Sunday, 15th December 2024

ಗಾಯಕನಿಗೆ ಮುತ್ತು ಕೊಟ್ಟ ಮಹಿಳಾ ಕಾನ್ಸ್ ಟೇಬಲ್ ಅಮಾನತು

ದಿಬ್ರುಗಢ: ಬಾಲಿವುಡ್ ನ ಹಿನ್ನೆಲೆ ಗಾಯಕ ಜುಬೀನ್ ಗಾರ್ಗ್ ಸಾರ್ವಜನಿಕ ವೇದಿಕೆಯೊಂದರಲ್ಲಿ ಮುಜುಗರಕ್ಕೊಳಗಾದ ಘಟನೆ ನಡೆದಿದ್ದು, ಅವರನ್ನು ಅಪ್ಪಿಕೊಂಡು ಮುತ್ತು ಕೊಟ್ಟ ಮಹಿಳಾ ಕಾನ್ಸ್ ಟೇಬಲ್ ರನ್ನು ಅಮಾನತುಗೊಳಿಸಲಾಗಿದೆ.

ಅಸ್ಸಾಂನ ದಿಬ್ರುಗಢದಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ವಿಚಿತ್ರವಾದ ಪರಿಸ್ಥಿತಿಯನ್ನು ಜುಬೀನ್ ಗಾರ್ಗ್ ಎದುರಿಸಿದರು.

ಜುಬಾ ಐಕ್ಯ ಮಂಚಾ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಜುಬೀನ್ ಅವರನ್ನು ಮಹಿಳಾ ಕಾನ್‌ಸ್ಟೇಬಲ್ ಮಿಲಿಪರಭಾ ಚುಟಿಯಾ ವೇದಿಕೆಯ ಮೇಲೆ ಹತ್ತಿ ಬಿಗಿಯಾಗಿ ಅಪ್ಪಿಕೊಂಡು ಮುತ್ತು ನೀಡಿದರು. ಅವರ ಕಾಲಿಗೆ ಬಿದ್ದು ಮುಜುಗರವಾಗುವ ರೀತಿಯಲ್ಲಿ ವರ್ತಿಸಿದರು.

ಇಡೀ ಘಟನೆಯ ವಿಡಿಯೋ ಕ್ಯಾಮರಾದಲ್ಲಿ ದಾಖಲಾಗಿದೆ. ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ವರ್ತನೆಗಾಗಿ ಮಿಲಿಪರಾಭಾ ಚುಟಿಯಾ ವಿರುದ್ಧ ಕಠಿಣ ಕ್ರಮ ಕೈಗೊಂಡ ಅಸ್ಸಾಂ ಪೊಲೀಸರು ಅವರನ್ನು ಅಮಾನತುಗೊಳಿಸಿದ್ದಾರೆ .

ವೈರಲ್ ವೀಡಿಯೊ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಮಹಿಳಾ ಕಾನ್ಸ್ ಟೇಬಲ್ ನಡವಳಿಕೆಯಿಂದ ಅವರು ತಮ್ಮ ಪೊಲೀಸ್ ಸಮವಸ್ತ್ರವನ್ನು ಅಗೌರ ವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲವರು ಆಕೆ ಗಾಯಕನಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರೆ, ಮತ್ತೊಬ್ಬರು ‘ನೀವು ಒಂದು ನಿರ್ದಿಷ್ಟ ವೃತ್ತಿಯನ್ನು ಆರಿಸಿಕೊಂಡಾಗ ನಿಮ್ಮ ಭಾವನೆಗಳ ಮೇಲೆ ನೀವು ನಿಯಂತ್ರಣ ಹೊಂದಿರಬೇಕು.’ ಎಂದಿದ್ದಾರೆ.