ವಿಎಲ್‌ಸಿ ಮೀಡಿಯಾ ಪ್ಲೇಯರ್ ಮತ್ತೆ ಭಾರತದಲ್ಲಿ ಅನ್‌ಬ್ಲಾಕ್ ಮಾಡಿರುವ ಕೇಂದ್ರ ಈ ಸುದ್ದಿಯನ್ನು ಮೊದಲು ಇಂಟರ್ನೆಟ್ ಫ್ರೀಡಮ್ ಫೌಂಡೇಶನ್ (IFF) ಹಂಚಿಕೊಂಡಿದೆ. ಈ ವಿಎಲ್‌ಸಿ ಮೀಡಿಯಾ ಪ್ಲೇಯರ್ ಹೊಂದಿರುವ ಕಂಪನಿಯಾದ VideoLANಗೆ ಕಾನೂನು ಬೆಂಬಲವನ್ನು ನೀಡುತ್ತದೆ ಎಂದಿದೆ. ನೀವು ಈ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಲು ಬಯಸಿದರೆ ನೀವು (https://www.videolan.org) ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಈ ವಿಚಾರವಾಗಿ ಕಂಪನಿಯು ಸರ್ಕಾರಕ್ಕೆ ಲೀಗಲ್ ನೋಟಿಸ್ ಕಳುಹಿಸಿತ್ತು.
ಕೇಂದ್ರ ಸರ್ಕಾರ ಇತ್ತೀಚೆಗೆ ಇದನ್ನು ನಿಷೇಧಿಸಿತ್ತು. ಆದರೆ, ನಿಷೇಧವನ್ನು ಈಗ ಸಂಪೂರ್ಣ ವಾಗಿ ತೆಗೆದುಹಾಕಲಾಗಿದೆ. ಸರಕಾರದಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೆ ಮುಂದಿನ ಕಾನೂನು ಹೋರಾಟವನ್ನು ಕೈಗೊಳ್ಳುವುದಾಗಿ ಕಂಪನಿ ಬೆದರಿಕೆ ಹಾಕಿತ್ತು.
ಕೇಂದ್ರ ಸರ್ಕಾರವು ತನ್ನ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ವಿಎಲ್‌ಸಿ ಮೀಡಿಯಾ ಪ್ಲೇಯರ್ ಬೆಂಬಲಿಸುತ್ತದೆ ಎಂದು ಹೇಳಿದೆ. VideoLAN ತನ್ನ ನ್ಯಾಯಾಲಯದ ನೋಟೀಸ್‌ನಲ್ಲಿ ವರ್ಚುವಲ್ ವಿಚಾರಣೆಗಳ ಮೂಲಕ ತನ್ನ ಪ್ರಕರಣ ವನ್ನು ಸಮರ್ಥಿಸಿಕೊಳ್ಳಲು ಅವಕಾಶವನ್ನು ಕೋರಿದೆ ಮತ್ತು URLನ್ನು ನಿಷೇಧಿಸಲು ನೀಡಲಾದ ತರ್ಕಬದ್ಧ ತಡೆಯುವ ಆದೇಶವನ್ನು ಕೋರಿದೆ. ಆದರೆ, ನಿರ್ಬಂಧಕ್ಕೆ ಕಾರಣ ಇನ್ನೂ ಏನು ತಿಳಿದುಬಂದಿಲ್ಲ.
ಆದರೆ, ವಿಎಲ್‌ಸಿ ಮೀಡಿಯಾ ಪ್ಲೇಯರ್ ಬಳಕೆದಾರರ ಮಾಹಿತಿಗಳನ್ನು ‘ವಿರೋಧಿ ದೇಶಕ್ಕೆ’ ರವಾನಿಸುತ್ತಿದೆ ಎಂದು ಭಾರತ ಸರ್ಕಾರ ಪತ್ತೆ ಮಾಡಿತ್ತು. ಈ ಕಾರಣಕ್ಕಾಗಿ ವೆಬ್‌ಸೈಟ್‌ಗೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ವಿಎಲ್‌ಸಿ ಮೀಡಿಯಾ ಪ್ಲೇಯರ್ ನಿಷೇಧ ಹೇರಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.