Thursday, 12th December 2024

ಅಮೃತಾ ಫಡ್ನವೀಸ್ ಫೇಸ್’ಬುಕ್ ಪೇಜ್’ನಲ್ಲಿ ಅಶ್ಲೀಲ ಕಮೆಂಟ್: ಮಹಿಳೆ ಬಂಧನ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫೇಸ್ ಬುಕ್ ಪೇಜ್ ನಲ್ಲಿ ಅಶ್ಲೀಲವಾಗಿ ಕಮೆಂಟ್ ಹಾಕಿದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಮಹಿಳೆ ಸ್ಮೃತಿ ಪಾಂಚಾಲ್ ಕಳೆದ ಎರಡು ವರ್ಷಗಳಿಂದ ಅಮೃತಾ ಅವರ ಅಧಿಕೃತ ಸಾಮಾಜಿಕ ಜಾಲತಾಣದ ಪುಟದಲ್ಲಿ ಅನೇಕ ನಕಲಿ ಫೇಸ್ ಬುಕ್ ಖಾತೆ ಬಳಸಿಕೊಂಡು ಆಕ್ಷೇಪಾರ್ಹ ಕಮೆಂಟ್ ಪೋಸ್ಟ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸ್ಮೃತಿ ಪಾಂಚಾಲ್ 13 ಜಿ ಮೇಲ್ ಖಾತೆ ತೆರೆದಿದ್ದು, 53 ನಕಲಿ ಫೇಸ್ ಬುಕ್ ಐಡಿ ಹೊಂದಿರುವುದಾಗಿ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ಪಾಂಚಾಲ್ ಗೆ ಕೋರ್ಟ್ ಗುರುವಾರದವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದ್ದು, ಅಮೃತಾ ಫಡ್ನವೀಸ್ ಅವರ ವಿರುದ್ಧ ಅಶ್ಲೀಲ, ಆಕ್ಷೇಪಾರ್ಹ ಕಮೆಂಟ್ ಪೋಸ್ಟ್ ಮಾಡಿರುವ ಹಿಂದಿನ ಉದ್ದೇಶದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.