Friday, 20th September 2024

Pager Blasts : ಲೆಬನಾನ್‌ನ ಪೇಜರ್ ಸ್ಫೋಟಕ್ಕೂ ಕೇರಳದ ಲಿಂಕ್‌…

pager blasts?

ಬೆಂಗಳೂರು: ಹೆಜ್ಬುಲ್ಲಾ ಉಗ್ರ ಸಂಘಟನೆಯನ್ನು ಗುರಿಯಾಗಿಸಿಕೊಂಡು ಲೆಬನಾನ್‌ನಲ್ಲಿ ಸಾವಿರಾರು ಪೇಜರ್‌ಗಳು ಸ್ಫೋಟಗೊಂಡು (Pager Blasts) ಸುಮಾರು 20 ಮಂದಿ ಮೃತಪಟ್ಟು, ಸಾವಿರಾರು ಹಿಜ್ಬುಲ್ಲಾ ಸದಸ್ಯರು ಗಾಯಗೊಂಡಿದ್ದಾರೆ. ಈ ಘಟನೆ ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವೆ ಸಮರಕ್ಕೆ ಕಾರಣವಾಗಿದೆ. ಅದಕ್ಕಿಂತ ಪ್ರಮುಖವಾಗಿ ಇಸ್ರೇಲಿ ಗೂಢಚಾರ ಸಂಸ್ಥೆಗಳು ಪೇಜರ್‌ಗಳಲ್ಲಿ ಸ್ಫೋಟಕಗಳನ್ನು ಹೇಗೆ ಇಟ್ಟಿತು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲಿಗೆ ಪೇಜರ್ ಸರಬರಾಝು ಮಾಡಿರುವ ಕಂಪನಿಗಳ ಜನ್ಮಜಾಲಾಡುತ್ತಿರುವ ನಡುವೆ ನೆರೆಯ ಕೇರಳದ ವ್ಯಕ್ತಿಯೊಬ್ಬರ ಹೆಸರು ಕೇಳಿ ಬರುತ್ತಿದೆ. ಅವರೀಗ ಈಗ ನಾರ್ವೆಯ ಪ್ರಜೆಯಾಗಿದ್ದಾರೆ. ಅವರ ಕುಟುಂಬಸ್ಥರು ಇನ್ನೂ ಕೇರಳದಲ್ಲಿದ್ದಾರೆ.

ಹಂಗೇರಿಯನ್ ಮಾಧ್ಯಮ ಸಂಸ್ಥೆ ಟೆಲೆಕ್ಸ್ ಸ್ಫೋಟಕಗಳ ಇಟ್ಟಿರುವ ಬಗ್ಗೆ ತನಿಖಾ ವರದಿ ಮಾಡಿದೆ. ಅದರ ಪ್ರಕಾರ ಬಲ್ಗೇರಿಯಾದ ಕಂಪನಿ ನಾರ್ಟಾ ಗ್ಲೋಬಲ್ ಲಿಮಿಟೆಡ್ ಪೇಜರ್‌ ಸರಬರಾಜು ಮಾಡಲು ಒಪ್ಪಂದಕ್ಕೆ ಸಹಿ ಹಾಕಿತ್ತು. ನಾರ್ಟಾ ಗ್ಲೋಬಲ್ ಕಂಪನಿಯನ್ನು ನಾರ್ವೆಯ ಪ್ರಜೆ ರಿನ್ಸನ್ ಜೋಸ್ ಸ್ಥಾಪಿಸಿದ್ದಾರೆ. ಈ ರಿನ್ಸಜ್ ಜೋಸ್‌ ಕೇರಳ ಮೂಲದವರು. ಆದಾಗ್ಯೂ ಈ ವರದಿಯಲ್ಲಿ ಖಚಿತತೆ ಇಲ್ಲ. ಬಲ್ಗೇರಿಯಾ ತನಿಖಾ ಸಂಸ್ಥೆ ನಮ್ಮ ದೇಶದಿಂದ ಈ ರೀತಿಯ ವಹಿವಾಟು ನಡೆದೇ ಇಲ್ಲ ಎಂದು ಹೇಳಿದ್ದಾರೆ.

ರಿನ್ಸನ್ ಜೋಸ್ ವಯನಾಡ್‌ನಲ್ಲಿ ಜನಿಸಿದವರು. ಎಂಬಿಎ ಪೂರ್ಣಗೊಳಿಸಿದ ನಂತರ ನಾರ್ವೆಗೆ ತೆರಳಿದ್ದರು ಎಂದು ಕೇರಳದ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ. ಕೆಲವು ಸ್ಥಳೀಯ ಟಿವಿ ಚಾನೆಲ್ ಗಳು ಅವರ ಸಂಬಂಧಿಕರೊಂದಿಗೆ ಮಾತನಾಡಿವೆ. ರಿನ್ಸನ್ ಅವರ ತಂದೆ ಜೋಸ್ ಮೂತೇದಮ್ ಟೈಲರ್ ವೃತ್ತಿ ಮಾಡುತ್ತಿದ್ದಾರೆ. ಮಾನಂತವಾಡಿಯ ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮನೋರಮಾ ವರದಿ ಮಾಡಿದೆ.

ಹಲವ ಬಗೆಯ ತನಿಖೆ

ರಿನ್ಸನ್ ಅವರ ಕಂಪನಿ ಬಲ್ಗೇರಿಯಾ ಮೂಲದ್ದು ಎಂದು ಹೇಳಲಾಗಿದ್ದರೂ ಬಲ್ಗೇರಿಯನ್ ಭದ್ರತಾ ಸಂಸ್ಥೆ ಎಸ್ಎಎನ್ಎಸ್ ನಡೆಸಿದ ತನಿಖೆಯಲ್ಲಿ ಅಂತಹ ಯಾವುದೇ ಸರಬರಾಜು ನಡೆದಿಲ್ಲ ಎಂದು ಹೇಳಿದೆ. ಜತೆಗೆ ರಿನ್ಸನ್ ಜೋಸ್ ಮತ್ತು ಅವರ ನಾರ್ಟಾ ಗ್ಲೋಬಲ್ ಕಂಪನಿಯನ್ನು ಈ ತನಿಖೆಯಿಂದ ಹೊರಕ್ಕೆ ಇಡಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ : Israel Strikes Lebanon : ಇಸ್ರೇಲ್ ರಾಕೆಟ್‌ ದಾಳಿಗೆ ಹೆಜ್ಬುಲ್ಲಾ ಉಗ್ರ ಸಂಘಟನೆಯ ಮುಖ್ಯಸ್ಥ ಸೇರಿ ಹಲವರ ಸಾವು

ಸ್ಫೋಟಗೊಂಡ ಪೇಜರ್‌ಗಳು ತೈವಾನ್ ಕಂಪನಿ ಗೋಲ್ಡ್ ಅಪೊಲೊ ಬ್ರಾಂಡ್‌ನದ್ದು. ಆದರೆ ಗೋಲ್ಡ್ ಅಪೊಲೊದ ಅಧ್ಯಕ್ಷ ಹ್ಸು ಚಿಂಗ್-ಕುವಾಂಗ್, ಉತ್ಪನ್ನ ನಮ್ಮದಲ್ಲ. ನಮ್ಮ ಬ್ರಾಂಡ್ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪೇಜರ್‌ಗಳನ್ನು ಹಂಗೇರಿ ಮೂಲದ ಬಿಎಸಿ ಕನ್ಸಲ್ಟಿಂಗ್ ಕಂಪನಿಗ ಮೂಲಕ ಸರಬಜಾರು ಮಾಡಲಾಗಿದೆ. ಅದೇ ರಿತಿ ಬುಡಾಪೆಸ್ಟ್ ಮೂಲದ ಕಂಪನಿಯು ಆ ಪೇಜರ್‌ಗಳನ್ನು ತಯಾರಿಸಿದೆ. ಅಂದ ಹಾಗೆ ಬಿಎಸಿ ಎಲ್ಲೂ ಕಚೇರಿ ಹೊಂದಿಲ್ಲ. ಕೇವಲ ವಿಳಾಸ ಮಾತ್ರ ಇದೆ. ಹೀಗಾಗಿ ಬಿಎಸಿ ಕನ್ಸಲ್ಟಿಂಗ್ ಇಸ್ರೇಲ್ ಸ್ಥಾಪಿಸಿದ ಶೆಲ್ ಸಂಸ್ಥೆ ಎನ್ನಲಾಗಿದೆ.

“ಬಿಎಸಿ ಕನ್ಸಲ್ಟಿಂಗ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಿಯಾನಾ ಬಾರ್ಸೊನಿ-ಅರ್ಸಿಡಿಯಾಕೊನೊ ನಾರ್ಟಾ ಗ್ಲೋಬಲ್ ಲಿಮಿಟೆಟ್‌ ಜತೆಗೆ ವ್ಯವಹಾರ ನಡೆಸಿದ್ದರು ಎಂದು ಟೆಲೆಕ್ಸ್ ಪತ್ರಿಕೆ ವರದಿ ಮಾಡಿದೆ.

ರಿನ್ಸನ್ ಜೋಸ್ ಪಾಲೇನು?

ಗೋಲ್ಡ್ ಅಪೊಲೊದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು ಬಿಎಸಿ ಕನ್ಸಲ್ಟಿಂಗ್ ಆಗಿದ್ದರೂ, ನೋರ್ಟಾ ಗ್ಲೋಬಲ್ ವಾಸ್ತವವಾಗಿ ಒಪ್ಪಂದದ ಹಿಂದೆ ಇದೆ ಎಂದು ಟೆಲೆಕ್ಸ್ ವರದಿ ಮಾಡಿದೆ. ನಾರ್ಟಾ ಗ್ಲೋಬಲ್ ಅನ್ನು 2022ರಲ್ಲಿ ಕೇರಳ ಮೂಲದ ರಿನ್ಸನ್ ಜೋಸ್ ಸ್ಥಾಪಿಸಿದ್ದರು. ಇದು ಬಲ್ಗೇರಿಯಾದ ರಾಜಧಾನಿ ಸೋಫಿಯಾದ ವಿಳಾಸದಲ್ಲಿದೆ. 196 ಇತರ ಕಂಪನಿಗಳ ಜತೆ ಒಪ್ಪಂದ ಇದೆ ಎಂದು ಹೇಳಿಕೊಂಡಿದೆ.

ಆದಾಗ್ಯೂ ಬಲ್ಗೇರಿಯಾದ ರಾಷ್ಟ್ರೀಯ ಭದ್ರತಾ ಸಂಸ್ಥೆ ನಡೆಸಿದ ತನಿಖೆಯಲ್ಲಿ ರಿನ್ಸನ್ ಜೋಸ್ ಮತ್ತು ಅವರ ನಾರ್ಟಾ ಗ್ಲೋಬಲ್‌ಗೆ ಕ್ಲೀನ್ ಚಿಟ್ ನೀಡಲಾಗಿದೆ.

ಕೇರಳದಲ್ಲಿ ಕುತೂಹಲ

ಬಲ್ಗೇರಿಯಾದ ರಾಷ್ಟ್ರೀಯ ಭದ್ರತಾ ಸಂಸ್ಥೆ ರಿನ್ಸನ್ ಜೋಸ್‌ಗೆ ಕ್ಲೀನ್ ಚಿಟ್ ನೀಡಿದ ತಕ್ಷಣ ಕೇರಳದಲ್ಲಿ ರಿನ್ಸನ್‌ ಬಗ್ಗೆ ಕುತೂಹಲ ಹೆಚ್ಚಾಗಿದೆ. ಬಲ್ಗೇರಿಯಾದಲ್ಲಿ ಅವರು ಹೊಂದಿರುವ ಕಂಪನಿಯ ಬಗ್ಗೆ ಅಥವಾ ಅಲ್ಲಿ ಅವರ ಯಾವುದೇ ವ್ಯವಹಾರ ಸಂಬಂಧಗಳ ಬಗ್ಗೆ ಅವರು ನನಗೆ ಎಂದಿಗೂ ಹೇಳಲಿಲ್ಲ. ಇದು ಭಯೋತ್ಪಾದಕ ಸಂಘಟನೆಗಳ ಮೇಲಿನ ದಾಳಿಯೊಂದಿಗೆ ಸಂಬಂಧ ಹೊಂದಿರುವುದರಿಂದ ನಾವು ತುಂಬಾ ಚಿಂತಿತರಾಗಿದ್ದೇವೆ ಎಂದು ರಿನ್ಸನ್ ಅವರ ಸೋದರ ಸಂಬಂಧಿ ಅಜು ಜಾನ್ ತಿಳಿಸಿದ್ದಾರೆ.

ರಿನ್ಸನ್ ಇಂಗ್ಲೆಂಡ್‌ಗೆ ಹೋಗಿದ್ದ. ಅವರಿಗೆ ಜಿನ್ಸನ್ ಎಂಬ ಅವಳಿ ಸಹೋದರನಿದ್ದು ಐರ್ಲೆಂಡ್‌ನಲ್ಲಿ ಅವರ ಸಹೋದರಿ ಇದ್ದಾರೆ. ರಿನ್ಸನ್ ಕಳೆದ ನವೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದರು ಮತ್ತು ಜನವರಿಯಲ್ಲಿ ಹೊರಟಿದ್ದರು.

“ರಿನ್ಸನ್ ಮಾನಂತವಾಡಿಯ ಮೇರಿ ಮಾತಾ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ನಂತರ ಎಂಬಿಎ ಪೂರ್ಣಗೊಳಿಸಿ ನಾರ್ವೆಗೆ ಹೋಗಿದ್ದರು. ನಂತರ ಕೆಲವು ವ್ಯವಹಾರ ಸಂಸ್ಥೆಗಳಿಗೆ ಸ್ಥಳಾಂತರಗೊಂಡಡಿದ್ದರು ಎಂದು ಅವರ ಚಿಕ್ಕಪ್ಪ ತಂಗಚನ್ ತಿಳಿಸಿದ್ದಾರೆ “ಅವರ ಕೆಲಸ ಅಥವಾ ವ್ಯವಹಾರದ ಬಗ್ಗೆ ನಮಗೆ ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ.