Thursday, 12th December 2024

ಮಹಿಳಾ ವಿಜ್ಞಾನಿ ಯುನಿಸ್ ನ್ಯೂಟನ್ ಫೂಟ್’ಗೆ ಡೂಡಲ್‌ ಗೌರವ

ನವದೆಹಲಿ: ಮಹಿಳಾ ವಿಜ್ಞಾನಿ ಯುನಿಸ್ ನ್ಯೂಟನ್ ಫೂಟ್ ವಿಜ್ಞಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಲ್ಲದೇ ಮಹಿಳಾ ಹಕ್ಕುಗಳ ಕಾರ್ಯಕರ್ತೆಯೂ ಹೌದು.

ಇಡೀ ಪ್ರಪಂಚಕ್ಕೆ ಹಸಿರುಮನೆ ಪರಿಣಾಮವನ್ನು ಪರಿಚಯಿಸಿದ ಅಮೆರಿಕದ ವಿಜ್ಞಾನಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯುನಿಸ್ ನ್ಯೂಟನ್ ಫೂಟ್ ಅವರಿಗಿಂದು 204ನೇ ಹುಟ್ಟುಹಬ್ಬ. ಯುನಿಸ್ ಅವರು ಭೂಮಿಯ ತಾಪಮಾನ ಏರಿಕೆಗೆ ಕಾರಣವಾದ ಅನಿಲವನ್ನು ಕಂಡುಹಿಡಿದ ಮೊದಲ ವ್ಯಕ್ತಿಯಾಗಿದ್ದಾರೆ.

ಜುಲೈ 17, 1819ರಲ್ಲಿ ಅಮೆರಿಕದ ಕನೆಕ್ಟಿಕಟ್‌ನಲ್ಲಿ ಜನಿಸಿದ ಇವರು ಟ್ರಾಯ್ ಫೀಮೇಲ್ ಸೆಮಿನರಿಯಲ್ಲಿ ವ್ಯಾಸಂಗ ಮಾಡಿದರು. ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಫೂಟ್, ಛಲ ಬಿಡದೆ ತನ್ನದೇ ಆದ ಪ್ರಯೋಗಗಳನ್ನು ನಡೆಸುತ್ತಿದ್ದರು. 1856ರಲ್ಲಿ ಇವರು ನಡೆಸಿದ ಪ್ರಯೋಗವೊಂದು ಜಗತ್ತಿಗೆ ಹವಾಮಾನ ಬದಲಾವಣೆಯ ಕುರಿತು ತಿಳುವಳಿಕೆ ನೀಡಿತು.

ಫೂಟ್​ ಅವರು ಮೊದಲ ಬಾರಿಗೆ ಒಂದು ವಿಶೇಷ ಪ್ರಯೋಗ ವನ್ನು ಭೂಮಿಯ ತಾಪಾ ಮಾನದ ಕುರಿತು ನಡೆಸುತ್ತಾರೆ. ಆದ್ದರಿಂದ, ಕಾರ್ಬನ್ ಡೈ ಆಕ್ಸೈಡ್ ಮಟ್ಟಗಳು ಮತ್ತು ವಾತಾವರಣದ ಉಷ್ಣತೆಯ ನಡುವಿನ ಸಂಪರ್ಕವನ್ನು ಕಂಡುಹಿಡಿದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಫೂಟ್ ಪಾತ್ರರಾದರು.

ಈಕೆ ಕೇವಲ ವಿಜ್ಞಾನಿಯಲ್ಲ. ಸಮಾಜದಲ್ಲಿ ಮಹಿಳೆಯರಿಗೂ ಅವರ ಹಕ್ಕಿಗಾಗಿ ಹೋರಾಡಿದವರು. 1848 ರಲ್ಲಿ, ಫುಟ್ ಸೆನೆಕಾ ಫಾಲ್ಸ್‌ನಲ್ಲಿ ನಡೆದ ಮೊದಲ ಮಹಿಳಾ ಹಕ್ಕುಗಳ ಸಮಾವೇಶದಲ್ಲಿ ಸಂಪಾದಕೀಯ ಸಮಿತಿಯ ಸದಸ್ಯರಾಗಿ ಭಾಗವಹಿಸಿದರು. ಮಹಿಳೆಯರ ಭಾವನೆಗಳ ಘೋಷಣೆಯ ಹಕ್ಕುಗಳಿಗಾಗಿ ತಮ್ಮ 5 ನೇ ಸಹಿ ಹಾಕಿದರು.