Friday, 22nd November 2024

Walking Tips: ನಿತ್ಯ 2 ಕಿ.ಮೀ ಚುರುಕಾಗಿ ನಡೆದರೆ ಎಷ್ಟೆಲ್ಲಾ ಲಾಭವಿದೆ ನೋಡಿ!

Walking Tips

ಯಾವುದೇ ದೈಹಿಕ ಚಟುವಟಿಕೆಗಳನ್ನು ಮಾಡದೆ ಸುಮ್ಮನೆ ಕುಳಿತುಕೊಂಡರೆ ದೇಹ ಜಡವಾಗಿ ಹಲವಾರು ಕಾಯಿಲೆಗಳು ಬರುತ್ತವೆ. ಹಾಗಾಗಿ ಪ್ರತಿದಿನ ಸ್ವಲ್ಪ ಹೊತ್ತಾದರೂ ವಾಕಿಂಗ್‌(Walking Tips) ಮಾಡಿ. ವಾಕಿಂಗ್‌ ಅಂದಮಾತ್ರಕ್ಕೆ ನಿಧಾನವಾಗಿ ನಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ನಿಮಗೆ ವಾಕಿಂಗ್‌ನಿಂದ ಹೆಚ್ಚು ಪ್ರಯೋಜನ ಪಡೆಯಲು ಪ್ರತಿದಿನ 2 ಕಿ.ಮೀ ದೂರ ಚುರುಕಾಗಿ ವಾಕಿಂಗ್‌ ಮಾಡಬೇಕು.  ಇದರಿಂದ ನಿಮಗೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.

ವೈದ್ಯರ ಪ್ರಕಾರ , ಪ್ರತಿದಿನ ಚುರುಕಾಗಿ ವಾಕಿಂಗ್‌ ಮಾಡುವುದರಿಂದ ನಿಮ್ಮ ದೇಹದ  ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಬಹುದು. ನೀವು ಇದನ್ನು ಪ್ರತಿದಿನ ಮಾಡಿದರೆ ಅದು ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ:

Walking Tips

ಹೃದಯರಕ್ತನಾಳ ಮತ್ತು ಉಸಿರಾಟಕ್ಕೆ ಒಳ್ಳೆಯದು: ಚುರುಕಾದ ವಾಕಿಂಗ್ ನಿಮ್ಮ ಹೃದಯ ಮತ್ತು ಶ್ವಾಸಕೋಶಗಳನ್ನು ಬಲಪಡಿಸುತ್ತದೆ. ಅವುಗಳ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ತ್ರಾಣವನ್ನು ಹೆಚ್ಚಿಸುತ್ತದೆ.

ರಕ್ತದೊತ್ತಡ ನಿಯಂತ್ರಣ:

ಈ ರೀತಿಯ ವ್ಯಾಯಾಮವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಕೀಲುಗಳು ನಯಗೊಳ್ಳುವುದು:

ವಾಕಿಂಗ್ ನಿಮ್ಮ ಕೀಲುಗಳನ್ನು ನಯಗೊಳಿಸುತ್ತದೆ ಮತ್ತು ಚಲನಶೀಲವಾಗಿರಿಸುತ್ತದೆ. ಬಿಗಿತವನ್ನು ಕಡಿಮೆ ಮಾಡುತ್ತದೆ.

ಮಧುಮೇಹ ನಿರ್ವಹಣೆ:

ಚುರುಕಾದ ವಾಕಿಂಗ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ, ಇದು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ.

Walking Tips

ತೂಕ ನಿರ್ವಹಣೆ:

ವಾಕಿಂಗ್ ಕ್ಯಾಲೊರಿಗಳನ್ನು ಸುಡುತ್ತದೆ, ತೂಕ ನಷ್ಟ ಅಥವಾ ಆರೋಗ್ಯಕರ ತೂಕ ನಿರ್ವಹಣೆಗೆ ಇದು ಉತ್ತಮವಾಗಿದೆ.

ಚುರುಕಾದ ನಡಿಗೆಯು ಪ್ರಯೋಜನಕಾರಿಯಾಗಿದ್ದರೂ ಕೂಡ ಕೆಲವೊಮ್ಮೆ ಕೆಲವೊಂದು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ನೀವು ಚುರುಕಾದ ವಾಕಿಂಗ್‌ ಮಾಡುವಾಗ ಸರಿಯಾದ ಕ್ರಮಗಳನ್ನು ಪಾಲಿಸಬೇಕೆಂದು ಎಂದು ಡಾ. ಸಿಂಗ್ ಎಚ್ಚರಿಸಿದ್ದಾರೆ.

ಪೋಷಕಾಂಶಗಳ ಕೊರತೆ:

ನೀವು  ವ್ಯಾಯಾಮದ ಜೊತೆಗೆ  ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಇಲ್ಲವಾದರೆ  ಪೋಷಕಾಂಶಗಳ ಕೊರತೆಯಿಂದ ಆಯಾಸ ಉಂಟಾಗಬಹುದು.

ಅನುಚಿತ ತಂತ್ರ ಮತ್ತು ಗಾಯಗಳು:

ವಾಕಿಂಗ್‌ ಮಾಡುವಾಗ  ಸೂಕ್ತವಾದ ಚಪ್ಪಲಿಗಳನ್ನು ಧರಿಸಿ. ಇಲ್ಲವಾದರೆ ಇದರಿಂದ ಪಾದಗಳಿಗೆ ಗಾಯವಾಗಬಹುದು ಮತ್ತು  ನಡೆಯುವಾಗ  ಸ್ನಾಯು ಮತ್ತು ಕೀಲು ನೋವು, ಬಿಗಿತ ಉಂಟಾಗಬಹುದು.

ಇದನ್ನೂ ಓದಿ: ಹಾಲು ಮತ್ತು ಮೀನು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ನೋಡಿ!

ಕೆಲವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಹಾಗಾಗಿ ಅಂಥವರು ಚುರುಕಾದ ವಾಕಿಂಗ್ ದಿನಚರಿಯನ್ನು ಪ್ರಾರಂಭಿಸುವ ಮೊದಲು ಆರೋಗ್ಯ ತಜ್ಞರನ್ನು  ಸಂಪರ್ಕಿಸುವುದು ಸೂಕ್ತ.