Friday, 22nd November 2024

ನೀರು ಶುದ್ಧವಾಗಿದೆ ಎಂದು ಸಾಬೀತುಪಡಿಸಲು ಜಲ ಮಂಡಳಿ ನಿರ್ದೇಶಕರು ಅದೇ ನೀರಿನಲ್ಲಿ ಮಿಂದರು…

ನವದೆಹಲಿ: ಯಮುನಾ ನದಿ ನೀರು ಕಲುಷಿತವಾಗಿದೆ ಎಂದು ಆರೋಪಗಳು ಕೇಳಿ ಬಂದ ಹಿನ್ನೆಲೆ ನೀರು ಶುದ್ಧವಾಗಿದೆ ಎಂದು ಸಾಬೀತುಪಡಿಸಲು ದೆಹಲಿಯ ಜಲ ಮಂಡಳಿ ನಿರ್ದೇಶಕರು ಅದೇ ನೀರಿನಲ್ಲಿ ಸ್ನಾನ ಮಾಡಿದ್ದಾರೆ.
ದೆಹಲಿಯಲ್ಲಿ ಛತ್ ಪೂಜೆ ಸಮೀಪಿಸುತ್ತಿದ್ದಂತೆ ಯಮುನಾ ನದಿ ನೀರಿಗೆ ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಲಾಗಿದೆ.
ಇದರಿಂದ ನದಿ ನೀರು ವಿಷಪೂರಿತವಾಗಿದ್ದು, ಕಲುಷಿತಗೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು, ಯಮುನಾದ ಕಾಳಿಂದಿ ಕುಂಜ್ ಘಾಟ್ಗೆ ಭೇಟಿ ನೀಡಿದ್ದರು. ಈ ವೇಳೆ ಕೆಲ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಲ ಮಂಡಳಿ ನಿರ್ದೇಶಕ ಸಂಜಯ್ ಶರ್ಮಾ ಅವರು ಯಮುನಾ ನದಿ ನೀರಿನಲ್ಲಿ ಸ್ನಾನ ಮಾಡಿ, ಇದರ ವಿಡಿಯೋ ಮಾಡಿ ನೀರು ಕಲುಷಿತಗೊಂಡಿಲ್ಲ ಎಂಬುದನ್ನು ಸಾಬೀತುಪಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಈ ನೀರಿನಿಂದ ಯಾವುದೇ ಸಮಸ್ಯೆಯಾಗಿಲ್ಲ. ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ನಿರೂಪಿಸಲು ಸ್ವತಃ ನೀರಿನಲ್ಲಿ ಸ್ನಾನ ಮಾಡಿದ್ದೇನೆ ಎಂದರು.