Friday, 22nd November 2024

ಡಯಾಲಿಸಿಸ್‌ಗೆಂದು ಬಂದ ಮಹಿಳಾ ರೋಗಿಗೆ ವಾರ್ಡ್‌ಬಾಯ್‌’ನಿಂದ ಅತ್ಯಾಚಾರ

ಇಂದೋರ್: ಮಧ್ಯಪ್ರದೇಶ ರಾಜ್ಯದ ಇಂದೋರ್’ನ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯ ಮೇಲೆ ವಾರ್ಡ್‌ ಬಾಯ್‌ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.

ಜುಲೈ 28ರಂದು ಮಹಾರಾಜ ಯಶ್ವಂತ್‌ರಾವ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಕಳೆದ ಸೋಮವಾರ ರಾತ್ರಿ ಪರಾರಿಯಾಗಿರುವ 32 ವರ್ಷದ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನೆರೆಯ ಧಾರ್ ಜಿಲ್ಲೆಯ ನಿವಾಸಿ ಮಹಿಳೆಯು ಜುಲೈ 28ರಂದು ಎಂವೈಎಚ್ ಆಸ್ಪತ್ರೆಗೆ ಡಾಯಲಿಸಿಸ್‌ಗೆಂದು ಬಂದಿದ್ದರು. ಈ ವೇಳೆ ವಾರ್ಡ್‌ ಬಾಯ್ ಬಟ್ಟೆ ಬದಲಾಯಿಸಲೆಂದು ಆಕೆಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆಕೆಯ ವಿರೋಧಕ್ಕೆ ಆರೋಪಿಯು ಸಾಮಾಜಿಕ ಕಳಂಕದ ಭಯವನ್ನು ಹುಟ್ಟಿಸಿದ್ದು, ದೂರು ನೀಡದಂತೆ ತಪ್ಪಿಸಲು ಆಸ್ಪತ್ರೆಯ ಖಾಸಗಿ ವಾರ್ಡ್‌ಗೆ ದಾಖಲಿಸಿದ್ದಾನೆ. ನಂತರ, 1,000 ರೂ.ಗಳನ್ನು ನೀಡಿ ಮನೆಗೆ ವಾಪಸ್ ಕಳುಹಿಸಿ ದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎರಡು ದಿನಗಳ ಬಳಿಕ ಮಹಿಳೆ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ, ಪೊಲೀಸರು ಅತ್ಯಾಚಾರದ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿ ಪತ್ತೆಗೆ ಪ್ರಯತ್ನಿಸಲಾಗು ತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.