Saturday, 14th December 2024

ಜಯಪ್ರಕಾಶ್‌ ನಾರಾಯಣ ಜನ್ಮ ದಿನಾಚರಣೆ: ಉಪರಾಷ್ಟ್ರಪತಿ ಗೌರವ ನಮನ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್‌ ನಾರಾಯಣ ಅವರ ಜನ್ಮ ದಿನಾಚರಣೆ ಅಂಗವಾಗಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಗೌರವ ನಮನ ಸಲ್ಲಿಸಿದ್ದಾರೆ.

ಲೋಕ ನಾಯಕ (ಜನರ ನಾಯಕ) ಮತ್ತು ಜೆ.ಪಿ ಎಂದು ಪ್ರಸಿದ್ಧರಾಗಿರುವ ಜಯಪ್ರಕಾಶ್‌ ನಾರಾಯಣ‌ ಬಿಹಾರದ ಸರಾನ್‌ನಲ್ಲಿ 1902ರ ಅಕ್ಟೋಬರ್‌ 11ರಂದು ಜನಿಸಿದರು.

‘ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಪ್ರಸಿದ್ಧ ನಾಯಕರಲ್ಲಿ ಒಬ್ಬರಾದ ಲೋಕ ನಾಯಕ ಜಯಪ್ರಕಾಶ್ ನಾರಾಯಣ‌ ಅವರ ಜನ್ಮ ದಿನಾಚರಣೆಯಂದು ನಾನು ವಿನಮ್ರ ಗೌರವ ಅರ್ಪಿಸುತ್ತೇನೆ.

ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಭ್ರಷ್ಟಾಚಾರದ ವಿರು ದ್ಧದ ಅವರ ಹೋರಾಟವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅವರ ಹೋರಾಟವು ಜನರ ಮನಸ್ಸಿನಲ್ಲಿ ಅಳಿಸಲಾಗದೆ ಉಳಿ ದಿದೆ ಎಂದು ನಾಯ್ಡು ಅವರು ಬಣ್ಣಿಸಿದ್ದಾರೆ’ ಎಂದು ಉಪರಾಷ್ಟ್ರಪತಿ ಸಚಿವಾಲಯ ಟ್ವೀಟ್‌ ಮಾಡಿದೆ.