Thursday, 12th December 2024

ಮಾಜಿ ಸಚಿವ ಪಾರ್ಥ ಚಟರ್ಜಿಯತ್ತ ಶೂ ಎಸೆದ ಮಹಿಳೆ

ಕೋಲ್ಕತ್ತ : ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳ ಗಾಗಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಯತ್ತ ಮಹಿಳೆ ಮಂಗಳವಾರ ಶೂಗಳನ್ನು ಎಸೆದಿದ್ದಾರೆ.

ಆರೋಗ್ಯ ತಪಾಸಣೆಗೆಂದು ಪಾರ್ಥ ಅವರನ್ನು ಇ.ಡಿ ಅಧಿ ಕಾರಿಗಳು ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದರು. ಈ ವೇಳೆ ಮಹಿಳೆ ತನ್ನ ಎರಡೂ ಶೂಗಳನ್ನು ಎಸೆದಿದ್ದಾರೆ.

‘ಶೂಗಳಿಂದ ಪಾರ್ಥ ಅವರಿಗೆ ಹೊಡೆಯಬೇಕೆಂದು ಆಸ್ಪತ್ರೆ ಬಳಿ ಬಂದಿದ್ದೆ. ಕೋಲ್ಕತ್ತದ ವಿವಿಧೆಡೆ ವಸತಿ ಸಮುಚ್ಚಯಗಳನ್ನು ನಿರ್ಮಿಸಿರುವ ಅವರು ಅಲ್ಲಿ ಕೋಟ್ಯಂತರ ರೂಪಾಯಿ ಬಚ್ಚಿಟ್ಟಿದ್ದಾರೆ. ಲಕ್ಷಾಂತರ ಜನ ಉದ್ಯೋಗವಿಲ್ಲದೆ ಬೀದಿ ಬೀದಿ ಅಲೆಯು ತ್ತಿರುವಾಗ, ಜನರನ್ನು ವಂಚಿಸಿರುವ ಅವರು ಈಗಲೂ ಎ.ಸಿ.ಕಾರಿನಲ್ಲೇ ಓಡಾಡುತ್ತಿದ್ದಾರೆ. ಇಂತಹವರನ್ನು ಹಗ್ಗ ಕಟ್ಟಿ ಬೀದಿ ಯಲ್ಲಿ ಎಳೆದಾಡಬೇಕು’ ಎಂದು ಅಮತಲದ ನಿವಾಸಿ ಶುಭ್ರ ಘೊರುಯಿ ಕಿಡಿಕಾರಿದ್ದಾರೆ.

ನನ್ನಂತೆ ಪಶ್ಚಿಮ ಬಂಗಾಳದ ಲಕ್ಷಾಂತರ ಮಂದಿಗೆ ಇವರ ಮೇಲೆ ಕೋಪವಿದೆ. ಶೂಗಳು ಪಾರ್ಥ ಅವರಿಗೆ ತಾಗಿದ್ದರೆ ತುಂಬಾ ಸಂತೋಷವಾಗುತ್ತಿತ್ತು. ಆ ಶೂಗಳನ್ನು ಮತ್ತೆ ಧರಿಸುವುದಿಲ್ಲ. ಬರಿಗಾಲಿನಲ್ಲೇ ಮನೆಗೆ ಹೋಗುತ್ತೇನೆ’ ಎಂದು ತಿಳಿಸಿದ್ದಾರೆ.