Sunday, 15th December 2024

ನಮಗೆ ದುರ್ಯೋಧನ, ದುಶ್ಶಾಸನರು, ಮೀರ್ ಜಾಫರ್‌ನಂಥ ಜನರು ಬೇಕಾಗಿಲ್ಲ: ಸಿಎಂ ಮಮತಾ

ಕೋಲ್ಕತ್ತಾ: ದೀದಿ ನಿಮ್ಮ ಆಟ ಮುಗಿಯಿತು ಇಂದು ನಿಮ್ಮ ಬಂಗಾಳದಲ್ಲಿ ಅಭಿವೃದ್ಧಿಯಾಟ ಆರಂಭ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ದುರ್ಯೋಧನ, ದುಶ್ಶಾಸನ ಎಂದು ಮಮತಾ ದೂರಿದ್ದಾರೆ.

ನಂದಿಗ್ರಾಮದಲ್ಲಿ ತನ್ನ ವಿರೋಧಿ ಬಿಜೆಪಿ ಅಭ್ಯರ್ಥಿಯಾಗಿರುವ ಸುವೇಂದುವನ್ನು ಮೀರ್ ಜಾಫರ್ ಎಂದು ಕರೆದಿದ್ದಾರೆ. ಶುಕ್ರವಾರ ನಂದಿಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಮತಾ, ಬಿಜೆಪಿಗೆ ಬೀಳ್ಕೊಡುಗೆ ನೀಡುವ ದಿನ ಹತ್ತಿರ ಬಂದಿದೆ. ನಮಗೆ ಬಿಜೆಪಿ ಅಗತ್ಯವಿಲ್ಲ. ಮೋದಿ ಮುಖವನ್ನು ನೋಡಲೂ ಇಷ್ಟವಿಲ್ಲ, ನಮಗೆ ದುರ್ಯೋಧನ, ದುಶ್ಶಾಸನರು ಹಾಗೂ ಮೀರ್ ಜಾಫರ್‌ನಂಥ ಜನರು ಬೇಕಾಗಿಲ್ಲ. ಮಾ.27ಕ್ಕೆ ಆಟ ಶುರುವಾಗಲಿದೆ. ಇದರಲ್ಲಿ ಬಿಜೆಪಿ ಸೋಲು ಖಚಿತ ಎಂದು ಮಮತಾ ಹೇಳಿದ್ದಾರೆ.

ನಾನು ಮೊದಲು ಮಿಡ್ನಾಪುರದ ಭಾಗಗಳಿಗೆ ಬರಲಾಗುತ್ತಿರಲಿಲ್ಲ, ಸುವೇಂದು ಅಧಿಕಾರಿ ಹೇಳಿದಂತೆ ಕೇಳಿಕೊಂಡು ಬರಬೇಕಿತ್ತು. ಅವರನ್ನು ಕಣ್ಣುಮುಚ್ಚಿಕೊಂಡು ನಾನು ನಂಬಿದ್ದೆ, ಆದರೆ ನನಗೆ ದ್ರೋಹ ಮಾಡಿದರು. ಆದರೆ ಇಂದು ಮಿಡ್ನಾಪುರದ ಯಾವುದೇ ಭಾಗಕ್ಕೂ ಆರಾಮವಾಗಿ ಹೋಗಬಹುದಾಗಿದೆ ಎಂದು ಮಮತಾ ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily