Saturday, 23rd November 2024

ಕೇರಳದ ಐವರು ಆರೆಸ್ಸೆಸ್ ನಾಯಕರಿಗೆ ವೈ ಕೆಟಗರಿ ಭದ್ರತೆ

ನವದೆಹಲಿ: ಕೇಂದ್ರ ಸರಕಾರವು ಕೇರಳದ ಐದು ಮಂದಿ ಆರೆಸ್ಸೆಸ್ ನಾಯಕರಿಗಿರಬಹು ದಾದ ಸಂಭಾವ್ಯ ಬೆದರಿಕೆಗಳ ಹಿನ್ನೆಲೆ ಯಲ್ಲಿ ಅವರಿಗೆ ವೈ ಕೆಟಗರಿ ಭದ್ರತೆಯನ್ನು ಒದಗಿಸಿದೆ.

ನಿಷೇಧಕ್ಕೊಳಗಾದ ಪಿಎಫ್‍ಐ ಕಚೇರಿಗಳ ಮೇಲೆ ನಡೆದ ದಾಳಿ ವೇಳೆ ದೊರೆತ ದಾಖಲೆ ಗಳ ಆಧಾರದಲ್ಲಿ ಈ ಐದು ಮಂದಿ ನಾಯಕರ ಮೇಲೆ ಪಿಎಫ್‍ಐ ಕಣ್ಣಿಟ್ಟಿತ್ತು ಎಂಬ ಮಾಹಿತಿಯ ಆಧಾರದಲ್ಲಿ ಅವರಿಗೆ ಭದ್ರತೆ ಒದಗಿಸಲಾಗಿದೆ ಎನ್ನಲಾಗಿದೆ.

ನಾಯಕರಿಗೆ ಭದ್ರತೆ ಒದಗಿಸುವ ಕೆಲಸವನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಐಪಿ ಭದ್ರತಾ ಘಟಕಕ್ಕೆ ವಹಿಸಲಾಗಿದೆ.

ಐವರಲ್ಲಿ ಪ್ರತಿಯೊಬ್ಬರಿಗೆ ಇಬ್ಬರಿಂದ ಮೂವರು ಶಸ್ತ್ರಸಜ್ಜಿತ ಕಮಾಂಡೋಗಳು ರಕ್ಷಣೆ ಒದಗಿಸಲಿದ್ದಾರೆ ಎನ್ನಲಾಗಿದೆ.

ಬಿಹಾರದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಭಾರೀ ಪ್ರತಿಭಟನೆಗಳ ಬಳಿಕ ಬಿಹಾರ ಬಿಜೆಪಿ ಅಧ್ಯಕ್ಷ ಹಾಗೂ ಪಶ್ಚಿಮ ಚಂಪಾರಣ್ ಸದಸ್ಯ ಸಂಜಯ್ ಜೈಸ್ವಾಲ್ ಅವರಿಗೂ ಇದೇ ರೀತಿ ಭದ್ರತೆ ಒದಗಿಸಲಾಗಿತ್ತು.