Saturday, 14th December 2024

ಟ್ರಕ್-ಕಾರಿನ ನಡುವೆ ಅಪಘಾತ: ಮಹಿಳೆಯರ ಸಜೀವ ದಹನ

ರಾಜ್‌ಕೋಟ್: ಗುಜರಾತ್ ನ ರಾಜ್’ಕೋಟ್’ನಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ ಮೂವರು ಮಹಿಳೆಯರ ಸಜೀವ ದಹನಗೊಂಡಿದ್ದಾರೆ.

ರಾಜ್​ಕೋಟ್​ನ ಬಿಳಿಯಾಲಾ ಬಳಿ ಅವಘಡ ಸಂಭವಿಸಿದ್ದು, ಮೃತರನ್ನು ಗೊಂಡಾಲ್‌ ತಾಲೂಕಿನ ನಿವಾಸಿಗಳೆಂದು ಗುರುತಿಸ ಲಾಗಿದೆ. ಟ್ರಕ್​ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಲುಪಿ ಬೆಂಕಿ ನಂದಿಸಿದ್ದು, ರಸ್ತೆಯನ್ನು ಸಂಚಾರ ಮುಕ್ತ ಮಾಡಿದ್ದಾರೆ.