Friday, 22nd November 2024

Wedding Season: ದೇಶಾದ್ಯಂತ 18 ದಿನಗಳಲ್ಲಿ 48 ಲಕ್ಷ ವಿವಾಹ ನಿಗದಿ; ದೇಶದ ಆರ್ಥಿಕತೆಗೆ ಬೂಸ್ಟ್!

Wedding Season

ನವದೆಹಲಿ: ದೇಶಾದ್ಯಂತ ಎಲ್ಲೆಲ್ಲೂ ಈಗ ಮಂಗಳವಾದ್ಯಗಳ ಸದ್ದು ಕೇಳಲಿದೆ. ಯಾಕೆಂದರೆ ಮದುವೆಯ ಋತು (Wedding Season) ಆರಂಭಗೊಂಡಿದ್ದು, ಇದು ದೇಶದ ಆರ್ಥಿಕಾಭಿವೃದ್ದಿಗೆ ಬಹುಪಾಲು ಕೊಡುಗೆಯನ್ನು ನೀಡಲಿದೆ. ಕೇವಲ ಎರಡು ತಿಂಗಳಲ್ಲಿ ದೇಶಾದ್ಯಂತ ಸುಮಾರು 48 ಲಕ್ಷ ವಿವಾಹ ಸಮಾರಂಭಗಳು ನಡೆಯಲಿದೆ. ಈ ಮೂಲಕ ಬಹುಕೋಟಿ ರೂಪಾಯಿಯ ವಹಿವಾಟು ನಡೆಯಲಿದೆ.

ಭಾರತದಲ್ಲಿ ಮದುವೆಯ ಋತುವೆಂದರೆ ಆರ್ಥಿಕ ಚಮತ್ಕಾರ ಎನ್ನಬಹುದು. ಯಾಕೆಂದರೆ ದೇಶಾದ್ಯಂತ ಕೇವಲ 18 ದಿನಗಳಲ್ಲಿ ಸುಮಾರು 48 ಲಕ್ಷ ವಿವಾಹಗಳು ನಿಗದಿಯಾಗಿದೆ. ಇದರಿಂದ ನವೆಂಬರ್ ಮತ್ತು ಡಿಸೆಂಬರ್‌ ತಿಂಗಳಲ್ಲಿ ಬಹುಕೋಟಿ ರೂಪಾಯಿಗಳ ವಹಿವಾಟು ನಡೆಯಲಿದೆ. ನವೆಂಬರ್ 12ರ ಬಳಿಕ ಮದುವೆ ಸಮಾರಂಭಗಳು ಪ್ರಾರಂಭವಾಗಲಿದೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ಮದುವೆ ಋತುವಿನಲ್ಲಿ 6 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆಗೆ ಬರಲಿದೆ. ಇದು ಸಣ್ಣ ರಾಷ್ಟ್ರಗಳಿಗೆ ಬಹುದೊಡ್ಡ ಪ್ರಮಾಣದ ಆದಾಯಕ್ಕೆ ಸಮನಾಗಿದೆ. ಈ ಬಾರಿ 18 ದಿನಗಳಲ್ಲಿ ಇಷ್ಟೊಂದು ಮದುವೆ ಕಾರ್ಯಕ್ರಮಗಳು ನಿಗದಿಯಾಗಿರುವುದು ವಿಶೇಷ.

ಒಕ್ಕೂಟಗಳಲ್ಲಿ ಸುಮಾರು 40 ಲಕ್ಷ ಬಜೆಟ್ ನ ಮದುವೆ ಕಾರ್ಯಕ್ರಮಗಳು ನಡೆಯಲಿದೆ. ಸಾಮಾನ್ಯವಾಗಿ ಒಂದು ಮದುವೆ ಕಾರ್ಯಕ್ರಮಗಳಿಗೆ 3 ಲಕ್ಷ ರೂ. ನಿಂದ 15 ಲಕ್ಷ ರೂ. ವರೆಗೆ ಖರ್ಚಾಗುತ್ತದೆ.

ದೆಹಲಿಯೊಂದರಲ್ಲೇ 1.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಅಂದಾಜಿಸಲಾಗಿದೆ.

Wedding Season

ಮದುವೆ ಕಾರ್ಯಕ್ರಮಗಳು ಮಾರುಕಟ್ಟೆಯ ಪ್ರತಿಯೊಂದು ವಲಯದಲ್ಲೂ ಹೊಸ ಉತ್ಸಾಹವನ್ನು ಉಂಟು ಮಾಡಿದೆ. ಬಟ್ಟೆ, ಆಭರಣ, ಕಾರು, ಗೃಹೋಪಯೋಗಿ ವಸ್ತುಗಳು, ಹೊಟೇಲ್ ಮತ್ತು ಅಡುಗೆ ಸೇವೆಗಳು ಮದುವೆ ತಯಾರಿಯಲ್ಲಿ ತೊಡಗಿಕೊಂಡಿವೆ.

ಸೀರೆಗಳಿಂದ ಹಿಡಿದು ಚಿನ್ನದವರೆಗೆ ವ್ಯಾಪಾರಿಗಳು ನಾಳೆ ಇಲ್ಲ ಎಂಬಂತೆ ದಾಸ್ತಾನು ನಡೆಸಲು ಸಂಗ್ರಹ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಈ ವರ್ಷ ಆಭರಣ ಉದ್ಯಮದ ಅರ್ಧದಷ್ಟು ಆದಾಯವು ವಧುವಿನ ಖರೀದಿಗಳಿಂದ ಬರುತ್ತದೆ. ಎಲ್ಲಾ ಉಡುಪುಗಳ ಮಾರಾಟದಲ್ಲಿ ಶೇ. 10ರಷ್ಟು ವಧು ವರರ ಉಡುಗೆ ತೊಡುಗೆಗಳಿಂದ ಬರುತ್ತದೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಭಾರತದ ವಿವಾಹ ಕಾರ್ಯಕ್ರಮಗಳೂ ಈಗ ಪ್ರಧಾನಿ ಮೋದಿಯವರ “ಲೋಕಲ್ ಫಾರ್ ವೋಕಲ್” ನಿಂದ ಪ್ರೇರಿತವಾಗಿದೆ. ಹೂಗಾರರಿಂದ ಹಿಡಿದು ಅಡುಗೆ ಮಾಡುವವರು, ಐಷಾರಾಮಿ ಕಾರು ಬಾಡಿಗೆಗಳವರೆಗೆ ಎಲ್ಲರೂ ಈಗ ಮದುವೆಯ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿದ್ದಾರೆ.

Wedding Season

ವಿವಾಹ ಕಾರ್ಯಕ್ರಮದಲ್ಲಿ ಸಾಕಷ್ಟು ವಿಧಿವಿಧಾನಗಳಿದ್ದು, ಈ ಸಂದರ್ಭದಲ್ಲಿ ಮಾರುಕಟ್ಟೆ ವಹಿವಾಟುಗಳು ಹೆಚ್ಚಾಗುತ್ತವೆ. ಸಾಮಾನ್ಯವಾಗಿ ಈ ಬಾರಿ ಮದುವೆಗೆ ಬೇಕಾದ ವಸ್ತುಗಳ ಆಮದು ಕಡಿಮೆಯಾಗುತ್ತಿದ್ದು, ಭಾರತೀಯ ಕುಟುಂಬಗಳು ಸ್ಥಳೀಯ ಉಡುಪು, ಆಭರಣ ಮತ್ತು ಆಹಾರ ಉತ್ಪನ್ನಗಳನ್ನು ಆರಿಸಿಕೊಳ್ಳುತ್ತಿವೆ.

ಇದರಿಂದ ಜವಳಿ ಉದ್ಯಮ ಶೇ. 10, ಆಭರಣ ಉದ್ಯಮ ಶೇ. 15, ಎಲೆಕ್ಟ್ರಾನಿಕ್ಸ್ ಶೇ. 5, ಒಣ ಹಣ್ಣು ಮತ್ತು ಸಿಹಿತಿಂಡಿಗಳು ಶೇ. 5, ಸ್ಥಳ ಬಾಡಿಗೆ ಶೇ. 5, ಅಡುಗೆ ಶೇ. 10, ಅಲಂಕಾರಿಕ ಉದ್ಯಮಗಳು ಶೇ. 10, ಸಾರಿಗೆ ಶೇ. 3, ಛಾಯಾಗ್ರಹಣ ಶೇ. 2 ಮತ್ತು ಡಿಜೆ ಮತ್ತು ಬ್ಯಾಂಡ್‌ಗಳು ಶೇ. 3ರಷ್ಟು ಸರಿಸುಮಾರು ಆದಾಯವನ್ನು ಪಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Mukesh Ambani: ಆರ್‌ಪಿಎಲ್ ಸ್ಟಾಕ್ ಪ್ರಕರಣ; ಸುಪ್ರೀಂ ಕೋರ್ಟ್‌ನಲ್ಲಿ ಮುಕೇಶ್ ಅಂಬಾನಿಗೆ ಬಿಗ್‌ ರಿಲೀಫ್‌

ಸಾಮಾನ್ಯವಾಗಿ ಭಾರತೀಯ ಕುಟುಂಬಗಳು ಮದುವೆ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲು ಆಸಕ್ತಿ ತೋರುತ್ತವೆ. ಇದರಲ್ಲಿ ಸ್ವದೇಶಿ ಎಂಬುದು ಹೆಮ್ಮೆಯಾಗಿದೆ. ಹೀಗಾಗಿ ಇದು ಭಾರತೀಯ ಆರ್ಥಿಕತೆಗೆ ಹಬ್ಬದ ಋತುವಾಗಿದೆ ಎನ್ನುತ್ತಾರೆ ಪ್ರವೀಣ್ ಖಂಡೇಲ್ವಾಲ್.