ಪಿಲಿಭಿತ್ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡ 10.62 ರಷ್ಟು ಮತದಾನವಾಗಿದ್ದು, ಫತೇಪುರ್ ಶೇ 9.69, ಸೀತಾಪುರ್ ಶೇ.9.52 ಮತ್ತು ಉನ್ನಾವ್ ಶೇ 9.23ರಷ್ಟು ಮತದಾನವಾಗಿದೆ.
ಕಳೆದ ಅಕ್ಟೋಬರ್ 3ರಂದು ಕಾರು ಹರಿದು ನಾಲ್ವರು ರೈತರು ಸೇರಿ 8 ಮಂದಿ ಮೃತಪಟ್ಟ ಘಟನೆಯಿಂದ ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಪಡೆದ ಲಖಿಂಪುರ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ 4ನೇ ಹಂತದ ಚುನಾವಣೆ ನಡಯುತ್ತಿದ್ದು, ಬಳಿಕ ಇನ್ನೂ 3 ಹಂತದ ಚುನಾವಣೆ ಬಾಕಿ ಉಳಿಯಲಿವೆ. ಮಾ.10ಕ್ಕೆ ಮತ ಎಣಿಕೆ ನಡೆಯಲಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.