Sunday, 15th December 2024

ಬಿಸಿಲ ಧಗೆ ನಿವಾರಿಸುವ ಕಲ್ಲಂಗಡಿ ಜೀವವನ್ನೇ ಬಲಿ ತೆಗೆದುಕೊಂಡರೆ ….?

ಹೈದರಾಬಾದ್​: ಈಗಿನ ಬೇಸಿಯ ಧಗೆಯಲ್ಲಿ ಸಾವರಿಸಿಕೊಳ್ಳಲು ಕಲ್ಲಂಗಡಿ ಹಣ್ಣು ಹೆಚ್ಚು ಹಿತಕರ. ಆದರೆ, ಇದನ್ನು ಆಗಾಗ್ಗೆ ಸೇವಿಸುವವರು ಅಷ್ಟೇ ಜಾಗರೂಕತೆ ವಹಿಸುವುದು ತುಂಬಾ ಮುಖ್ಯ. ಕಾರಣ, ಕಲ್ಲಂಗಡಿ ತಿಂದ ಬಳಿಕ ಬಾಲಕರು ಮೃತಪಟ್ಟ ಘಟನೆ ನೆರೆಯ ತೆಲಂಗಾಣ ರಾಜ್ಯದಲ್ಲಿ ಸಂಭವಿಸಿದೆ.

ಕಲ್ಲಂಗಡಿ ಹಣ್ಣು ತಿಂದ ಬಾಲಕರಿಬ್ಬರು ಮೃತಪಟ್ಟ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ್ದು, ಮೂವರು ಸಾವು-ಬದಕಿನ ನಡುವೆ ಹೋರಾಡುತ್ತಿದ್ದಾರೆ.

ಪೆದ್ದಪಲ್ಲಿಯ ಇಸ್ಸಾಂಪೇಟಾ ಗ್ರಾಮದ ಕುಟುಂಬ ಮನೆಗೆ ಕಲ್ಲಂಗಡಿ ಹಣ್ಣನ್ನು ತಂದಿದ್ದಾರೆ. ಮೊದಲ ಅರ್ಧವನ್ನು ತಿಂದು, ಉಳಿದರ್ಧವನ್ನು ಕಪ್​ಬೋರ್ಡ್​ನಲ್ಲಿ ಇಟ್ಟಿದ್ದರು. ಮತ್ತೆ ರಾತ್ರಿ ಹಣ್ಣನ್ನು ತಿಂದ ಬಳಿಕ ಕೆಲವೇ ಕ್ಷಣಗಳಲ್ಲಿ ನಡು ರಾತ್ರಿಯಲ್ಲಿ ಕುಟುಂಬ ನೋವಿನಿಂದ ನರಳಾಡಿದೆ.

ತಕ್ಷಣ ಕರೀಮ್​ನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಯಾಗದೇ ಬಾಲಕರಾದ ದರವೇಣಿ ಸಿವಾನಂದು (12) ಮತ್ತು ಚರಣ್​ (10) ಮೃತ ಪಟ್ಟಿದ್ದಾರೆ. ಉಳಿದ ಸದಸ್ಯರಾದ ಶ್ರೀಶೈಲಂ, ಗುಣವತಿ ಮತ್ತು ಅಜ್ಜಿ ಸರಮ್ಮಲ್​ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಪ್ರಕರಣದ ತನಿಖೆ ಬೆನ್ನತ್ತಿದ ಪೊಲೀಸರಿಗೆ ಸತ್ಯಾಂಶ ತಿಳಿದು ಶಾಕ್​ ಆಗಿದೆ. ಮಕ್ಕಳು ಸಾವು ಮತ್ತು ಕುಟುಂಬದ ನೋವಿಗೆ ಮೂಲ ಕಾರಣವೇ ಇಲಿ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಮನೆಯಲ್ಲಿ ಇಲಿ ಕಾಟ ಹೆಚ್ಚಾಗಿದ್ದರಿಂದ ಅವುಗಳನ್ನು ಕೊಲ್ಲಲು ಇಲಿ ಪಾಶಾಣವನ್ನು ಮನೆಗೆ ತಂದಿದ್ದರು. ಇಲಿ ಪಾಶಾಣ ವನ್ನು ಸಿಂಪಡಿಸಿ ಉಳಿದದ್ದನ್ನು ಒಂದು ಕಪ್​ಬೋರ್ಡ್​ನಲ್ಲಿ ಇಟ್ಟಿದ್ದರು. ಇಲಿ ಪಾಶಾಣ ಸೇವಿಸಿ, ಅದೇ ಬಾಯಿಯಲ್ಲಿ ಮನೆ ಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಸಹ ತಿಂದಿದೆ. ಇದನ್ನು ತಿಳಿಯದೇ ಹಣ್ಣನ್ನು ತಿಂದು ಇಡೀ ಕುಟುಂಬ ಅನಾರೋಗ್ಯಕ್ಕೀಡಾ ಯಿತು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily