ನವದೆಹಲಿ: ಸಾರ್ವಜನಿಕ ಬ್ಯಾಂಕುಗಳಿಗೆ 3316 ಕೋಟಿ ರೂಪಾಯಿ ನಷ್ಟ ಮಾಡಿದ ಆರೋಪದ ಅಡಿಯಲ್ಲಿ ಪ್ರಥ್ವಿ ಇನ್ಫಾರ್ಮೇಷನ್ ಸಲ್ಯೂಷನ್ ಲಿಮಿಟೆಡ್ನ ಎಂಡಿ ವುಪ್ಪಲಪತಿ ಸತೀಶ್ ಕುಮಾರ್ರನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.
ವಿಎಂಸಿ ಸಿಸ್ಟಂ ಲಿಮಿಟೆಡ್ನ ಎಂಡಿ ಹೀಮಾ ಬಿಂದು ಅವರ ಸಹಕಾರದಿಂದ ಬ್ಯಾಂಕ್ ಒಕ್ಕೂಟಗಳಿಗೆ 3316 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಕುಮಾರ್ರನ್ನು ಮನಿಲ್ಯಾಂಡರಿಂಗ್ ತಡೆ ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಂದು ಎಂಬವರು ಕುಮಾರ್ರ ಸಹೋದರಿ ಆಗಿದ್ದು ಇವರನ್ನೂ ಆ.5ರಂದು ಬಂಧಿಸಲಾಗಿತ್ತು.
ಕಂಪನಿಯ ವಿರುದ್ಧ ಸಿಬಿಐ ದಾಖಲಿಸಿದ ಎಫ್ಐಆರ್ನ್ನು ಆಧರಿಸಿದ ಜಾರಿ ನಿರ್ದೇಶನಾಲಯ ಈ ತನಿಖೆಯನ್ನು ಕೈಗೆತ್ತಿಕೊಂಡಿರುವುದಾಗಿ ಹೇಳಿದೆ. ವಿಎಂಸಿಎಸ್ಎಲ್ ವಿವಿಧ ಸಾರ್ವಜನಿಕ ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದುಕೊಂಡಿದೆ. ಪ್ರಸ್ತುತ ಈ ಕಂಪನಿಯು 3316 ಕೋಟಿ ರೂಪಾಯಿ ಸಾಲದ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ.