Sunday, 15th December 2024

ಮಹಿಳೆಯರು ಹೆಚ್ಚು ಗಂಡಂದಿರನ್ನು ಹೊಂದುವ ಹಕ್ಕನ್ನು ಹೊಂದಿರಬೇಕು: ಜಾವೇದ್

ವದೆಹಲಿ: ಗೀತರಚನೆಕಾರ ಜಾವೇದ್ ಅಖ್ತರ್ ತಮ್ಮ ಹಾಡುಗಳು ಮತ್ತು ಗಜಲ್ ಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಇದೀಗ ‘ಮುಸ್ಲಿಂ ವೈಯಕ್ತಿಕ ಕಾನೂನು’ ಕುರಿತು ಮಾತನಾಡಿದ್ದಾರೆ.

ಜಾವೇದ್ ಅಖ್ತರ್ ಮುಸ್ಲಿಂ ವೈಯಕ್ತಿಕ ಕಾನೂನು ತಪ್ಪು ಎಂದು ಹೇಳಿದ್ದು, ‘ಮುಸ್ಲಿಂ ಗಂಡಂದಿರಿಗೆ ನಾಲ್ವರನ್ನು ಮದುವೆ ಯಾಗುವ ಹಕ್ಕಿದ್ದರೆ, ಮಹಿಳೆಯರು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದುವ ಹಕ್ಕನ್ನು ಹೊಂದಿರಬೇಕು. ಗಂಡನಿಗೆ ಒಂದಕ್ಕಿಂತ ಹೆಚ್ಚು ಹೆಂಡತಿಯರಿದ್ದಾರೆ ಎಂಬ ಒಂದೇ ಕಾರಣಕ್ಕೆ ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆ ಇಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗುವುದು ದೇಶದ ಕಾನೂನುಗಳು ಮತ್ತು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.