Thursday, 12th December 2024

ಇಂದಿನಿಂದ ಚಳಿಗಾಲದ ಅಧಿವೇಶನ: ಕೃಷಿ ಕಾಯ್ದೆ ಹಿಂಪಡೆಯುವ ಮಸೂದೆ ಮಂಡನೆಗೆ ಕ್ಷಣಗಣನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನ.19ರಂದು ಘೋಷಿಸಿದಂತೆ ಮೂರು ಕೃಷಿ ಕಾಯ್ದೆ ಹಿಂಪಡೆಯುವ ಮಸೂದೆ ಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಮಂಡನೆಯಾಗಲಿದೆ.

ಅಧಿವೇಶನವು ಡಿಸೆಂಬರ್ 23ರಂದು ಕೊನೆಗೊಳ್ಳಲಿದೆ. ಜತೆಗೆ ಇನ್ನಿತರೆ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಮಿತಿ ರಚನೆ ಮಾಡಲಾ ಗುತ್ತಿದೆ, ಇದರಲ್ಲಿ ರೈತರ ಪ್ರತಿನಿಧಿಗಳು ಇರುತ್ತಾರೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು 2021 ರ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಲೋಕಸಭೆ ಯಲ್ಲಿ ಅಧಿವೇಶನದ ವೇಳೆ ಮಂಡಿಸಲಿದ್ದಾರೆ ಎನ್ನಲಾಗಿದೆ.

ಮೂರು ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದ್ದರೂ ಸಹ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನಿಗೆ ರೈತರ ಬೇಡಿಕೆಯ ವಿಚಾರವಾಗಿ ಸಂಸ ತ್ತಿನ ಅಧಿವೇಶನ ಬಿರುಸಿನ ಕಲಾಪವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತಮ್ಮ ಸಂಸದರಿಗೆ ಅಧಿವೇಶನದ ದಿನ ಹಾಜರಾಗುವಂತೆ ಈಗಾಗಲೇ ವಿಪ್ ಜಾರಿಗೊಳಿಸಿವೆ. ಏತನ್ಮಧ್ಯೆ, ಸಂಸತ್ತಿನ ಅಧಿವೇಶನದ ಮುನ್ನಾದಿನ ನಡೆದ ಸರ್ವಪಕ್ಷ ಸಭೆಯಲ್ಲಿ 31 ಪಕ್ಷಗಳ 42 ಸಂಸದರು ಭಾಗವಹಿಸಿದ್ದರು.

ತಿಂಗಳ ಅವಧಿಯ ಅಧಿವೇಶನದಲ್ಲಿ 26 ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ಪಟ್ಟಿ ಮಾಡಲಾಗಿದೆ. ಸಂಸತ್ತಿನ ಚಳಿ ಗಾಲದ ಅಧಿವೇಶನ ನ.29 ರಿಂದ ಡಿಸೆಂಬರ್ 23 ರ ನಡುವೆ ನಡೆಯಲಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ನೂತನ ವಿಧೇಯಕ ಮಂಡಿಸಲಿದ್ದಾರೆ.

ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಾ ಸಿಂಗ್ ಹಾಗೂ ಗ್ಯಾನೇಶ್ವರ್ ಪಾಟೀಲ್ ಸಂಸದರಾಗಿ ಪ್ರಮಾಣವಚನ ಸ್ವೀಕರಿಸ ಲಿದ್ದಾರೆ.

ಸಂಸದರಾದ ಸೆಂಗುಟ್ಟುವನ್, ಕಲ್ಯಾಣ್ ಸಿಂಗ್, ಆಸ್ಕರ್ ಫರ್ನಾಂಡಿಸ್, ಗೋಡಿಲ್ ಪ್ರಸಾದ್ ಅನುರಾಗಿ, ಶ್ಯಾಮ್‌ಸುಂದರ್ ಸೋಮಾನಿ, ಬುಧೋಲಿಯಾ, ದೇವವ್ರತ್ ಸಿಂಗ್ ಹಾಗೂ ಹರಿ ದಾನ್ವೆ ಪುಂಡ್ಲಿಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ರಾಜ್ಯಸಭೆಯಲ್ಲಿ ಇತ್ತೀಚೆಗಷ್ಟೇ ಅಗಲಿದ ಆಸ್ಕರ್ ಫರ್ನಾಂಡಿಸ್, ಕೆಬಿ ಶಾನಪ್ಪ, ಡಾ. ಚಂದನ್ ಮಿತ್ರ, ಹರಿ ಸಿಂಗ್ ನಾಲ್ವಾ, ಮೋನಿಕಾ ಹಾಗೂ ಅಬನಿರಾಯ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅಣೆಕಟ್ಟು ಸುರಕ್ಷಣಾ ಮಸೂದೆ 2019ನ್ನು ಮಂಡಿಸಲಿದ್ದಾರೆ.