Saturday, 14th December 2024

ಉತ್ತರ ಪ್ರದೇಶದಲ್ಲಿ ಚುನಾವಣೆ: ಶೇ.9.10ರಷ್ಟು ಮತದಾನ

ಲಖನೌ: ಉತ್ತರ ಪ್ರದೇಶ ರಾಜ್ಯದಲ್ಲಿ ಬುಧವಾರ 4ನೇ ಹಂತದ ಮತದಾನ ಆರಂಭವಾಗಿದ್ದು, ಈ ವರೆಗೂ ಶೇ.9.10ರಷ್ಟು ಮತದಾನವಾಗಿದೆ.

ಅತೀವ್ರ ಚಳಿಯಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡುತ್ತಿರುವುದು ಕಂಡು ಬಂದಿದೆ. 9 ಗಂಟೆಯವರೆಗೆ ಒಟ್ಟಾರೆ ಶೇ.9.10ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಪಿಲಿಭಿತ್ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡ 10.62 ರಷ್ಟು ಮತದಾನವಾಗಿದ್ದು, ಫತೇಪುರ್ ಶೇ 9.69, ಸೀತಾಪುರ್ ಶೇ.9.52 ಮತ್ತು ಉನ್ನಾವ್ ಶೇ 9.23ರಷ್ಟು ಮತದಾನವಾಗಿದೆ.

ಕಳೆದ ಅಕ್ಟೋಬರ್ 3ರಂದು ಕಾರು ಹರಿದು ನಾಲ್ವರು ರೈತರು ಸೇರಿ 8 ಮಂದಿ ಮೃತಪಟ್ಟ ಘಟನೆಯಿಂದ ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಪಡೆದ ಲಖಿಂಪುರ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ 4ನೇ ಹಂತದ ಚುನಾವಣೆ ನಡಯುತ್ತಿದ್ದು, ಬಳಿಕ ಇನ್ನೂ 3 ಹಂತದ ಚುನಾವಣೆ ಬಾಕಿ ಉಳಿಯಲಿವೆ. ಮಾ.10ಕ್ಕೆ ಮತ ಎಣಿಕೆ ನಡೆಯಲಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.