ಚಂಡೀಗಢ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್, ಮುಂಬರುವ ಪಂಜಾಬ್ ಚುನಾವಣೆ ಯಲ್ಲಿ ತಾವು ಪಟಿಯಾಲಾದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
400 ವರ್ಷದಿಂದ ಪಟಿಯಾಲಾ ಜನತೆ ನಮ್ಮ ಕುಟುಂಬವನ್ನು ಕೈಬಿಡದೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ಬೆಂಬಲವನ್ನು ಮುಂದಿನ ಚುನಾವಣೆಯಲ್ಲಿ ತಮಗೂ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಂಗ್ ಅವರ ತಂದೆ ಮಹಾರಾಜಾ ಸರ್ ಯದವಿಂದರ್ ಸಿಂಗ್ ಅವರು, ಪಟಿಯಾಲಾದ ಕಡೆಯ ಮಹಾರಾಜರಾಗಿದ್ದರು.
ಆ ಹಿನ್ನೆಲೆಯಲ್ಲಿ ಅಮರಿಂದರ್ ಹೀಗೆ ಹೇಳಿದ್ದಾರೆ. 2014ರಲ್ಲಿ ಅಮರಿಂದರ್ ಪತ್ನಿ ಕೂಡ ಇದೇ ಕ್ಷೇತ್ರದಿಂದ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.
ಸಿಂಗ್ ಈ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರೆ, ಅವರ ಪತ್ನಿ ಪ್ರಣೀತ್ ಕೌರ್ 2014 ರಲ್ಲಿ ಈ ಸ್ಥಾನದಿಂದ ಗೆದ್ದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ನವಜೋತ್ ಸಿಂಗ್ ಸಿಧು ಅವರೊಂದಿಗಿನ ತೀವ್ರ ಅಧಿಕಾರ ಸಂಘರ್ಷದ ನಂತರ ಸಿಂಗ್ ಸೆಪ್ಟೆಂಬರ್ ನಲ್ಲಿ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಚರಂಜಿತ್ ಸಿಂಗ್ ಚನ್ನಿ ಆಯ್ಕೆಯಾದರು. ಮಾಜಿ ಮುಖ್ಯಮಂತ್ರಿ ಸಿಂಗ್ ಅವರ ತಂದೆ ಮಹಾರಾಜ ಸರ್ ಯಾದವಿಂದರ್ ಸಿಂಗ್ ಅವರು ಪಟಿಯಾಲ ರಾಜವಂಶದ ಕೊನೆಯ ಮಹಾರಾಜರಾಗಿದ್ದರು.