಿಸಿದ್ದು ನಾವಲ್ಲ, ಉಕ್ರೇನ್ ಕಡೆಯಿಂದ ಎಂಬುದಾಗಿ ಹೇಳಿದ್ದಾರೆ. ತಮ್ಮ ಚರ್ಚೆಯ ಸಮಯದಲ್ಲಿ ಪಿಎಂ ಮೋದಿ ನಿರಂತರವಾಗಿ ಈ ವಿಷಯವನ್ನು ಎತ್ತಿದ್ದಾರೆ. ರಷ್ಯಾ ಕೂಡ ಮೋದಿಯ ಕಾಳಜಿಯನ್ನು ಶ್ಲಾಘಿಸುತ್ತದೆ. ಎಂದು ಪುಟಿನ್ ಹೇಳಿದ್ದಾರೆ.

ಭಾರತೀಯ ಚಲನಚಿತ್ರಗಳ ಬಗ್ಗೆ ಮೆಚ್ಚುಗೆ

ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಚಲನಚಿತ್ರ ನಿರ್ಮಾಣಕ್ಕಾಗಿ ರಷ್ಯಾ ಪ್ರೋತ್ಸಾಹ ನೀಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪುಟಿನ್‌ “ನಾವು ಭಾರತೀಯ ಚಲನಚಿತ್ರಗಳಿಗೆ ಮೀಸಲಾದ ಟಿವಿ ಚಾನೆಲ್ ಹೊಂದಿದ್ದೇವೆ. ನಾವು ಬ್ರಿಕ್ಸ್ ಚಲನಚಿತ್ರೋತ್ಸವವನ್ನು ನಡೆಸುತ್ತೇವೆ. ಭಾರತೀಯ ಚಲನಚಿತ್ರ ನಿರ್ಮಾಪಕರು ಆಸಕ್ತಿ ಹೊಂದಿದ್ದರೆ, ಅವುಗಳನ್ನು ರಷ್ಯಾದಲ್ಲಿ ಪ್ರಚಾರ ಮಾಡಲು ನೆರವಾಗುತ್ತೇವೆ ಎಂದು ಹೇಳಿದ್ದಾರೆ.

“ಫಾರ್ಮಾಸ್ಯುಟಿಕಲ್‌ ನಾವು ಸಹಕರಿಸಬಹುದಾದ ಮತ್ತೊಂದು ಕ್ಷೇತ್ರ ” ಎಂದು ಅವರು ಹೇಳಿದ್ದಾರೆ.