Sunday, 15th December 2024

ಆ.೩ರಂದು ದೀದಿ ಸಂಪುಟ ಪುನರಚನೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಸಚಿವ ಸಂಪುಟ ಪುನರಚನೆ ಮಾಡಲು ನಿರ್ಧರಿಸಿದ್ದಾರೆ.

ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾರ್ಥ ಚಟರ್ಜಿ ಬಂಧನಕ್ಕೆ ಒಳಗಾದ ಹಿನ್ನೆಲೆ ಯಲ್ಲಿ ಸಂಪುಟ ಪುನರಚನೆ ಮಾಡಲು ನಿರ್ಧರಿಸಿದ್ದಾರೆ.

ಸುರ್ಬತೊ ಬ್ಯಾನರ್ಜಿ, ಸದನ್‌ ಪಾಂಡೆ ಮತ್ತು ಪಾರ್ಥ ಚಟರ್ಜಿ ಜೈಲು ಸೇರಿದ್ದ ರಿಂದ ಅವರ ಸೇವೆ ನಾವು ಕಳೆದುಕೊಂಡಿದ್ದೇವೆ. ಅವರು ನಿಭಾಯಿಸುತ್ತಿದ್ದ ಖಾತೆಗಳ ಕೆಲಸ ಆಗುತ್ತಿಲ್ಲ. ಆದ್ದರಿಂದ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಿದ್ದೇನೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

ಸಂಪುಟ ವಿಸರ್ಜನೆ ಅಥವಾ ಸಂಪುಟ ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಅಲ್ಲದೇ ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ ೨೩ರಿಂದ ೩೦ಕ್ಕೆ ಏರಿಕೆಯಾಗಿದೆ. ಆದ್ದರಿಂದ ಜಿಲ್ಲಾ ಪ್ರಾತಿನಿಧ್ಯ ಗಮನಿಸಿ ಸಂಪುಟದಲ್ಲಿ ಸ್ಥಾನ ನೀಡಬೇಕಾಗಿದೆ ಎಂದು ವಿವರಿಸಿದರು.