Thursday, 12th December 2024

ಜೈಸಲ್ಮೇರ್ ಬಳಿ ಲಘು ಯುದ್ಧ ವಿಮಾನ ಅಪಘಾತ

ವದೆಹಲಿ: ಭಾರತೀಯ ವಾಯುಪಡೆಯ (IAF) ಲಘು ಯುದ್ಧ ವಿಮಾನ (LCA) ತೇಜಸ್ ಮಂಗಳವಾರ ರಾಜಸ್ಥಾನದ ಜೈಸಲ್ಮೇರ್ ಬಳಿ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಅಪಘಾತಕ್ಕೀಡಾಗಿದೆ.

ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದು, ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ.

“ಭಾರತೀಯ ವಾಯುಪಡೆಯ ಒಂದು ತೇಜಸ್ ವಿಮಾನವು ಇಂದು ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಜೈಸಲ್ಮೇರ್ನಲ್ಲಿ ಅಪಘಾತ ಕ್ಕೀಡಾಗಿದೆ. ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಅಪಘಾತದ ಕಾರಣ ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯವನ್ನು ರಚಿಸಲಾಗಿದೆ” ಎಂದು ತಿಳಿಸಿದೆ.