ಏಪ್ರಿಲ್ 1 ರಿಂದ ಏಪ್ರಿಲ್ 30, 2023 ರ ಅವಧಿಯ ವರದಿ ಇದಾಗಿದೆ. ಭಾರತದಲ್ಲಿನ ಬಳಕೆದಾರರು ನೀಡಿದ ದೂರುಗಳಿಗೆ ಪ್ರತಿಕ್ರಿಯೆಯಾಗಿ ಕಂಪನಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ವಾಟ್ಸ್ ಆಯಪ್ ವರದಿಯಲ್ಲಿ ವಿವರಿಸಿದೆ. ಖಾತೆಗಳು ಕಾನೂನು ಅಥವಾ ಸೇವಾ ನಿಯಮ ಗಳನ್ನು ಉಲ್ಲಂಘಿಸಿದ್ದಕ್ಕಾಗಿ ತೆಗೆದು ಕೊಂಡ ಕ್ರಮ ಮತ್ತು ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ (GAC) ಸ್ವೀಕರಿಸಿದ ಆದೇಶಗಳ ಪ್ರಕಾರ ಕೈಗೊಂಡ ಕ್ರಮಗಳ ವಿವರ ಇದರಲ್ಲಿದೆ.
ಇತ್ತೀಚಿನ ಮಾಸಿಕ ವರದಿಯಲ್ಲಿ ಪ್ರಕಟಿಸಿದಂತೆ ವಾಟ್ಸ್ ಆಯಪ್ ಏಪ್ರಿಲ್‌ನಲ್ಲಿ 7.4 ಮಿಲಿಯನ್ ಖಾತೆಗಳನ್ನು ನಿಷೇಧಿಸಿದೆ ಮತ್ತು ಬಳಕೆದಾರರಿಂದ ಯಾವುದೇ ದೂರುಗಳು ಬರುವ ಮೊದಲೇ ಇವುಗಳ ಪೈಕಿ 2.4 ಮಿಲಿಯನ್ ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ” ಎಂದು ವಾಟ್ಸ್ ಆಯಪ್ ವಕ್ತಾರರು ತಿಳಿಸಿದ್ದಾರೆ.
ವಾಟ್ಸ್ ಆಯಪ್ ಇದು ಆಯಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಲಭ್ಯವಿರುವ ಉಚಿತ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಬಳಸಿ ಇತರ ಬಳಕೆದಾರರಿಗೆ ಒಬ್ಬರಿಗೊಬ್ಬರು ಅಥವಾ ಗುಂಪುಗಳಲ್ಲಿ ಪಠ್ಯ ಸಂದೇಶಗಳನ್ನು ಕಳುಹಿಸಬಹುದು. ಮುಖ್ಯವಾಗಿ ವಾಟ್ಸ್ ಆಯಪ್ ಚಾಟ್‌ಗಳು ಇಂಟ ರ್ನೆಟ್ ಮೂಲಕ ರವಾನೆಯಾಗುತ್ತವೆ. ಇದು ನಿಮ್ಮ ಫೋನ್ನಲ್ಲಿರುವ ಎಸ್ಎಂಎಸ್ ಸೇವೆಗಿಂತ ವಿಭಿನ್ನವಾಗಿದೆ.