Saturday, 23rd November 2024

ಬಂಗಾಳದಲ್ಲಿ ಇನ್ನೂ ಪ್ರದರ್ಶನಗೊಳ್ಳದ ‘ದಿ ಕೇರಳ ಸ್ಟೋರಿ’

ಕೋಲ್ಕತಾ: ಮಮತಾ ಬ್ಯಾನರ್ಜಿ ಸರಕಾರವು ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸಿದ ನಂತರ ಅದನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ ನಂತರವೂ ರಾಜ್ಯದಲ್ಲಿ ಅದು ಇನ್ನೂ ಪ್ರದರ್ಶನ ಗೊಂಡಿಲ್ಲ.

ಇನ್ನು ೨-೩ ವಾರಗಳ ಕಾಲ ರಾಜ್ಯದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ರಾಜ್ಯದ ಚಿತ್ರ ಮಂದಿರಗಳಲ್ಲಿ ಇತರೆ ಚಲನಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ. ಅವುಗಳ ಮುಂಗಡ ಕಾಯ್ದಿರಿಸುವಿಕೆ ಆಗಿರುವುದರಿಂದ ಸದ್ಯಕ್ಕೆ ‘ದಿ ಕೇರಳ ಸ್ಟೋರಿ’ ಪ್ರದರ್ಶಿ ಸುವ ಸಾಧ್ಯತೆ ಇಲ್ಲ. ಹಲವು ಚಿತ್ರಮಂದಿರಗಳಲ್ಲಿ ಮಾಲೀಕರು ಚಿತ್ರ ಪ್ರದರ್ಶನಕ್ಕೆ ನಿರಾಕರಿಸಿದ್ದಾರೆ.

ಪೊಲೀಸರು ಮತ್ತು ಆಡಳಿತದವರು ಬೆದರಿಕೆ ಹಾಕಿರುವುದರಿಂದ ಅವರು ನಿರಾಕರಿಸಿದ್ದಾರೆ ಎಂದು ಚಲನಚಿತ್ರದ ನಿರ್ಮಾಪಕ ವಿಪುಲ್ ನಿವರು ಈಗಾಗಲೇ ಆರೋಪಿಸಿದ್ದಾರೆ.

ರಾಜ್ಯದ ಉತ್ತರ ೨೪ ಪರಗಣಾ ಜಿಲ್ಲೆಯ ಬನಗಾವನ ಚಿತ್ರಮಂದಿರದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನ ಗೊಳ್ಳುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ರಾಜ್ಯದ ಹೆಚ್ಚಿನ ಚಿತ್ರಮಂದಿರಗಳಲ್ಲಿ ಈ ಚಲನಚಿತ್ರದ ಪ್ರದರ್ಶನಕ್ಕೆ ನಿರಾಕರಿಸಲಾಗಿತ್ತಿದೆ. ರಾಜ್ಯದ ಇತರೆ ಚಿತ್ರಮಂದಿರ ಗಳಲ್ಲಿ ಈ ಚಲನಚಿತ್ರ ತೋರಿಸಲಾಗುವುದು” ಎಂದು ಹೇಳಿದರು