Sunday, 22nd September 2024

Water Pollution: ಕಲುಷಿತ ನೀರು ಸೇವಿಸಿ 200 ಮಂದಿ ಅಸ್ವಸ್ಥ: ಬಿಲ್ಡರ್‌ಗೆ 5 ಕೋಟಿ ರೂ. ದಂಡ

Water Pollution

ಕಲುಷಿತ ನೀರು ಸೇವಿಸಿ (Water Pollution) 200 ಮಂದಿ ಅಸ್ವಸ್ಥರಾದ ಬಳಿಕ ಬಿಲ್ಡರ್‌ಗೆ 5 ಕೋಟಿ ರೂ. ದಂಡ (Fine to builder) ವಿಧಿಸಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ (Greater Noida ) ನಡೆದಿದೆ. ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಸೂಪರ್‌ಟೆಕ್ ಇಕೋ ವಿಲೇಜ್ 2 ಸೊಸೈಟಿಯಲ್ಲಿ ಕಲುಷಿತ ನೀರು ಕುಡಿದು ಮಕ್ಕಳು ಸೇರಿದಂತೆ ಹಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಇದಕ್ಕೆ ನೀರಿನ ಟ್ಯಾಂಕ್ ಕಳಪೆಯಾಗಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು.

ಸೂಪರ್‌ಟೆಕ್ ಇಕೋ ವಿಲೇಜ್ 2ರ 200ಕ್ಕೂ ಹೆಚ್ಚು ಮಂದಿ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದರು. ನೀರಿನ ಮಾಲಿನ್ಯದಿಂದ ಹೆಚ್ಚು ಬಾಧಿತರಾದವರು ಮಕ್ಕಳು. ಸೊಸೈಟಿಯಲ್ಲಿ ಕಳಪೆಯಾಗಿರುವ ಸ್ವಚ್ಛಗೊಳಿಸದ ನೀರಿನ ಟ್ಯಾಂಕ್‌ಗಳ ನೀರು ಸೇವಿಸಿ ಇವರು ಅಸ್ವಸ್ಥರಾಗಿದ್ದರು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದರು.

ಸ್ಥಳೀಯ ಆಡಳಿತ ಮತ್ತು ಆರೋಗ್ಯ ಇಲಾಖೆಯ ತಂಡವು ಸ್ಥಳಕ್ಕೆ ಧಾವಿಸಿ ನೀರಿನ ಮಾದರಿಗಳನ್ನು ತೆಗೆದುಕೊಂಡು ತನಿಖೆ ಆರಂಭಿಸಿದೆ.

Water Pollution

ಪ್ರಕರಣಕ್ಕೆ ಸಂಬಂಧಿಸಿ ಗ್ರೇಟರ್ ನೋಯ್ಡಾ ಪ್ರಾಧಿಕಾರ ಈಗ ಬಿಲ್ಡರ್‌ಗೆ 5 ಕೋಟಿ ರೂ. ಗೂ ಹೆಚ್ಚು ದಂಡ ವಿಧಿಸಿದೆ. ನಿವಾಸಿಗಳ ಸುರಕ್ಷತೆ ನಿರ್ಲಕ್ಷಿಸಿ ಕಲುಷಿತ ನೀರು ಸರಬರಾಜು ಮಾಡಿದ್ದಕ್ಕಾಗಿ ಈ ದಂಡವನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲಾ ಸೊಸೈಟಿಗಳಲ್ಲಿ ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸ್ಥಳೀಯರು ನೀರಿನ ಕೊರತೆ ಬಗ್ಗೆ ಚರ್ಚಿಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಒಬ್ಬರು ತಮ್ಮ ಮಗುವಿಗೆ ಅತಿಸಾರ ಮತ್ತು ವಾಂತಿ ಇದೆ ಎಂದು ಹೇಳಿದ್ದಾರೆ. ಇದನ್ನು ನೋಡಿದ ಇನ್ನೊಬ್ಬರು ತಮ್ಮ ಮಗುವಿನಲ್ಲೂ ಈ ರೋಗ ಲಕ್ಷಣಗಳು ಇರುವುದಾಗಿ ಹೇಳಿದರು. ಬಳಿಕ ಅನೇಕರು ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡರು. ಆಗ ನೂರಾರು ಮಂದಿ ಅನಾರೋಗ್ಯಕ್ಕೆ ಒಳಗಾಗಿರುವುದು ತಿಳಿಯಿತು ಎಂದು ಸ್ಥಳೀಯರೊಬ್ಬರು ಸುದ್ದಿಗಾರರ ಮುಂದೆ ಹೇಳಿಕೊಂಡಿದ್ದಾರೆ.

Bullet Train: ದೇಶದ ಮೊದಲ ಬುಲೆಟ್‌ ಟ್ರೇನ್‌ ನಿರ್ಮಾಣ ಬೆಂಗಳೂರಿನಲ್ಲಿ!

ಸೊಸೈಟಿಯ ಮಾರ್ಟ್‌ನಲ್ಲಿರುವ ವೈದ್ಯರೊಬ್ಬರು ಹಲವಾರು ಕುಟುಂಬಗಳನ್ನು ಸಂಪರ್ಕಿಸಿದ್ದು, ರೋಗಿಗಳಲ್ಲಿ ಸೋಂಕು ದೃಢಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸೂಪರ್‌ಟೆಕ್ ಇಕೋ ವಿಲೇಜ್ 2 ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಅತಿದೊಡ್ಡ ವಸತಿ ಸಂಘಗಳಲ್ಲಿ ಒಂದಾಗಿದೆ. ಇದು ಸುಮಾರು 20 ಎತ್ತರದ ಕಟ್ಟಡಗಳನ್ನು ಹೊಂದಿದೆ. ಪ್ರತಿ ಕಟ್ಟಡದಲ್ಲೂ ಸರಿಸುಮಾರು 150 ಫ್ಲಾಟ್‌ಗಳಿವೆ. ಇದರಲ್ಲಿ ನಾಲ್ಕು ಕಟ್ಟಡಗಳ ನಿವಾಸಿಗಳು ಒಂದೇ ರೀತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದರು.