Thursday, 12th December 2024

ಕುಸ್ತಿಪಟು ಖಾಶಾಬಾ ದಾದಾಸಾಹೇಬ್ ಜಾಧವ್’ಗೆ ವಿಶೇಷ ಡೂಡಲ್ ಗೌರವ

ನವದೆಹಲಿ: ಭಾರತದ ಸಾರ್ವಕಾಲಿಕ ಶ್ರೇಷ್ಠ ಕುಸ್ತಿಪಟು ಖಾಶಾಬಾ ದಾದಾಸಾಹೇಬ್ ಜಾಧವ್ ಅವರ 97ನೇ ಜಯಂತಿಗೆ ಗೂಗಲ್, ವಿಶೇಷ ಡೂಡಲ್  ಪ್ರದರ್ಶಿಸುವ ಮೂಲಕ ಗೌರವ ಸಲ್ಲಿಸಿದೆ.

1952ರ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ, ಈ ಸಾಧನೆ ಮೆರೆದ ಭಾರತದ ಮೊದಲ ಅಥ್ಲಿಟ್ ಎಂಬ ಕೀರ್ತಿಗೆ ಪಾತ್ರ ರಾಗಿದ್ದಾರೆ. ತನ್ನ ಎದುರಾಳಿಯನ್ನು ಆಕ್ರಮಣ ಮಾಡಲು ಸಿದ್ಧವಾಗು ತ್ತಿರುವುದನ್ನು ತೋರಿಸುವ ಜಾಧವ್ ಅವರ ಡೂಡಲ್ ಅನ್ನು ಗೂಗಲ್ ತನ್ನ ಮುಖಪುಟದಲ್ಲಿ ಪ್ರದರ್ಶಿಸಿದೆ.

ಕುಸ್ತಿಪಟು ಖಾಶಬಾ ದಾದಾಶೇಬ್ ಜಾಧವ್ ಅವರು ಮಹಾರಾಷ್ಟ್ರದ ಗೋಲೇಶ್ವರ ಗ್ರಾಮದಲ್ಲಿ 1926ರಲ್ಲಿ ಜನವರಿ 15ರಂದು ಜನಿಸಿದರು. ಇವರ ತಂದೆ ಕೂಡ ಕುಸ್ತಿಪಟು.

5.5 ಅಡಿಯಷ್ಟೇ ಇದ್ದ ಖಾಸಾಬಾ ಅವರು, ಕೌಶಲ್ಯಪೂರ್ಣ ವಿಧಾನ ಮತ್ತು ಹಗುರವಾದ ಪಾದಗಳಿಂದಾಗಿ ಅವರು ತಮ್ಮ ಪ್ರೌಢಶಾಲೆಯಲ್ಲಿ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. ವಿಶೇಷವಾಗಿ ಧಕ್-ಎ ಕುಸ್ತಿಯ ಚಲನೆಗಳಲ್ಲಿ ಅವರು ನಿಷ್ಣಾತರಾಗಿದ್ದರು.