ದೋಣಿ ವಶಪಡಿಸಿಕೊಂಡ ಹರಿಹರೇಶ್ವರದ ಕಡಲತೀರದಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಅಧಿಕಾರಿಗಳು ಹೆಚ್ಚಿನ ಕಟ್ಟೆಚ್ಚರ ವಹಿಸಿದ್ದಾರೆ.
‘ಕೋಸ್ಟ್ ಗಾರ್ಡ್ ಮತ್ತು ಮಹಾರಾಷ್ಟ್ರ ಮ್ಯಾರಿಟೈಮ್ ಬೋರ್ಡ್ ಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಣೇಶೋತ್ಸವ ಸಂದರ್ಭದಲ್ಲಿ ಉಗ್ರರ ದಾಳಿ ನಡೆಸೋದಕ್ಕೆ ಸಂಚು ರೂಪಿಸಲಾಗಿದ್ಯಾ ಎನ್ನುವ ಸಂಶಯ ವ್ಯಕ್ತವಾಗಿದೆ.
ಮುಂಬೈನಿಂದ ಸುಮಾರು 200ಕಿ.ಮೀ ದೂರದಲ್ಲಿ ದೋಣಿ ಪತ್ತೆಯಾಗಿದೆ. ಇದನ್ನು ಪ್ರದೇಶದ ಸ್ಥಳೀಯರು ಗುರುತಿಸಿದರು, ನಂತರ ಅವರು ದೋಣಿಯ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.