Sunday, 15th December 2024

ಯೂಟ್ಯೂಬ್’ನಿಂದ ವೈನ್ ರೆಡಿ: ಕುಡಿದು ಸ್ನೇಹಿತರು ಆಸ್ಪತ್ರೆಗೆ ದಾಖಲು

ತಿರುವನಂತಪರಂ: ಯೂಟ್ಯೂಬ್ ನ್ನು ನೋಡಿಕೊಂಡು ವೈನ್ ತಯಾರಿಸಿದ ಬಾಲಕ ಅದನ್ನು ಸ್ನೇಹಿತನಿಗೆ ನೀಡಿದ್ದಾರೆ.

ಅದನ್ನು ಕುಡಿದ ಬಳಿಕ ಆತನಿಗೆ ವಾಂತಿ ಉಂಟಾಗಿದ್ದು, ತಕ್ಷಣವೇ ಚಿರಾಯಿಂಕೀಝು ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು.

ವೈನ್ ಕುಡಿದ ಈತನ ಮತ್ತೋರ್ವ ಸಹಪಾಠಿಯೂ ಆಸ್ಪತ್ರೆಗೆ ದಾಖಲಾಗಿದ್ದ. ಈಗ ಆತನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ಶಾಲೆ ಯೊಂದರಲ್ಲಿ ಈ ಘಟನೆ ನಡೆದಿದೆ.

ವಿಚಾರಣೆ ವೇಳೆ ಬಾಲಕನೋರ್ವ ತಾನು ತನ್ನ ಪೋಷಕರು ತಂದಿದ್ದ ದ್ರಾಕ್ಷಿಯನ್ನು ಉಪ ಯೋಗಿಸಿ ಯೂಟ್ಯೂಬ್ ಚಾನೆಲ್ ನೋಡಿಕೊಂಡು ವೈನ್ ತಯಾರಿಸಿದ್ದಾಗಿ ಹೇಳಿದ್ದಾನೆ.

ತಾನು ವೈನ್ ತಯಾರಿಸುವಾಗ ಸ್ಪಿರಿಟ್ ಅಥವಾ ಇನ್ಯಾವುದೇ ಆಲ್ಕೊ ಹಾಲ್ ಗಳನ್ನು ಸಾಮಗ್ರಿಯಾಗಿ ಬಳಕೆ ಮಾಡಿಲ್ಲ. ಯೂಟ್ಯೂಬ್ ನಲ್ಲಿ ತೋರಿಸಿದಂತೆ ವೈನ್ ತಯಾರಿಸಿದ ಬಳಿಕ ಅದನ್ನು ಬಾಟಲ್ ನಲ್ಲಿ ಹಾಕಿ ನೆಲದ ಒಳಗೆ ಹೂತು ಹಾಕಿದ್ದಾಗಿ ತಿಳಿಸಿದ್ದಾನೆ.

ಪೊಲೀಸರು ಆ ವೈನ್ ನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದಾರೆ. ವೈನ್ ನಲ್ಲಿ ಮದ್ಯದ ಅಂಶ ಅಥವ ಸ್ಪಿರಿಟ್ ಮಿಶ್ರಣ ವಾಗಿರುವುದು ಕಂಡುಬಂದಲ್ಲಿ ಅದನ್ನು ತಯಾರಿಸಿದ ಬಾಲಕನ ವಿರುದ್ಧ ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.