Thursday, 12th December 2024

ತೀವ್ರ ಚಳಿಗೆ ಉತ್ತರ ಭಾರತ ತತ್ತರ: ರೆಡ್ ಅಲರ್ಟ್

ವದೆಹಲಿ: ತೀವ್ರ ಚಳಿಗೆ ಉತ್ತರ ಭಾರತ ತತ್ತರಿಸಿದ್ದು, ದೆಹಲಿ, ಹರಿಯಾಣ ಮತ್ತು ಪಂಜಾಬಿನ ಕೆಲವು ಭಾಗಗಳಲ್ಲಿ ಸೋಮವಾರ ದಟ್ಟವಾದ ಮಂಜು ಮತ್ತು ಚಳಿ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಪಂಜಾಬ್ನ ಅಮೃತಸರ, ಫತೇಘರ್ ಸಾಹಿಬ್, ಗುರುದಾಸ್ಪುರ, ಹೋಶಿಯಾರ್ಪುರ್, ಜಲಂಧರ್, ಲುಧಿಯಾನ, ಪಠಾಣ್ಕೋಟ್, ಪಟಿಯಾಲ, ರೂಪ್ನಗರ್ ಮತ್ತು ತಾರ್ನ್ ತರಣ್ ಜಿಲ್ಲೆಗಳಲ್ಲಿ ಶೀತ ಹಗಲು ಮತ್ತು ದಟ್ಟ ಮಂಜು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಜ.1 ರಂದು ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.

ಡಿಸೆಂಬರ್ 31, 2023 ರ ರಾತ್ರಿಯಿಂದ ಜನವರಿ 2, 2024 ರ ಬೆಳಿಗ್ಗೆಯವರೆಗೆ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಬೀಳುವ ಸಾಧ್ಯತೆ ಯಿದೆ. ಹೊಸ ವರ್ಷದೊಂದಿಗೆ, ಪಂಜಾಬ್, ದೆಹಲಿ, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ತಾಪಮಾನವು ಕಡಿಮೆಯಾಗು ತ್ತದೆ. ಇದು ತೀವ್ರ ಚಳಿಗೆ ಕಾರಣವಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.