• ಅತ್ಯುತ್ತಮ ವಿತರಣಾ ಜಾಲವನ್ನು ಹೊಂದಿರುವ ಡಿಸ್ಟ್ರಿಬ್ಯೂಷನ್ ಕಂಪನಿ ಆಗಿರುವ ಬಿಝೊಟಿಕೊ ಭಾರತದಾದ್ಯಂತ ಇರುವ ಪ್ರೀಮಿಯಂ ವಾಚ್ ಮಳಿಗೆಗಳಲ್ಲಿ ರೋಮರ್ ಕಂಪನಿಯ ಮೆಕ್ಯಾನೋ ವಾಚ್ ಗಳನ್ನು ಮಾರಾಟ ಮಾಡಲಿದೆ.
• ರೋಮರ್ ಕಂಪನಿಯ ಮೆಕ್ಯಾನೋ ವಾಚ್ ಗಳ ಆರಂಭಿಕ ಬೆಲೆ ರೂ. 1,31,950.
ಭಾರತದಲ್ಲಿನ ಐಷಾರಾಮಿ ವಾಚ್ ಗಳ ಪ್ರಮುಖ ವಿತರಕರಾಗಿರುವ ಬಿಝೊಟಿಕೊ ಗ್ರೂಪ್ ಪ್ರಸಿದ್ಧ ಸ್ವಿಸ್ ವಾಚ್ ತಯಾರಿಕಾ ಕಂಪನಿ ಆಗಿರುವ ರೋಮರ್ ನ ಸೊಗಸಾದ ವಾಚ್ ಸಂಗ್ರಹ ಮೆಕ್ಯಾನೋ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ಬಿಝೊಟಿಕೊ ಸಂಸ್ಥೆಯು ಅತ್ಯುತ್ತಮ ಸ್ವಿಸ್ ಕರಕುಶಲತೆ ಹೊಂದಿರುವ ವಾಚ್ ಸಂಗ್ರಹವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ಪ್ರಸ್ತುತ ರೋಮರ್ ಆಫ್ ಸ್ವಿಟ್ಜರ್ಲೆಂಡ್ ಎಂಬ ಹೆಸರನ್ನು ಹೊಂದಿರುವ ಈ ಸ್ವಿಸ್ ವಾಚ್ ತಯಾರಕ ಕಂಪನಿಯ ಮೂಲಕ್ಕೆ ಹೋದರೆ ಕಂಪನಿಯ ಹೆಸರು ಬೇರೆಯೇ ಇತ್ತು. ಮೆಯೆರ್ & ಸ್ಟುಡೆಲಿ ಎಂಬ ಹೆಸರಿನಲ್ಲಿ ಈ ಕಂಪನಿಯು ಇಪ್ಪತ್ತನೇ ಶತಮಾನದ ಆರಂಭದಿಂದಲೂ ಸ್ವಿಸ್ ಸಂಪ್ರದಾಯವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವ ವಿಶಿಷ್ಟ ವಿನ್ಯಾಸದ ವಾಚ್ ಗಳನ್ನು ತಯಾರಿಸುತ್ತಿತ್ತು. ಮೆಯೆರ್ & ಸ್ಟುಡೆಲಿ ಎಂಬಿಬ್ಬರು ಈ ವಾಚ್ ಸಂಸ್ಥೆಯ ಪಿತಾಮಹರಾಗಿದ್ದಾರೆ. ಕೇವಲ ಸಮಯವನ್ನು ತೋರಿಸುವ ಕೆಲಸಕ್ಕಿಂತ ಭಿನ್ನವಾಗಿ ಕೈ ಯ ಆಕರ್ಷಣೆಯನ್ನು ಹೆಚ್ಚಿಸುತ್ತಿದ್ದ ಈ ಅದ್ದೂರಿ ವಾಚ್ ಅನ್ನು ಜಾಗತಿಕ ಮಟ್ಟದ ಅಭಿಮಾನಿಗಳು ಮತ್ತು ವಾಚ್ ಸಂಗ್ರಹಕಾರರು ದೊಡ್ಡ ಸಂಭ್ರಮವಾಗಿ ಆಚರಿಸುತ್ತಿದ್ದರು. ರೋಮರ್ ಆಫ್ ಸ್ವಿಟ್ಜರ್ಲೆಂಡ್ ಕಂಪನಿಯ ಹೊಚ್ಚ ಹೊಸ ಮೆಕ್ಯಾನೋ ವಾಚ್ ಮ್ಯಾನ್ಯುವಲ್ ವೈಂಡಿಂಗ್ ಹೊಂದಿರುವ, ಆಯತಾಕಾರದ ವಿನ್ಯಾಸದ, ಅತ್ಯಾಕರ್ಷಕ ಶೈಲಿ ಹೊಂದಿರುವ ಪುರುಷರ ವಾಚ್ ಆಗಿದೆ. ಇದರ ಸೊಗಸಾದ ವಿನ್ಯಾಸವು ನಿಮ್ಮ ಗಮನ ಸೆಳೆಯುವಂತಿದ್ದು, ಈ ವಾಚ್ ನಿಮ್ಮ ಆದ್ಯತೆಯ ವಾಚ್ ಆಗಿ ಹೊರಹೊಮ್ಮುವಂತೆ ರೂಪುಗೊಂಡಿದೆ. ಹೋರಾಲಾಜಿಕಲ್ ಎಂಜಿನಿಯರಿಂಗ್ ನ ಈ ಅದ್ಭುತ ವಾಚ್ 44 ಗಂಟೆಗಳ ಕಾಲ ವಿದ್ಯುತ್ ಬಾಳಿಕೆ ಬರುವ ಸೌಲಭ್ಯ ಹೊಂದಿದ್ದು, ಸುದೀರ್ಘ ಕಾಲ ಸಮಯದ ಅರಿವು ಮೂಡಿಸಲು ಬದ್ಧವಾಗಿದೆ.
ಈ ವಾಚ್ ನ ವಿಶಿಷ್ಟತೆ ಎಂದರೆ ಇದು ಅತ್ಯಾಧುನಿಕ ಇಂಕಾಬ್ಲಾಕ್® ಎಂಬ ಶಾಕ್ ಪ್ರೊಟೆಕ್ಷನ್ ಸಿಸ್ಟಮ್ ಹೊಂದಿದೆ. ಈ ವ್ಯವಸ್ಥೆಯು ವಾಚ್ ಕಟ್ಟಿಕೊಂಡಿರುವವರು ಎದುರಿಸಬಹುದಾದ ಅನಿರೀಕ್ಷಿತ ಆಘಾತಗಳಿಂದ ರಕ್ಷಣೆ ಒದಗಿಸುತ್ತದೆ. ಜೊತೆಗೆ ದೀರ್ಘ ಬಾಳಿಕೆ ಬರುವಂತೆ ಮಾಡುತ್ತದೆ. ಇದರ ಜೊತೆಗೆ ವಾಚ್ ನಲ್ಲಿ 18 ಆಭರಣಗಳನ್ನು ಬಳಸಲಾಗಿದ್ದು, ಆ ಅಂಶಗಳು ಚಲಿಸುವ ಭಾಗಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ನಿಖರವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಜೊತೆಗೆ ಈ ಭಾಗಗಳು ವಾಚ್ ನ ಆಂತರಿಕ ಮೆಕ್ಯಾನಿಸಂನಲ್ಲಿಯೂ ಅದ್ದೂರಿತನ ತುಂಬುತ್ತದೆ. ಆಕರ್ಷಣೆ ಒದಗಿಸುತ್ತದೆ. ಸಾಂಪ್ರದಾಯಿಕ ಕರಕುಶಲತೆ ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಜೊತೆ ಸೇರಿಸಿ ಕಾರ್ಯನಿರ್ವಹಣೆಯಲ್ಲಿ ಮಾಸ್ಟರ್ ಪೀಸ್ ಅನ್ನಿಸಿಕೊಳ್ಳುವ ಮತ್ತು ಘನತೆಗೆ ಭಾಷ್ಯ ಬರೆಯುವ ವಾಚ್ ಗಳನ್ನು ತಯಾರಿಸುವ ರೋಮರ್ ಆಫ್ ಸ್ವಿಟ್ಜರ್ಲೆಂಡ್ ಕಂಪನಿಯ ಬದ್ಧತೆಗೆ ಈ ಮೆಕ್ಯಾನೋ ವಾಚ್ ಸಂಗ್ರಹವು ಸಾಕ್ಷಿಯಾಗಿದೆ.
ಮೆಕ್ಯಾನೋ ವಾಚ್ ಉನ್ನತ ದರ್ಜೆಯ ಸ್ವಿಸ್ ಸಾಮರ್ಥ್ಯದ ಕಾರ್ಯನಿರ್ವಹಣೆ ಒದಗಿಸುವ ಮತ್ತು ಕ್ಲಾಸಿ, ವಿಂಟೇಜ್ ಹಾಗೂ ವಿಶಿಷ್ಟ ವಿನ್ಯಾಸದ ಲುಕ್ ಅನ್ನು ಹೊಂದಿರುವ ವಾಚ್ ಗೆ ಪರಿಪೂರ್ಣ ಉದಾಹರಣೆಯಾಗಿದೆ. ಅತ್ಯುತ್ತಮ ಗುಣಮಟ್ಟದ ಸ್ಕ್ವೇರ್ ಆಕಾರದ ಕೇಸ್ ಮತ್ತು ಡಯಲ್ ವಿನ್ಯಾಸವನ್ನು ಹೊಂದಿರುವ ಈ ವಾಚ್ ರೌಂಡ್ ಸ್ಕೆಲಿಟನ್ ವಿಂಡೋ ಹೊಂದಿದೆ. ಅದು ಈ ಸಂಸ್ಥೆಯ ಸಂಸ್ಥಾಪಕರಾದ ಮೆಯೆರ್ ಮತ್ತು ಸ್ಟೂಡೆಲಿ ಸಹಿ ಮಾಡಿರುವ ಸ್ವಿಸ್ ಮೇಡ್ ಮೆಕ್ಯಾನಿಕಲ್ ಹ್ಯಾಂಡ್- ವೈಂಡಿಂಗ್ ಎಂ ಎಸ್ ಟಿ -23 ಚಲನೆಯ ಭಾಗವನ್ನು ಸೊಗಸಾಗಿ ಕಾಣಿಸುತ್ತದೆ. ಗ್ಲಾಸ್ ಕೇಸ್ಬ್ಯಾಕ್ ಮೂಲಕ ನೀವು ವಾಚ್ ನ ಕಾರ್ಯ ನಿರ್ವಹಣೆಯನ್ನು ವೀಕ್ಷಿಸಬಹುದಾಗಿದ್ದು, ಮ್ಯಾನ್ಯುವಲ್- ವಿಂಡ್ ಮೆಕ್ಯಾನೋದ ಹೃದಯ ಭಾಗವನ್ನು ಕಂಡು ವಾಚ್ ಅನ್ನು ಮತ್ತಷ್ಟು ಮೆಚ್ಚಿಕೊಳ್ಳಬಹುದು.
ಮೆಕ್ಯಾನೋ ವಾಚ್ ಸ್ಕ್ರಾಚ್- ರೆಸಿಸ್ಟೆಂಟ್ ಆಂಟಿ ರಿಫ್ಲೆಕ್ಟಿವ್ ಸಫೈರ್ ಕ್ರಿಸ್ಟಲ್ ನ ಸ್ಕೆಲಿಟನ್ ವಿಂಡೋ ಹೊಂದಿದ್ದು, ಅದು ನೀಲಿ, ಕಪ್ಪು, ಹಸಿರು ಅಥವಾ ಆಕರ್ಷಕ ಕಂದು ಬಣ್ಣದ ಡಯಲ್ ಅನ್ನು ಹೊಂದಿದೆ. 12 ಗಂಟೆ ಸ್ಥಾನದಲ್ಲಿ ಇರುವ ತೆಳುವಾದ ಬ್ಯಾಟನ್ ಹವರ್ ಮಾರ್ಕರ್ ಗಳು ಡಯಲ್ ನ ಆಕರ್ಷಣೆಯನ್ನು ಮತ್ತಷ್ಟು ಜಾಸ್ತಿ ಮಾಡಿದೆ. ಈ ವಾಚ್ ಖರೀದಿಸುವವರು ಗಮನಿಸಬೇಕಾದ ಅಂಶವೆಂದರೆ ಸ್ಟ್ರಾಪ್ ಬದಲಾಯಿಸಬಹುದಾದ ಬಾಕ್ಸ್ ಸೆಟ್ ನಲ್ಲಿ ದೊರೆಯುವ ಈ ವಾಚ್ ನ ಐದು ಮಾಡೆಲ್ ಗಳು ಬರುತ್ತವೆ ಮತ್ತು ಬಾಕ್ಸ್ ನಲ್ಲಿ ಹೆಚ್ಚುವರಿ ವಾಚ್ ಸ್ಟ್ರಾಪ್ ಅನ್ನೂ ನೀಡಲಾಗುತ್ತದೆ.
ಮಾಡೆಲ್ ವಿನ್ಯಾಸದ ಜೊತೆಗೆ ಕಲರ್ ಕೋಆರ್ಡಿನೇಷನ್ ಮಾಡುವ ಸಂದರ್ಭದಲ್ಲಿ ನೀವು ಮೊಸಳೆಯ ಮಾದರಿಯ ಕಪ್ಪು, ನೀಲಿ ಅಥವಾ ಕಂದು ಬಣ್ಣ ಹೊಂದಿರುವ, ಕೈಯಿಂದ ರಚಿಸಲಾದ ಇಟಾಲಿಯನ್ ಲೆದರ್ ಸ್ಟ್ರಾಪ್ ಅನ್ನು ಹೊಂದಬಹುದು. ವಾಚ್ ನ ಸ್ಟ್ರಾಪ್ ಅನ್ನು ಸುಲಭ ಬದಲಾವಣೆ ಮಾಡಲು ಅನುವು ಮಾಡಿಕೊಡುವ ಪುಶ್ ಪಿನ್ ವ್ಯವಸ್ಥೆ ಇರುವುದರಿಂದ ಶೀಘ್ರವೇ ಯಾವುದೇ ಟೂಲ್ ಗಳನ್ನು ಬಳಸದೆಯೇ ಈ ವಾಚ್ ನ ಸ್ಟ್ರಾಪ್ ಬದಲಿಸಿ ಲುಕ್ ಅನ್ನು ಬದಲಿಸಬಹುದಾಗಿದೆ. ಅದರಿಂದ ಗ್ರಾಹಕರು ಸಂತೋಷಕರ ಅನುಭವ ಹೊಂದುತ್ತಾರೆ.
ಬೆಂಗಳೂರಿನಲ್ಲಿ ಇರುವ ಸುಂದರ ಝಿಮ್ಸನ್ ವಾಚ್ ಮಳಿಗೆಯಲ್ಲಿ ನಡೆದ ವಾಚ್ ಬಿಡುಗಡೆ ಸಮಾರಂಭದಲ್ಲಿ ರೋಮರ್ ಹಾಗೂ ಜಾಕ್ವೆಸ್ ಡು ಮನೋಯಿರ್ ಕಂಪನಿಯ ಸಿಇಓ ಮತ್ತು ಮಾಲೀಕ ಕ್ರಿಶ್ಚಿಯನ್ ಫ್ರೊಮ್ಹೆರ್ಜ್ ಮೆಕ್ಯಾನೋ ವಾಚ್ ಸಂಗ್ರಹವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಆಂಟೊನೆಲ್ಲೊ ಮಿಸೆರಿನೊ, ಎಫ್ಎಂ ಸ್ವಿಸ್ ಲಾಜಿಸ್ಟಿಕ್ಸ್ ನ ಸಿಇಒ, ರೋಮರ್ ಹಾಗೂ ಜಾಕ್ವೆಸ್ ಡು ಮನೋಯಿರ್ ಕಂಪನಿಯ ಸೇಲ್ಸ್ ನಿರ್ದೇಶಕರಾದ ಟೋನಿ ಹ್ಯಾರಿಸ್, ಬಿಝೊಟಿಕೊ ಗ್ರೂಪ್ ನ ನಿರ್ದೇಶಕ ಅಜಯ್ ಗೋಪಾಲ್, ಬಿಝೊಟಿಕೊ ಸಂಸ್ಥೆಯ ಮತ್ತು ಮೊವಾಡೊ ಗ್ರೂಪ್ ಇಂಡಿಯಾದ ನಿರ್ದೇಶಕ ಅಕ್ಷಯ್ ಗೋಪಾಲ್, ಬಿಝೊಟಿಕೊ ಸಂಸ್ಥೆಯ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ಪಿಯೂಷ್ ಜೈನ್, ದಕ್ಷಿಣ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಚೇತನ್ ಟಿಆರ್, ಝಿಮ್ಸನ್ ವಾಚಸ್ ಸಂಸ್ಥೆಯ ನಿರ್ದೇಶಕ ಶಮೊಯೆಲ್ ಮತ್ತು ಝಿಮ್ಸನ್ ವಾಚಸ್ ಸಂಸ್ಥೆಯ ಸೇಲ್ಸ್ ವಿಭಾಗದ ರೀಜನಲ್ ಮ್ಯಾನೇಜರ್ ಪಿ.ರಾಜೇಂದ್ರನ್ ಉಪಸ್ಥಿತರಿದ್ದರು.
ಈ ವಾಚ್ ಸಂಗ್ರಹದ ಕುರಿತು ಮಾತನಾಡಿದ ರೋಮರ್ ಮತ್ತು ಜಾಕ್ವೆಸ್ ಡು ಮನೋಯಿರ್ ಕಂಪನಿಯ ಸಿಇಓ ಮತ್ತು ಮಾಲೀಕರಾದ ಕ್ರಿಶ್ಚಿಯನ್ ಫ್ರೊಮ್ಹೆರ್ಜ್ ಅವರು, “ರೋಮರ್ ನ ಮೆಕ್ಯಾನೋ ಸಂಗ್ರಹವನ್ನು ಭಾರತಕ್ಕೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು 135 ವರ್ಷಗಳ ಹಿಂದಿನ ಸ್ವಿಸ್ ವಿನ್ಯಾಸದ ಪರಂಪರೆಯನ್ನು ಹೊಂದಿರುವ ಈ ವಾಚ್ ಅನ್ನು ಗ್ರಾಹಕರ ವಿಭಾಗದಲ್ಲಿ ಪ್ರಸ್ತುತ ಪಡಿಸಲು ಸಂತೋಷ ಹೊಂದಿದ್ದೇವೆ.
ರೋಮರ್ ಸಂಸ್ಥೆಯಲ್ಲಿ ನಾವು ಉತ್ತಮ ಗುಣಮಟ್ಟದ ವಾಚ್ ಗಳನ್ನು ಉತ್ಪಾದಿಸುವ ಸಂಪ್ರದಾಯ ಮತ್ತು ಪರಂಪರೆಯನ್ನು ಹೊಂದಿದ್ದೇವೆ. ಈ ಸಂಸ್ಥೆ ಪ್ರಾರಂಭವಾದಾಗಿನಿಂದಲೂ ನಾವು ವಾಚ್ ತಯಾರಿಕೆಯ ವಿಚಾರದಲ್ಲಿ ನಿರಂತರವಾಗಿ ಹೊಸ ಹೊಸ ಆವಿಷ್ಕಾರವನ್ನು ನಡೆಸುತ್ತಲೇ ಬಂದಿದ್ದೇವೆ. ಹಾಗಾಗಿಯೇ ಪ್ರಪಂಚದಾದ್ಯಂತ ನಮ್ಮ ಬ್ರ್ಯಾಂಡ್ ದಿನೇದಿನೇ ಹೆಚ್ಚಿನ ಖ್ಯಾತಿ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿದೆ.
ಭಾರತದಲ್ಲಿ ಬಿಝೊಟಿಕೊ ಜೊತೆಗಿನ ನಮ್ಮ ಸಹಭಾಗಿತ್ವದ ಮೂಲಕ ಮೆಕ್ಯಾನೋ ವಾಚ್ ಸಂಗ್ರಹವನ್ನು ಭಾರತದಾದ್ಯಂತ ಇರುವ ಸೊಗಸಾದ, ಸೂಕ್ತವಾದ ಗ್ರಾಹಕ ಸಮೂಹಕಕ್ಕೆ ಒದಗಿಸುತ್ತಿದ್ದೇವೆ. ದೊಡ್ಡದನ್ನು ಆಲೋಚಿಸುವ ಭಾರತೀಯ ಗ್ರಾಹಕರಿಗೆ ಪರಂಪರೆ ಮತ್ತು ಆಧುನಿಕತೆಯ ಸಂಯೋಜನೆಯಂತೆ ಮೂಡಿ ಬಂದಿರುವ ಮತ್ತು ಕಾಲಾತೀತ ಸೊಬಗನ್ನು ಹೊಂದಿರುವ ವಾಚ್ ಅನ್ನು ನೀಡಲು ನಮಗೆ ಹೆಮ್ಮೆ ಇದೆ” ಎಂದು ಹೇಳಿದರು.
ಝಿಮ್ಸನ್ ವಾಚಸ್ ನ ನಿರ್ದೇಶಕರಾದ ಶಮೋಯೆಲ್ ಅವರು ಮಾತನಾಡಿ, “ನಾವು ಭಾರತೀಯ ಗ್ರಾಹಕರಿಗೆ ನಮ್ಮ ಪ್ರೀಮಿಯಂ ಉತ್ಪನ್ನ ಗಳಲ್ಲಿ ಒಂದಾಗಿರುವ ಸ್ವಿಸ್ ಮೇಡ್ ರೋಮರ್ ನ ಅತ್ಯುತ್ತಮ ಉತ್ಪನ್ನವಾದ ಮೆಕ್ಯಾನೋವನ್ನು ಒದಗಿಸಲು ನಾವು ಉತ್ಸುಕರಾಗಿದ್ದೇವೆ. ಶ್ರೀಮಂತ ಸ್ವಿಸ್ ಪರಂಪರೆ, ಕರಕುಶಲತೆ ಮತ್ತು ಗುಣಮಟ್ಟವನ್ನು ಹೊಂದಿರುವ ರೋಮರ್ ನ ಮೆಕ್ಯಾನೋ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಸೊಗಸಾದ ವಿನ್ಯಾಸ ಎರಡನ್ನೂ ಇಷ್ಟಪಡುವ ಭಾರತೀಯ ಗ್ರಾಹಕರ ಮನ ಸೆಳೆಯಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.
ಬೆಳ್ಳಿ, ಚಿನ್ನ ಅಥವಾ ರೋಸ್ ಗೋಲ್ಡ್ ಬಣ್ಣದಲ್ಲಿರುವ ಆಕರ್ಷಕ ತೆಳುವಾದ ಬ್ಯಾಟನ್ ಮಾರ್ಕರ್ ಗಳನ್ನು ಹೊಂದಿರುವ ಈ ವಾಚ್ ನ ಡಯಲ್ ಗಳು ಕಪ್ಪು, ನೀಲಿ, ಹಸಿರು ಮತ್ತು ಕಂದು ಸೇರಿದಂತೆ ಹಲವು ಅತ್ಯಾಕರ್ಷಕ ಬಣ್ಣಗಳಲ್ಲಿ ದೊರೆಯುತ್ತವೆ. ದೂರದಿಂದಲೂ ಹೊಳೆಯುವ ವಾಚ್ ನ ಬ್ಯಾಟನ್ ಶ್ರೇಷ್ಠತೆಯ ಕುರುಹಾಗಿ ಕಾಣಿಸುವುದು ಈ ವಾಚ್ ನ ವಿಶೇಷತೆಯಾಗಿದೆ. ವಿಂಟೇಜ್ ಲುಕ್ ಅನ್ನು ಒದಗಿಸುವ ಸೊಗಸಾದ ಸ್ಟೇನ್ಲೆಸ್ ಸ್ಟೀಲ್ ಬ್ರೇಸ್ಲೆಟ್ ಮತ್ತು ಹೆಚ್ಚುವರಿ ಲೆದರ್ ಸ್ಟ್ರಾಪ್ ಅನ್ನು ಹೊಂದಿರುವ ಮೆಕ್ಯಾನೋ ವಾಚ್ ಬದಲಾಯಿಸಬಹುದಾದ ಬಾಕ್ಸ್ ಸೆಟ್ ಜೊತೆಗೆ ಲಭ್ಯವಿದ್ದು, ಗ್ರಾಹಕರ ಆದ್ಯತೆಗೆ ತಕ್ಕಂತೆ ಕಸ್ಟಮೈಸೇಶನ್ ಮಾಡುವುದು ಬಹಳ ಸುಲಭವಾಗಿದೆ. ಅತ್ಯಾಧುನಿಕ ಪುಷ್- ಪಿನ್ ವ್ಯವಸ್ಥೆಯನ್ನು ಹೊಂದಿರುವ ಈ ವಾಚ್ ನಲ್ಲಿ ಸ್ಟ್ರಾಪ್ ಬದಲಾವಣೆಗಳನ್ನು ಮಾಡುವುದು ತುಂಬಾ ಸುಲಭವಾಗಿದೆ ಮತ್ತು ಶೀಘ್ರವಾಗಿ ಮಾಡಬಹುದಾಗಿದೆ. ಈ ಮೂಲಕ ಗ್ರಾಹಕರ ಮೂಡ್ ಮತ್ತು ವಾತಾವರಣದ ಅವಶ್ಯಕತೆಗೆ ತಕ್ಕಂತೆ ವಾಚ್ ಅನ್ನು ವಿಶಿಷ್ಟವಾಗಿ ಕಾಣಿಸಬಹುದಾಗಿದೆ.
ಬಿಝೊಟಿಕೊ ಜೊತೆ ರೋಮರ್ ನ ಸಹಯೋಗ ಮಾಡಿಕೊಂಡಿದ್ದು, ಇದರಿಂದ ಸ್ವಿಸ್ ವಾಚ್ಮೇಕರ್ ರೋಮರ್ ಸಂಸ್ಥೆಯು 250ಕ್ಕೂ ಹೆಚ್ಚು ರಿಟೇಲ್ ಅಂಗಡಿಗಳು ಮತ್ತು ಪಾಲುದಾರರನ್ನು ಒಳಗೊಂಡಿರುವ ಬಿಝೊಟಿಕೊ ಸಂಸ್ಥೆಯ ಅತ್ಯುತ್ತಮ ವಿತರಣಾ ಜಾಲವನ್ನು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ. ಈ ಸಹಯೋಗದಿಂದ ಭಾರತದಲ್ಲಿ ಪ್ರೀಮಿಯಂ ವಾಚ್ ಮಳಿಗೆಗಳಲ್ಲಿ ಮೆಕ್ಯಾನೋ ವಾಚ್ ಸುಲಭವಾಗಿ ಲಭ್ಯವಾಗಲಿದೆ.
ರೋಮರ್ ನ ಮೆಕ್ಯಾನೋ ವಾಚ್ ಗಳ ಆರಂಭಿಕ ಬೆಲೆ ರೂ. 1,31,950.