Wednesday, 11th December 2024

ಅರ್ನಬ್ – ಪಾರ್ಥೋ ದಾಸ್‌ಗುಪ್ತಾ ವಾಟ್ಸಾಪ್ ಚಾಟ್ ಸೋರಿಕೆ

ನವದೆಹಲಿ: ರಿಪಬ್ಲಿಕ್‌ ಟಿವಿಯ ಅರ್ನಬ್ ಗೋಸ್ವಾಮಿ ಮತ್ತು ಮಾಜಿ ಬಾರ್ಕ್ ಸಿಇಒ ಪಾರ್ಥೋ ದಾಸ್‌ಗುಪ್ತಾ ನಡುವಿನ ವಾಟ್ಸಾಪ್ ಚಾಟ್ ಸೋರಿಕೆಗೊಂಡಿದ್ದು, ಟ್ವಿಟರ್‌ನಲ್ಲಿ ಹರಿದಾಡಿವೆ.

ಗೋಸ್ವಾಮಿ ಮತ್ತು ಬಾರ್ಕ್ ಸಿಇಒ ನಡುವಿನ ವಾಟ್ಸಾಪ್ ಚಾಟ್‌ ಸ್ಕ್ರೀನ್‌ಶಾಟ್‌ಗಳು ಟ್ವಿಟರ್‌ನಲ್ಲಿ ಸ್ಪೋಟಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

”ಇವುಗಳು ಬಾರ್ಕ್ ಸಿಇಒ ಮತ್ತು ಅರ್ನಬ್ ಗೋಸ್ವಾಮಿ ನಡುವಿನ ಸೋರಿಕೆಯಾದ ವಾಟ್ಸಾಪ್ ಚಾಟ್‌ಗಳ ಕೆಲವು ಸ್ನ್ಯಾಪ್‌ಶಾಟ್ ‌ಗಳಾಗಿವೆ. ಅನೇಕ ಪಿತೂರಿಗಳನ್ನು ತೋರಿಸುತ್ತದೆ ಮತ್ತು ದೇಶದ ಯಾವುದೇ ಕಾನೂನು ನಿಯಮಗಳ ಪ್ರಕಾರ ದೀರ್ಘಕಾಲ ಜೈಲಿನಲ್ಲಿರುತ್ತಾರೆ ” ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಇನ್ನು ಅರ್ನಬ್ ಗೋಸ್ವಾಮಿ ಮತ್ತು ಬಾರ್ಕ್ ಸಿಇಒ ನಡುವಿನ ವಾಟ್ಸಾಪ್ ಚಾಟ್‌ ಸಂಭಾಷಣೆ ಅಧಿಕೃತವಾಗಿದ್ದರೆ, ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗಬಹುದು. ಟಿಆರ್‌ಪಿ ಹಗರಣ ಪ್ರಕರಣದ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಜ.29 ರವರೆಗೆ ಮುಂದೂಡಿದೆ. ಮುಂದಿನ ವಿಚಾರಣೆ ಯವರೆಗೆ ಗೋಸ್ವಾಮಿಯನ್ನು ಬಂಧಿಸುವುದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.