Wednesday, 11th December 2024

ಡಿಸೆಂಬರ್​ 7-29ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್​ 7ರಿಂದ 29ರವರೆಗೆ ನಡೆಯ ಲಿದೆ.

ಒಟ್ಟಾರೆ 23 ದಿನಗಳ ಕಾಲ ಇದ್ದರೂ ಇದರಲ್ಲಿ 17 ದಿನಗಳು ಮಾತ್ರ ಅಧಿವೇಶನಕ್ಕೆ ಲಭ್ಯವಾಗುತ್ತವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಅಧಿವೇಶನದಲ್ಲಿ ರಚನಾತ್ಮಕ ಮತ್ತು ಫಲಪ್ರದ ಚರ್ಚೆಗೆ ಆದ್ಯತೆ ನೀಡೋಣ ಎಂದೂ ಕರೆಕೊಟ್ಟಿದ್ದಾರೆ. ಚಳಿಗಾಲದ ಅಧಿವೇಶನ ರಾಜ್ಯಸಭೆಯಲ್ಲಿ ತುಸು ವಿಶೇಷ ಅನ್ನಿಸಲು ಕಾರಣ, ಇದು ಜಗದೀಪ್​ ಧನಕರ್​ ಅವರಿಗೆ ಮೊದಲ ಅಧಿವೇಶನ. ಉಪರಾಷ್ಟ್ರಪತಿ ಆದವರೇ ರಾಜ್ಯಸಭೆ ಅಧ್ಯಕ್ಷರಾಗಿರುತ್ತಾರೆ. ಅವರ ನೇತೃತ್ವದಲ್ಲೇ ಕಲಾಪಗಳು ನಡೆಯು ತ್ತವೆ. ಇದೇ ವರ್ಷದ ಆಗಸ್ಟ್​ನಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಜಗದೀಪ್​ ಧನಕರ್​ ಅವರಿಗೆ ಇದೇ ಮೊದಲ ಅಧಿವೇಶನ ಆಗಿದೆ.

ಕಳೆದ ಎರಡು ವರ್ಷ ಕೊವಿಡ್​ 19 ಕಾರಣಕ್ಕೆ ಸಂಸತ್ತಿನ ಅಧಿವೇಶನವೂ ಕಟ್ಟುನಿಟ್ಟಾಗಿ ನಡೆದಿತ್ತು.