Sunday, 16th June 2024

ಸೇನಾ ಆವರಣದ ಗಡಿ ಗೋಡೆ ಕುಸಿತ: ಒಂಬತ್ತು ಮಂದಿ ಸಾವು

ಕ್ನೋ: ಸೇನಾ ಆವರಣದ ಗಡಿ ಗೋಡೆ ಭಾರೀ ಮಳೆಯಿಂದಾಗಿ ಕುಸಿದು ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ಲಕ್ನೋ ಹೊರ ಪ್ರದೇಶದಲ್ಲಿ ಘಟನೆ ನಡೆದಿದೆ. ದಿಲ್ಕುಶಾ ಬಳಿ ಭಾರತೀಯಸೇನಾ ಪಡೆಯ ಪ್ರದೇಶವಿದ್ದು ಸುತ್ತಲು ಭದ್ದತೆಗಾಗಿ ದೊಡ್ಡಗೋಡೆ ಕಟ್ಟಲಾಗಿದೆ. ಇತ್ತೀಚೆಗೆ ಕೆಲವು ಕಾರ್ಮಿಕರು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು.

ಕಳೆದ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಹೊರಭಾಗದ ಗೋಡೆ ಗುಡಿಸಲ ಮೇಲೆ ಕುಸಿದಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಿಯೂಷ್ ಮೊರ್ಡಿಯಾ ತಿಳಿಸಿದ್ದಾರೆ. ಸುಮಾರು 15 ಮಂದಿ ಇಲ್ಲಿ ವಾಸವಿದ್ದರೆನ್ನಲಾಗಿದೆ ಮಳೆಯ ಕಾರಣ ಕೆಲವರು ಎಚ್ಚರ ದಲ್ಲಿದ್ದರು, ಕೆಲವರು ಮಲಗಿದ್ದರು.

ತುರ್ತು ನಿರ್ವಾಹಣಾ ಪಡೆ ಮತ್ತ ಆಗ್ನಿ ಶಾಮಕ ಪಡೆ ಕಾರ್ಯಾಚರಣೆ ನಡೆಸಿ ಅವಶೇಷ ಗಳಿಂದ ಒಬ್ಬ ವ್ಯಕ್ತಿಯನ್ನು ಜೀವಂತ ವಾಗಿ ಹೊರ ತೆಗೆಯಲಾಗಿದೆ. 9 ಜನ ಕೊನೆಯುಸಿ ರೆಳೆದಿದ್ದಾರೆ. ಮೃತರಲ್ಲಿ ಮಹಿಳೆಯರು ,ಮಕ್ಕಳು ಇದ್ದಾರೆ ,ಮಳೆಯಲ್ಲೇ ಶವಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಗಳಿಗೆ 4 ಲಕ್ಷ ರೂ ಪರಿಹಾರವನ್ನು ಘೋಷಿಸಿ ದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ಸೂಚನೆಗಳನ್ನು ನೀಡಿದ್ದಾರೆ. ಉಪಮುಖ್ಯ ಮಂತ್ರಿ ಬ್ರಜೇಶ್ ಪಾಠಕ್ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

error: Content is protected !!